ಕನ್ನಡಪ್ರಭ ವಾರ್ತೆ ಗುಬ್ಬಿ
ಕಲ್ಲೂರು ಗ್ರಾಮದ ಪ್ರಗತಿ ಭವನದ ಆವರಣದಲ್ಲಿ ಏರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 800 ವರ್ಷಗಳ ಇತಿಹಾಸವಿದ್ದು ಗ್ರಾಮದ ಶಕ್ತಿ ದೇವತೆ ಆದುದರಿಂದ ಈ ಜಾತ್ರೆಗೆ ತಾಲೂಕು ಹಾಗೂ ರಾಜ್ಯದಿಂದ ಭಕ್ತಾದಿಗಳು ಬರುವುದರಿಂದ ತೊಂದರೆಯಾಗದಂತೆ ಬಸ್ಸು, ಕುಡಿಯಲು ನೀರು,ವ್ಯ ವಸ್ಥೆ ಮಾಡಲಾಗಿದೆ ಆದ್ದರಿಂದ 18 ಕೋಮಿನ ಜನರು ಸಹಕರಿಸಬೇಕೆಂದು ತಿಳಿಸಿದರು.
ಗುಡಿಗೌಡರಾದ ಗೋವಿಂದಯ್ಯ ಮಾತನಾಡಿ ಗ್ರಾಮದ ಒಳಿತಿಗಾಗಿ ನೆಡೆಸಿಕೊಂಡು ಬರುತ್ತಿರುವ ಜಾತ್ರಾ ಮಹೋತ್ಸವಕ್ಕೆ ಎಲ್ಲರೂ ಸಹ ಸಹಕಾರ ನೀಡುವಂತೆ ಮನವಿ ಮಾಡಿದರು. ಸಿ. ಎಸ್. ಪುರ ಠಾಣೆ ಯ ಪಿ ಎಸ್ ಐ ಧರ್ಮಾಂಜಿ ಮಾತನಾಡಿ, ಧಾರ್ಮಿಕ ಆಚರಣೆ ನಮ್ಮ ಸಂಸ್ಕೃತಿಯಾಗಿದೆ. ಜಾತ್ರಾ ಸಮಯದಲ್ಲಿ ಎಲ್ಲರೂ ಭಾಗಿಯಾಗಬೇಕು. ಜಾತ್ರೆ ಯ ನೆಪದಲ್ಲಿ ಜೂಜು ಇನ್ನೀತರೆ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ದೇವರ ಉತ್ಸವದ ವೇಳೆಯಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿರುತ್ತದೆ. ಮೆರವಣಿಗೆ ಪ್ರಾರಂಭದಿಂದ ದೇವರು ದೇವಾಲಯದ ಪ್ರವೇಶ ದ ಸಂದರ್ಭದಲ್ಲಿ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗುವುದು.ಈ ಸಭೆಯಲ್ಲಿ ಎ. ಎಸ್.ಐ. ರವಿಕುಮಾರ್, ಮುಖಂಡರಾದ ಮಹಮದ್ ಯೂಸುಫ್, ರಾಜೇಗೌಡ, ಸದಯ್ಯ, ರಾಜಣ್ಣ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ರಾದ ಧನರಾಜ್, ರಾಜೇಶ್, ಅನಂತರಾಮಯ್ಯ, ಸಂತೋಷ, ಸಂಜೀವ ಮೂರ್ತಿ, ಸತೀಶ್, ವೇಣು, ಶಿವು, ಚಿದನಂದ್, ನಾರಾಯಣ್ ಗ್ರಾಮಸ್ಥರು ಹಾಜರಿದ್ದರು.