ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಪಟ್ಟಣದ ಉದ್ಧಾನೇಶ್ವರ ವೃತ್ತದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾವ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸಂಚಾಲಕ ಬಸವರಾಜು ಮಾತನಾಡಿ, ಜಗತ್ತಿನ ಉದ್ದಗಲ್ಲಕ್ಕೂ ತಾಂಡವವಾಡುತ್ತಿದ್ದ ಸಾಮಾಜಿಕ ಸಮಸ್ಯೆಗಳಿಗೆ ತಾತ್ವಿಕ ಪರಿಹಾರ ಸೂಚಿಸಿದವರು. ಅಂಬೇಡ್ಕರ್ ಅವರ ವಿಚಾರಧಾರೆಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ಸಂಘಟನೆಯ ಹೋಬಳಿ ಸಂಚಾಲಕ ಹನುಮಂತರಾಜು ಮಾತನಾಡಿ, ರಾಷ್ಟ್ರ ನಾಯಕರು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗುವುದಿಲ್ಲ, ಅಂತಹ ದಾರ್ಶನಿಕರ ಆದರ್ಶಗಳನ್ನು ದೇಶದ ಅಭಿವೃದ್ಧಿಗೆ ಮತ್ತು ಐಕ್ಯತೆಗೆ ನಾವೆಲ್ಲರೂ ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಾಧಕರನ್ನು ಸನ್ಮಾನಿಸಲಾಯಿತು.ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಗ್ರಾಪಂ ಅಧ್ಯಕ್ಷರಾದ ರಾಮಾಂಜನೇಯ, ಉಮಾದೇವಿ ಹನುಮಂತರಾಜು, ತಾಲೂಕು ಸಂಚಾಲಕ ಬರದಿ ಹನುಮಂತರಾಯಪ್ಪ, ವೆಂಕಟೇಶ್, ರಾಮಕೃಷ್ಣಯ್ಯ, ವೀರಣ್ಣ, ಗಂಗಾಧರ್, ಕಾಂತರಾಜು, ಜಯಶೀಲಾ, ಪೂಜಾರಾಮಯ್ಯ ಮತ್ತಿತ್ತರಿದ್ದರು.