ದೈಹಿಕ, ಮಾನಸಿಕ ಆರೋಗ್ಯಕ್ಕೆ ವ್ಯಸನ ಮಾರಕ: ಪರಶುರಾಮ ಸತ್ತಿಗೇರಿ

KannadaprabhaNewsNetwork |  
Published : Aug 03, 2025, 11:45 PM IST
3ಕೆಎಂಎನ್ ಡಿ12 | Kannada Prabha

ಸಾರಾಂಶ

ವ್ಯಸನ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಇದರಿಂದ ಒತ್ತಡದ ಸಂಬಂಧಗಳು ಮತ್ತು ಆರ್ಥಿಕ ನಾಶಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ವ್ಯಸನವನ್ನು ಎದುರಿಸಲು ಜಾಗೃತಿ ಮೂಡಿಸುವುದು ಮೊದಲ ಹೆಜ್ಜೆಯಾಗಬೇಕು. ಜನರು ಇನ್ನೂ ವ್ಯಸನವನ್ನು ವೈದ್ಯಕೀಯ ಸ್ಥಿತಿಗಿಂತ ನೈತಿಕ ವಿಫಲತೆಯನ್ನು ಎದುರು ನೋಡುತ್ತಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ವ್ಯಸನವು ಒಂದು ಸಂಕೀರ್ಣ ಮತ್ತು ಬಹುಮುಖಿ ಸಮಸ್ಯೆ. ಅದು ಜಾಗತೀಕವಾಗಿ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಶುಕ್ರವಾರ ಹೇಳಿದರು. ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತಾಲೂಕು ಆಡಳಿತ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ವ್ಯಸನ ಮುಕ್ತ ಆಂದೋಲನದ ಹರಿಕಾರ ಡಾ.ಮಹಾಂತ ಶಿವಯೋಗಿ ಅವರ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಸನ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಇದರಿಂದ ಒತ್ತಡದ ಸಂಬಂಧಗಳು ಮತ್ತು ಆರ್ಥಿಕ ನಾಶಕ್ಕೆ ಕಾರಣವಾಗುತ್ತಿದೆ. ರಾಜ್ಯದಲ್ಲಿ ವ್ಯಸನವನ್ನು ಎದುರಿಸಲು ಜಾಗೃತಿ ಮೂಡಿಸುವುದು ಮೊದಲ ಹೆಜ್ಜೆಯಾಗಬೇಕು. ಜನರು ಇನ್ನೂ ವ್ಯಸನವನ್ನು ವೈದ್ಯಕೀಯ ಸ್ಥಿತಿಗಿಂತ ನೈತಿಕ ವಿಫಲತೆಯನ್ನು ಎದುರು ನೋಡುತ್ತಾರೆ. ಯುವಜನತೆ ಮತ್ತು ಸಾರ್ವಜನಿಕರು ವ್ಯಸನಗಳಿಂದ ಮುಕ್ತರಾಗಲು ವ್ಯಸನ ಮುಕ್ತ ದಿನಾಚರಣೆ ಪ್ರೇರಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಇಲಾಖೆ ಮಾನಸಿಕ ರೋಗ ವಿಭಾಗದ ಮನೋಶಾಸ್ತ್ರ ತಜ್ಞರಾದ ಮಹಮ್ಮದ್ ಸುಹೇಲ್ ಉಪನ್ಯಾಸ ನೀಡಿ, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳ ದಾಸರಾಗಿ ತಮಗೆ ಅರಿವಿಲ್ಲದಂತೆಯೇ ತಮ್ಮ ಬದುಕಲು ನಾಶ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ದುರಂತವಾಗಿದೆ ಎಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎನ್. ನಾಗರಾಜು, ತಾಪಂ ಲೆಕ್ಕ ಪರಿಶೋಧಕ ಗಂಗರಾಜು, ಪ್ರಾಂಶುಪಾಲರಾದ ನಾರಾಯಣ್, ಕೆಂಪಮ್ಮ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಶಿರಸ್ತೇದಾರ್ ಲಕ್ಷ್ಮಿ ನರಸಿಂಹ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ