ಕೋಲಾರ: ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು. ನಗರದ ೩೩ನೇ ವಾರ್ಡಿನ ರಹಮತ್ ನಗರದ ಬೀಡಿ ಕಾಲೋನಿಯ ಮುಕ್ತಬ್- ಎ- ಹಸ್ನೈನ್ ಮದರಾಸದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದರು. ದುಶ್ಚಟಗಳಿಗೆ ಬಲಿಯಾಗುವ ಯುವಜನರ ಸಂಖ್ಯೆ ಮಿತಿ ಮೀರುತ್ತಿದೆ. ಮಾದಕ ವಸ್ತುಗಳನ್ನು ನಿರಂತರ ಸೇವಿಸಿ ಅನೇಕ ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ. ಪಾಲಕರು ಇಂತಹ ವಿಷಯದಲ್ಲಿ ಎಚ್ಚರವಹಿಸುವ ಜತೆಗೆ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ವಾತಾವರಣ ನಿರ್ಮಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ದುಶ್ಚಟಗಳಿಂದ ದೂರವಿರಲು ವ್ಯಾಯಾಮ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅತಿ ಅವಶ್ಯಕ. ಈ ನಿಟ್ಟಿನಲ್ಲಿ ಯುವಕರು ತಮ್ಮ ಆಸಕ್ತಿಯ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಮದರಾಸ ಪಕ್ಕದಲ್ಲಿರುವ ಜಾಗದಲ್ಲಿ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸಿಕೊಡಲು ಪ್ರಭಾಕರ್‌ರಿಗೆ ಯುವಕರು ಮನವಿ ಮಾಡಿದರು. ಅತಿ ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಮುಖಂಡ ಯಾರಬ್, ಸಾಧಿಕ್ ಪಾಷಾ, ಅಕ್ಬರ್ ಪಾಷಾ, ಭಾಷಾ, ಮುನ್ನ, ಬಾಬು, ಸೈಯದ್, ಸಾಧಿಕ್, ನವೀದ್ ಇದ್ದರು.