ಶ್ರೀ ಬಸವ ಮಂದಿರದಲ್ಲಿ ಮಕರ ಸಂಕ್ರಾಂತಿ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ
ಬಸವ ತತ್ತ್ವದ ವೈಚಾರಿಕ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರರ ಉಪದೇಶ, ಜ್ಞಾನ ಹಾಗೂ ಸಂದೇಶಗಳನ್ನು ಎಲ್ಲರೂ ಅವಲೋಕನ ಮಾಡುವ ಮೂಲಕ ತನು ಮನಗಳಲ್ಲಿ ಶ್ರದ್ಧಾಪೂರ್ವಕವಾಗಿ ಅರ್ಪಿಸಿಕೊಳ್ಳಬೇಕು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳ ಸಿದ್ಧ ಸ್ವಾಮೀಜಿ ನುಡಿದರು.
ನಗರದ ದೊಡ್ಡ ಕುರುಬರಹಳ್ಳಿ ಸಮೀಪದ ಶ್ರೀ ಬಸವ ಮಂದಿರದಲ್ಲಿ ಮಕರ ಸಂಕ್ರಾಂತಿ ಹಾಗೂ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಆಯೋಜಿಸಿದ್ಧ ಗಣಪರ್ವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಸಿದ್ದರಾಮೇಶ್ವರರು ಸಮಾನತೆ ಕಾರುಡಿಗ. ಆ ತತ್ತ್ವ ದಡಿ ಮನುಷ್ಯ ಎಲ್ಲರನ್ನು ತಮ್ಮವರೆಂದು ಭಾವಿಸಿ, ಪ್ರತಿ ಕ್ಷಣದಲ್ಲೂ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳುವುದೇ ಸಮಾನತೆ ಅರ್ಥ. ಈ ಹೊರತಾಗಿ ಮನೆ ಮನಸ್ಸು ನೋಯಿಸಿ ಗಂಗೆ, -ತುಂಗಾ ನದಿ ಯಲ್ಲಿ ಮಿಂದೆಂದರೆ ಪಾಪ ಕಳೆದು, ಪುಣ್ಯಪಾಲು ಲಭಿಸುವುದಿಲ್ಲ ಎಂದು ತಿಳಿಸಿದರು.
ಮಾನವರು ಸದಾಕಾಲ ಒಳಿತನ್ನು ಬಯಸುವುದನ್ನು ರೂಢಿಸಿಕೊಳ್ಳಬೇಕು. ಸ್ವಾರ್ಥ, ಸ್ವಹಿತಸಕ್ತಿಗಾಗಿ ಇತರೆ ಕುಟುಂಬ ವರನ್ನು ನೋಯಿಸಿ, ಮನೆತನ ಹಾಳು ಮಾಡಿದರೆ ಪಾಪವೆಂಬುದು ಅಂಟಿಕೊಂಡು ದುರ್ಬಲರಾಗುತ್ತಾನೆ. ಹಾಗಾಗಿ ಸಿದ್ದರಾಮೇಶ್ವರರು ಸದ್ವಿಚಾರಗಳು ಅವಲೋಕನ ಮಾಡಿ ಧರ್ಮದಲ್ಲಿ ಹಾದಿಯಲ್ಲಿ ಸಾಗುವುದು ಲೇಸು ಎಂದರು.
ಇದೇ ವೇಳೆ ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಮಠದ ಆವರಣದಲ್ಲಿ ವಿಶೇಷ ಅಲಂಕಾರದೊಂದಿಗೆ ರಾಗಿ ರಾಶಿ, ತೆಂಗಿನ ಕಾಯಿ ಪೂಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.