ಮಕ್ಕಳಲ್ಲಿ ಸಂಸ್ಕಾರದ ಕೊರತೆ ನೀಗಿಸಿ

KannadaprabhaNewsNetwork |  
Published : Jan 31, 2026, 01:15 AM IST
 ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಶತಮನೋತ್ಸವ ಕಾರ್ಯಕ್ರಮವನ್ನು ತುಮಕೂರು ರಾಮಕೃಷ್ಣ  ಮಠದ ಶ್ರೀ ವೀರೇಶಾನಂದ ಸರಸ್ವತಿ  ಸ್ವಾಮಿಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ ಆದರೆ ಸಂಸ್ಕಾರದ ಕೊರತೆ ಇದೆ. ಇದನ್ನು ಪಠ್ಯಪುಸ್ತಕದ ಮೂಲಕ ಕಲಿಸಲು ಸಾಧ್ಯವಿಲ್ಲ, ಬದಲಾಗಿ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅದನ್ನು ತಮ್ಮ ದೈನಂದಿನ ನಡೆ ನುಡಿಗಳಲ್ಲಿ ಪಾಲನೆ ಮಾಡಿದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಎಂದು ತುಮಕೂರು ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ ಆದರೆ ಸಂಸ್ಕಾರದ ಕೊರತೆ ಇದೆ. ಇದನ್ನು ಪಠ್ಯಪುಸ್ತಕದ ಮೂಲಕ ಕಲಿಸಲು ಸಾಧ್ಯವಿಲ್ಲ, ಬದಲಾಗಿ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅದನ್ನು ತಮ್ಮ ದೈನಂದಿನ ನಡೆ ನುಡಿಗಳಲ್ಲಿ ಪಾಲನೆ ಮಾಡಿದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ ಎಂದು ತುಮಕೂರು ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ತಿಳಿಸಿದರು.ಗುಬ್ಬಿ ತಾಲೂಕಿನ ತ್ಯಾಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶತಮನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಭಾವನೆಗಳು ವಿಕಾಸಗೊಳಬೇಕು. ನಮ್ಮ ನಡೆ ನುಡಿಯಲ್ಲಿ ಅಂತರ ಕಡಿಮೆಯಾಗಬೇಕು. ಅವಾಗ ಮನುಷ್ಯ ತನ್ನ ದಾರಿಗೆ ಬಂದು ಸುಂದರವಾದ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂದರು. ಮುಖಂಡ ಟಿ.ಎಸ್.ಕಿಡಿಗಣ್ಣಪ್ಪ ಮಾತನಾಡಿ ತಂದೆ ತಾಯಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಕಡೆ ಗಮನ ಹರಿಸಬೇಕು. ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು. ಯಾವ ಮಕ್ಕಳು ಕೂಡ ಶಿಕ್ಷಣ ಹಾಗೂ ಕಲಿಕೆಯಿಂದ ಹಿಂದುಳಿಯಬಾರದು ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷಣವನ್ನು ಕೊಟ್ಟು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳಿಗೆ ಊರಿನ ಗ್ರಾಮಸ್ಥರು ಹೆಚ್ಚು ಭಾಗವಹಿಸಬೇಕು.ಸ್ವಾಮೀಜಿಗಳ ಭಾಷಣದಿಂದ ಮಕ್ಕಳಿಗೆ ಸಂಸ್ಕಾರದ ಬಗ್ಗೆ ಅರಿವು ಮೂಡುತ್ತದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಹಿಂದೂಳಿದ ಆಯೋಗದ ಮಾಜಿ ಸದಸ್ಯ ಟಿ.ವೈ.ಯೋಗಾನಂದ್ ಕುಮಾರ್ , ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕಾರ್ ಪ್ರಸಾದ್ , ಶಿವಕುಮಾರಸ್ವಾಮಿ , ನಟರಾಜು , ಎಸ್ ಡಿ ಎಂ‌ಸಿ ಅಧ್ಯಕ್ಷ ದಯಾನಂದ್ ಮುಖ್ಯ ಶಿಕ್ಷಕ ಲೋಕೇಶ್ ,ಇಂದ್ರಾಣಿ , ವಿಎಸ್ ಎಸ್ ಎನ್ ಅಧ್ಯಕ್ಷ ಚಿದಾನಂದ್ ಹಾಗೂ ಶಿಕ್ಷಕರು ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳಮೀಸಲಾತಿಗೆ ಬಂಜಾರ ಸಮಾಜದ ವಿರೋಧ
ಜಿಲ್ಲೆಗೆ ಒಲಿದುಬಂದ 17ಕ್ಕೂ ಅಧಿಕ ಕೊಡುಗೆಗಳು