ದಂಡು ಮಂಡಳಿ ಸಭೆ ಜು.13ಕ್ಕೆ ಮುಂದೂಡಿಕೆ

KannadaprabhaNewsNetwork |  
Published : Jul 08, 2024, 12:45 AM IST
ಅಅಅಅ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯ ವಸತಿ ಪ್ರದೇಶಗಳನ್ನು ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಸಂಬಂಧ ನಡೆದ ಸಭೆ ಜುಲೈ 13ಕ್ಕೆ ಮುಂದೂಡಲಾಗಿದೆ. ನಗರದ ದಂಡು ಮಂಡಳಿಯ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಪಾಲಿಕೆ ವ್ಯಾಪ್ತಿಗೆ ಹಸ್ತಾಂತರಿಸಲು ನಿರ್ಧರಿಸುವ 112 ಎಕರೆ 32 ಗುಂಟೆ ದಂಡು ಮಂಡಳಿಯ ಜಾಗವನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಈ ಸಭೆಯನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದಂಡು ಮಂಡಳಿ ವ್ಯಾಪ್ತಿಯ ವಸತಿ ಪ್ರದೇಶಗಳನ್ನು ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಸಂಬಂಧ ನಡೆದ ಸಭೆ ಜುಲೈ 13ಕ್ಕೆ ಮುಂದೂಡಲಾಗಿದೆ.

ನಗರದ ದಂಡು ಮಂಡಳಿಯ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಪಾಲಿಕೆ ವ್ಯಾಪ್ತಿಗೆ ಹಸ್ತಾಂತರಿಸಲು ನಿರ್ಧರಿಸುವ 112 ಎಕರೆ 32 ಗುಂಟೆ ದಂಡು ಮಂಡಳಿಯ ಜಾಗವನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ದಂಡು ಮಂಡಳಿ ವ್ಯಾಪ್ತಿಯಲ್ಲಿರುವ ಮಾರ್ಕೆಟ್ ಪ್ರದೇಶ, ಜನ ವಸತಿ ಪ್ರದೇಶವನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಕುರಿತು ನಡೆದ ಸಭೆಯನ್ನು ನಿಗದಿಪಡಿಸಿ ಒಂದು ದಿನ ಮುಂಚಿತವಾಗಿ ಸಭೆ ಇರುವ ಕುರಿತು ನೋಟಿಸ್‌ ನೀಡಿರುವ ಅಧಿಕಾರಿಗಳ ನಡೆಗೆ ಸಂಸದ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು.ಈ ರೀತಿ ತರಾತುರಿಯಲ್ಲಿ ಸಭೆ ಆಯೋಜಿಸಿದ್ದರೆ ಹೇಗೆ? ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಅಗತ್ಯ ಇದೆ. ದಂಡು ಮಂಡಳಿಯ ಅಧಿಕಾರಿಗಳು ಸಭೆ ಇದೆ ಎಂದು ನಮಗೆ ನೋಟಿಸ್ ನೀಡಿದ್ದಾರೆ‌. ಜನರ ಅಭಿಪ್ರಾಯ ಸಂಗ್ರಹಿಸುವುದು ಹೇಗೆ ಸಾಧ್ಯ. ಆದ್ದರಿಂದ ಸಭೆಯನ್ನು ಜು.13ಕ್ಕೆ ನಿಗದಿ ಮಾಡಿ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಂಡು ಮಂಡಳಿಯ ಬ್ರಿಗೇಡಿಯರ, ಅಧ್ಯಕ್ಷ ಜಯದೀಪ ಮುಖರ್ಜಿ ಮಾತನಾಡಿ, ಕೇಂದ್ರ ಸಚಿವಾಲಯದಿಂದ ನಮಗೆ ಸಭೆ ನಡೆಸಲು ನೋಟಿಸ್ ಬಂದಿದ್ದು, ಸಭೆ ನಡೆಸುತ್ತೇವೆ. ಜನಪ್ರತಿನಿಧಿಗಳ ಆಕ್ಷೇಪ ಇದ್ದರೆ ತಿಳಿಸಿ ಎಂದು ಸಭೆ ನಡೆಸಿದರು. ಸಂಸದ ಜಗದೀಶ್ ಶೆಟ್ಟರ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಶಾಸಕ ಆಸೀಫ್ ಸೇಠ್ ಸಭೆಯನ್ನು ಮುಂದೂಡುವಂತೆ ಅಧಿಕಾರಿಗಳಿಗೆ ತಿಳಿಸಿದರು.ಅಧಿಕಾರಿಗಳಿಗೆ ಪ್ರಶ್ನೆ:

ಇದಕ್ಕೂ ಮುನ್ನ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ದಂಡು ಮಂಡಳಿ ವ್ಯಾಪ್ತಿಯಲ್ಲಿರುವ ಕಾಯ್ದಿಟ್ಟ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಹೆಚ್ಚು ಬರುತ್ತಿವೆ. ನಗರ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ. ಕಾಯ್ದಿಟ್ಟ ಅರಣ್ಯ ಪ್ರದೇಶ ಬೇರೆ ಕಡೆ ಮಾಡಬಹುದಾ? ಹಾಗೂ ದಂಡು ಮಂಡಳಿಯ ಪ್ರದೇಶವನ್ನು ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ನಿರ್ಣಯ ಯಾರು ತೆಗೆದುಕೊಳ್ಳುತ್ತಾರೆ. ಅದಕ್ಕೆ ಯಾವ ಮಾನದಂಡ ಇವೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಪ್ರಶ್ನಿಸಿದರು.ದಂಡು ಮಂಡಳಿ ಸಿಇಒ ರಾಜೀವಕುಮಾರ ಮಾತನಾಡಿ, ದಂಡು ಮಂಡಳಿಯನ್ನು ಪಾಲಿಕೆಗೆ ಹಸ್ತಾಂತರಿಸುವ ನಿರ್ಣಯವನ್ನು ಕೇಂದ್ರ ಸಚಿವಾಲಯ ಮಾಡುತ್ತದೆ‌. ಪಾಲಿಕೆಗೆ ಹಸ್ತಾಂತರಿಸುವ ಮುನ್ನ ದಂಡು ಮಂಡಳಿಗೆ ಕುಡಿಯುವ ನೀರು, ಸುಸಜ್ಜಿತ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪಾಲಿಕೆಯವರು ಕಲ್ಪಿಸಿಕೊಡಬೇಕು ಎಂದು ಮಾಹಿತಿ ನೀಡಿದರು.ಬಳಿಕ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ದಂಡು ಮಂಡಳಿಯ ಸಭೆ ನಡೆಸುವಾಗ ಜನಪ್ರತಿನಿದಿಗಳಿಗೆ ಮಾಹಿತಿ ಕೊಡಿ. ಏಕಾಏಕಿ ಸಭೆ ಕರೆದು ನಿರ್ಣಯ ತೆಗೆದುಕೊಂಡರೇ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದರೇ ಯಾವುದೇ ಪ್ರಯೋಜನ ಇಲ್ಲ ಎಂದರು.

ಡಾ.ನಿತಿನ್ ಖೋತ್, ಚಂದ್ರಶೇಖರ ಸಾಲಿಸವಡಿ ಸೇರಿದಂತೆ ಅಧಿಕಾರಿಗಳು ಇದ್ದರು.

-----------------------

ಕೋಟ

ಈ ರೀತಿ ತರಾತುರಿಯಲ್ಲಿ ಸಭೆ ಆಯೋಜಿಸಿದರೆ ಹೇಗೆ?, ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಅಗತ್ಯ ಇದೆ. ದಂಡು ಮಂಡಳಿಯ ಅಧಿಕಾರಿಗಳು ಸಭೆ ಇದೆ ಎಂದು ನಮಗೆ ನೋಟಿಸ್ ನೀಡಿದ್ದಾರೆ‌. ಜನರ ಅಭಿಪ್ರಾಯ ಸಂಗ್ರಹಿಸುವುದು ಹೇಗೆ ಸಾಧ್ಯ. ಆದ್ದರಿಂದ ಸಭೆಯನ್ನು ಜು.13ಕ್ಕೆ ನಿಗದಿ ಮಾಡಿ.

ಜಗದೀಶ ಶೆಟ್ಟರ, ಸಂಸದ

-----------------------ಕೋಟ್

ಕೇಂದ್ರ ಸಚಿವಾಲಯದಿಂದ ನಮಗೆ ಸಭೆ ನಡೆಸುವಂತೆ ನೋಟಿಸ್ ಬಂದಿದ್ದು, ನಾವು ಸಭೆ ನಡೆಸುತ್ತೇವೆ. ಈ ಬಗ್ಗೆ ಜನಪ್ರತಿನಿಧಿಗಳ ಆಕ್ಷೇಪ ಇದ್ದರೆ ತಿಳಿಸಿ.

ಜಯದೀಪ ಮುಖರ್ಜಿ, ದಂಡು ಮಂಡಳಿಯ ಬ್ರಿಗೇಡಿಯರ

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ