ನರಗುಂದ: ಬಸವಾದಿ ಶಿವಶರಣರಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ತತ್ವಾದರ್ಶಗಳು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಂಡರೆ ಸಾತ್ವಿಕ ಬದುಕು ನಡೆಸಲು ಸಾಧ್ಯ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಮುಖಂಡ ವೆಂಕಪ್ಪ ಪಾತ್ರೋಟಿ ಮಾತನಾಡಿ, ಶಿದ್ದರಾಮೇಶ್ವರ ಜೀವನ ಚರಿತ್ರೆ ಬಗ್ಗೆ ಹಾಗೂ ಜಯಂತಿ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಯ್ಯ ಹಿರೇಮಠ, ತಹಸೀಲ್ದಾರ್ ಶ್ರೀಶೈಲ ತಳವಾರ, ಪ್ರಕಾಶಗೌಡ ತಿರಕನಗೌಡರ, ರಾಜು ಕಲಾಲ್, ಭೋವಿ ಸಮಾಜದ ಮುಖಂಡ ಶಂಕರ ಸುರೇಬಾನ, ಪ್ರಕಾಶ ಹಾದಿಮನಿ, ಪ್ರವೀಣ ವಡ್ಡರ, ಸಿದ್ದಾರೂಢ ಪಾತ್ರೋಟಿ, ರತ್ನಾ ನಾಗನೂರ, ಪಿಡಿಒ ಅನ್ನದಾನಿ, ಎನ್.ಕೆ. ಚಲವಾದಿ. ಪ್ರಕಾಶ ಹೊಳಿಯಪ್ಪಗೋಳ, ಸಿದ್ದಾರೂಢ ಪಾತ್ರೋಟಿ, ಕೃಷ್ಣಗೌಡ ಶಿವನಗೌಡ್ರ, ಶರಣಪ್ಪ ಹೂಗಾರ, ಹನುಮಂತ ಕರಬಸನಗೌಡ್ರ, ಹೊಳಬಸಪ್ಪ ಯಂಡಿಗೇರ, ಪಾಟೀಲ, ವೆಂಕನಗೌಡ ಬಂಡಿವಡ್ಡರ, ಅಡಿವೆಪ್ಪ ಪಾತ್ರೋಟಿ, ತಿಪ್ಪಣ ಪಾತ್ರೋಟಿ, ಮಂಜುನಾಥ ಪಾತ್ರೋಟಿ, ನಾಗರಾಜ ಪಾತ್ರೋಟಿ, ಶಿದ್ದನಗೌಡ ನಾಗನಗೌಡ ಪಾಟೀಲ, ಹನುಮಂತಗೌಡ ಪಾಟೀಲ, ದೇವರಾಜ ನಾಗನೂರ, ಶೇಕಪ್ಪ ತಡಸಿ, ಲಿಂಗನಗೌಡ ಗದ್ದಿಗೌಡ್ರ, ಬಸವರಾಜ ಮೇಟಿ, ಚಂದ್ರಶೇಕರ ಗಾಣಿಗೇರ, ನಾಗನಗೌಡ ನಾಗನೂರ, ಸೇರಿದಂತೆ ಮುಂತಾದವರು ಇದ್ದರು. ಸ್ವಾಮಿ ವಿವೇಕಾನಂದ ಜಯಂತಿಗದಗ: ತಾಲೂಕಿನ ಬಿಂಕದಕಟ್ಟಿಯಲ್ಲಿರುವ ರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಮತ್ತು ಎಂ.ವಿ. ಮೂಲಿಮನಿ ಅವರ 95ನೇ ಜಯಂತಿ ಆಚರಿಸಲಾಯಿತು. ಸಹ ಶಿಕ್ಷಕಿ ಪದ್ಮಶ್ರೀ ಪ್ರಾರ್ಥಿಸಿದರು. ಪ್ರಾಚಾರ್ಯ ರಾಘವೇಂದ್ರ ಕೆ.ಆರ್. ಅವರು ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ, ಸಂದೇಶ ಹಾಗೂ ಶಾಲೆಯ ಸಂಸ್ಥಾಪಕ ಎಂ.ವಿ. ಮೂಲಿಮನಿಯವರ ಕೊಡುಗೆಗಳನ್ನು ತಿಳಿಸಿದರು. ಸಮೀನಾ ನಿರೂಪಿಸಿದರು.