ಅಂಚೆ ಸಿಬ್ಬಂದಿ ಕೊರತೆ, ತಾಂತ್ರಿಕ ಅಡಚಣೆ, ಕೆಲಸದ ಒತ್ತಡ ಪರಿಹರಿಸಿ: ಸಂಘದ ಅಧ್ಯಕ್ಷ ಪ್ರಕಾಶ್

KannadaprabhaNewsNetwork |  
Published : Nov 03, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ತುಮಕೂರು ವಿಭಾಗದ ಪೋಸ್ಟ್ ಮನ್ ವಿಭಾಗದ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಎಂ.ಡಿ, ಗ್ರೋಪ್ ಸಿ ವಿಭಾಗದ ಅಧ್ಯಕ್ಷ ನರಸಿಂಹಯ್ಯ ಅವರ ನೇತೃತ್ವದಲ್ಲಿ ಅಧಿವೇಶನ ನಡೆಯಿತು. ಸರ್ಕಲ್ ಪದಾಧಿಕಾರಿಗಳಾದ ಕೃಷ್ಣಮೂರ್ತಿ ವಿ. ಮತ್ತು ರಾಘವೇಂದ್ರ ಹವಾಲೇರ್ ಅವರು ಸಂಘಟನೆಯ ಸಾಂಸ್ಥಿಕ ಚರ್ಚೆಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಅಖಿಲ ಭಾರತ ಅಂಚೆ ನೌಕರರ ಸಂಘದ ವಿಭಾಗೀಯ ಮಹಾಧಿವೇಶನ ನಗರದಲ್ಲಿ ನಡೆದು ಅಂಚೆ ಇಲಾಖೆ ನೌಕರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಭಾಭವನದಲ್ಲಿ ನಡೆದ ಅಧಿವೇಶದಲ್ಲಿ ಅಂಚೆ ಕಚೇರಿಗಳಲ್ಲಿನ ಸಿಬ್ಬಂದಿ ಕೊರತೆ, ಕಳೆದ 5 ವರ್ಷಗಳಿಂದ ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳ ಎಎಮ್ ಸ್ಥಗಿತಗೊಂಡಿರುವುದರಿಂದ ಉಂಟಾಗಿರುವ ತಾಂತ್ರಿಕ ಅಡಚಣೆಗಳು, ಸಿಸ್ಟಮ್ ಅಡ್ಮಿನಿಸ್ಟ್ರೇಟರ್‌ಗಳ ಅಲಭ್ಯತೆ, ಡೇ-ಒನ್ ಡೆಲಿವರಿ ಹಾಗೂ ಮೊಬೈಲ್ ಆಪ್ ಅಪ್ಲೇಟ್‌ಗಳ ಹೆಸರಿನಲ್ಲಿ ನೌಕರರ ಮೇಲೆ ಹೇರಲಾಗುತ್ತಿರುವ ಅತಿಯಾದ ಕೆಲಸದ ಒತ್ತಡದ ಬಗ್ಗೆ ಮಹಾಧಿವೇಶನದಲ್ಲಿ ಪರಾಮರ್ಶಿಸಲಾಯಿತು. ಅಂಚೆ ಕಚೇರಿ ಕಟ್ಟಡಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ತುಮಕೂರು ಪಿ.ಓ.ಪಿ.ಎಸ್.ಕೆ ಕೇಂದ್ರದಲ್ಲಿ ಹೆಚ್ಚಿರುವ ತೀವ್ರ ಕೆಲಸದ ಒತ್ತಡ ಮತ್ತು ತುಮಕೂರು ವಿಭಾಗಕ್ಕೆ ಸಿ.ಜಿ.ಎಚ್.ಎಸ್. ವೆಲ್ಲೆಸ್ ಸೆಂಟರ್ ಸ್ಥಾಪನೆ ಅಗತ್ಯ ಕುರಿತು ಸುದೀರ್ಘವಾಗಿ ಚರ್ಚಿಸಿ, ಆಡಳಿತ ಮಂಡಳಿಯ ಮುಂದೆ ಇವುಗಳ ಶೀಘ್ರ ಪರಿಹಾರಕ್ಕಾಗಿ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.

ತುಮಕೂರು ವಿಭಾಗದ ಪೋಸ್ಟ್ ಮನ್ ವಿಭಾಗದ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಎಂ.ಡಿ, ಗ್ರೋಪ್ ಸಿ ವಿಭಾಗದ ಅಧ್ಯಕ್ಷ ನರಸಿಂಹಯ್ಯ ಅವರ ನೇತೃತ್ವದಲ್ಲಿ ಅಧಿವೇಶನ ನಡೆಯಿತು. ಸರ್ಕಲ್ ಪದಾಧಿಕಾರಿಗಳಾದ ಕೃಷ್ಣಮೂರ್ತಿ ವಿ. ಮತ್ತು ರಾಘವೇಂದ್ರ ಹವಾಲೇರ್ ಅವರು ಸಂಘಟನೆಯ ಸಾಂಸ್ಥಿಕ ಚರ್ಚೆಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

ಅಂಚೆ ಇಲಾಖೆಯ ಆಡಳಿತ ವಿಭಾಗದ ಪರವಾಗಿ ವಿಭಾಗೀಯ ಸೂಪರಿಂಟೆಂಡೆಂಟ್ ದಯಾನಂದ ಎಚ್.ಆರ್. ಹಾಗೂ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಗಂಗಪ್ಪ, ಎಸ್.ಎಸ್. ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು. ಸಭೆಗಳಲ್ಲಿ ಸದಸ್ಯರು ಪಾಲ್ಗೊಂಡು ರಚನಾತ್ಮಕ ಚರ್ಚೆ ಮಾಡಿ ನಮ್ಮ ಚಳವಳಿಗೆ ಹೊಸ ಶಕ್ತಿ ತುಂಬಬೇಕು ಎಂದು ಸಲಹೆ ಮಾಡಿದರು. ನೂರಾರು ಅಂಚೆ ನೌಕರರು ಅಧಿವೇಶನದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ