ಸಂಪ್ರದಾಯ ಪಾಲನೆ ಕೊಡವ ಸಂಸ್ಕೃತಿ: ಎನ್.ಯು.ನಾಚಪ್ಪ

KannadaprabhaNewsNetwork |  
Published : Oct 20, 2026, 02:00 AM IST
ಚಿತ್ರ : 19ಎಂಡಿಕೆ4 : ಸಿಎನ್‌ಸಿ ಸ್ಮರಣೆ. | Kannada Prabha

ಸಾರಾಂಶ

ಪವಿತ್ರ ಕಾವೇರಿ ತೀರ್ಥೋದ್ಭವದ ಮರುದಿನವಾದ ಭಾನುವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬ್ ಹತ್ಯಾಕಾಂಡ ಸ್ಮಾರಕ ಸ್ಥಳದಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಾಂಪ್ರದಾಯಿಕ ಆಚರಣೆಯ ಮೂಲಕ ಹಿರಿಯರನ್ನು ಸ್ಮರಿಸಿತು.

ಮಡಿಕೇರಿ : ಪವಿತ್ರ ಕಾವೇರಿ ತೀರ್ಥೋದ್ಭವದ ಮರುದಿನವಾದ ಭಾನುವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬ್ ಹತ್ಯಾಕಾಂಡ ಸ್ಮಾರಕ ಸ್ಥಳದಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಾಂಪ್ರದಾಯಿಕ ಆಚರಣೆಯ ಮೂಲಕ ಹಿರಿಯರನ್ನು ಸ್ಮರಿಸಿತು.

ದೇವಟ್ ಪರಂಬ್ ದುರಂತದಲ್ಲಿ ಹತ್ಯೆಗೀಡಾದ ಸಾವಿರಾರು ಕೊಡವರ ಆತ್ಮಗಳಿಗೆ ಪವಿತ್ರ ಕಾವೇರಿ ತೀರ್ಥವನ್ನು ಸಿಂಪಡಿಸಿ ಪ್ರಾರ್ಥನೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರಲ್ಲಿ ಅನಾದಿ ಕಾಲದಿಂದಲೂ ಬೊತ್ತ್ ಬಳ್ಳಿ ಸುತ್ತಿದ ಕೋಲುಗಳನ್ನು ಗದ್ದೆ, ಬೋಟಿ ಕಾಲ, ದನದ ಕೊಟ್ಟಿಗೆ, ಸಗಣಿ ಗುಂಡಿ, ಬಾವಿ ಹಾಗೂ ಮನೆ ಬಾಗಿಲುಗಳಲ್ಲಿ ನೆಡುವ ಸಂಪ್ರದಾಯವಿದೆ. ಕಾವೇರಿ ತುಲಾ ಸಂಕ್ರಮಣದ ಅಂಗವಾಗಿ ಆಚರಿಸಲಾಗುವ ಈ ಸಂಪ್ರದಾಯವು ಕೊಡವರ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ ಎಂದರು.

ದೇವಟ್ ಪರಂಬ್ ಕೊಡವರ ಪಾಲಿಗೆ ಐತಿಹಾಸಿಕ ಮಹತ್ವವುಳ್ಳ ಪವಿತ್ರ ಸ್ಥಳವಾಗಿದ್ದು, ತಲಕಾವೇರಿಗೆ ಯಾತ್ರೆ ಕೈಗೊಳ್ಳುವ ಕೊಡವರು ಈ ಸ್ಥಳದಲ್ಲಿ ಹಸಿರು ಎಲೆಗಳನ್ನು ಅರ್ಪಿಸಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ಸ್ಥಳವನ್ನು ಕುರುಕ್ಷೇತ್ರ, ಕಳಿಂಗ ಮತ್ತು ಆಕ್ಟಿಯಂ ಯುದ್ಧಭೂಮಿಗಳಿಗೆ ಸಮಾನವಾದ ಪವಿತ್ರ ದೇಶ ಮಂದ್ ಎಂದು ಬಣ್ಣಿಸಿದರು.ಅವರು ಕೊಡವರ ಹಕ್ಕುಗಳು, ಭಾಷೆ, ಸಂಸ್ಕೃತಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ 11 ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ: ಆರನೇ ವರ್ಷದ ಸಾರ್ವಜನಿಕ ಆಯುಧಪೂಜೆ ಇಂದು
ಮೈಸೂರು ಕೊಡಗು ಗೌಡ ಸಮಾಜ ಕಾವೇರಿ ತೀರ್ಥ ವಿತರಣೆ