- ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ ದೀಪಾವಳಿ ಹಬ್ಬ
ಕನ್ನಡಪ್ರಭ ವಾರ್ತೆ ತರೀಕೆರೆದೀಪಾವಳಿ ಹಬ್ಬ ಶ್ರೀಲಕ್ಷ್ಮಿಯನ್ನು ಆಹ್ವಾನಿಸುವ ಜೊತೆಗೆ ಶ್ರೀ ಲಕ್ಷ್ಮಿಯಲ್ಲಿರುವ ದೈವಿಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ಕಲೈವಾಣಿ ಹೇಳಿದ್ದಾರೆ.ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ ನಡೆದ ದೀಪಾವಳಿ ಹಬ್ಬವನ್ನು ಹೊಸ ಯುಗ ದೈವಿರಾಜ್ಯ ಸಮೀಪಿಸುತ್ತಿರುವ ಶುಭ ಉತ್ಸವ ಹಾಗೂ ಚೈತನ್ಯ ಅಷ್ಟಲಕ್ಷ್ಮಿಯರ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ದೇಹ ಒಂದು ರಾಜ್ಯ ಸ್ಥೂಲ ಪಂಚೆಂದ್ರಿಯಗಳ ಸೂಕ್ಷ್ಮ ಇಂದ್ರಿಯಗಳು ಪ್ರಜೆಗಳಾಗಿವೆ. ಆತ್ಮನು ಈ ದೇಹದ ರಾಜ. ಆತ್ಮ ರಾಜನ ಆಡಳಿತ ನಡೆಯಬೇಕು ಇದೇ ಒಂದು ರಾಜ್ಯ, ಒಂದು ಧರ್ಮ ಅಂದರೆ ಸಂಪೂರ್ಣ (ಸಂಕಲ್ಪ, ಮಾತು ದೃಷ್ಟಿ ಕರ್ಮ ದಲ್ಲಿ) ಪವಿತ್ರತೆ, ಸ್ವಪ್ನ ಮಾತ್ರದಲ್ಲೂ ಅಪವಿತ್ರತೆ ಇರಬಾರದು. ಜೊತೆಯಲ್ಲಿ ಸುಖ ಶಾಂತಿ ಸಂಪತ್ತು, (ಪರಮಾತ್ಮ ಜ್ಞಾನ, ದೈವಿ ಗುಣ, ಪರಮಾತ್ಮ ಶಕ್ತಿಗಳು) ಈಗ ಸ್ವರಾಜ್ಯದಲ್ಲಿ ಇದ್ದರೆ ಭವಿಷ್ಯದಲ್ಲಿ ವಿಶ್ವದಲ್ಲಿ ಒಂದು ರಾಜ್ಯ, ಒಂದು ಧರ್ಮ ಅಖಂಡ ಸುಖ ಅಖಂಡ ಶಾಂತಿ ಅಖಂಡ ಸಂಪತ್ತಿನಿಂದ ತುಂಬಿರುತ್ತದೆ. ಇಲ್ಲಿ ಸ್ಥಾನ ಹೊಗಳಿಕೆ ಸನ್ಮಾನ ಇವುಗಳ ಆಧಾರದ ಮೇಲೆ ಸುಖ, ಖುಷಿಯ ಅನುಭವ ಮಾಡುತ್ತಾರೆ ಎಂದು ಹೇಳಿದರು. ಈ ಎಲ್ಲಾ ಮಾತು ಅಲ್ಪಕಾಲದ್ದು ಅದರಿಂದ ಸಿಗುವ ಸುಖ ಶಾಂತಿ ಕೂಡ ಅಲ್ಪಕಾಲದ್ದು. ನಾವೆಲ್ಲರೂ ದಾತ ಆಗಿರುವ ಪರ ಮಾತ್ಮನೆಂಮಬ ತಂದೆಯ ಸಂತಾನರು ಆದಕಾರಣ ನಾವು ಯಾರಿಂದಲೂ ತೆಗೆದುಕೊಳ್ಳುವಂತವರು ಆಗಬಾರದು, ಕೊಡುವಂತಹ ದೇವತೆ ಆಗಬೇಕು. ದೇವತೆಗಳು ಅಂದರೇನೆ ಕೊಡುವಂತವರು. ವಿಶ್ವಕಲ್ಯಾಣಕಾರಿ ತಂದೆ ವಿಶ್ವಕಲ್ಯಾಣದ ಕಾರ್ಯ ಈಗಾಗಲೇ ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ನಾವೆಲ್ಲ ಆತ್ಮರು ಸಹ ಯೋಗಿ ಆಗಬೇಕು ಸೇವಾ ಕಾರ್ಯದಲ್ಲಿ ಅಭಿವೃದ್ಧಿ ಮಾಡಬೇಕಾದರೆ ನಮ್ಮ ಮಾತು ನಿರ್ಮಲವಾಗಿರಬೇಕು. ಜೊತೆಯಲ್ಲಿ ಇಂತಹ ನಿಸ್ವಾರ್ಥ ಸೇವೆಯಲ್ಲಿ ಆಗಲೇ ಸಫಲತೆ ಪ್ರಾಪ್ತಿಯಾಗುವುದು ಇದರಿಂದ ಎಲ್ಲ ಆತ್ಮರ ಹೃದಯದ ಸ್ನೇಹ ಹಾಗೂ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು. ಅದಕ್ಕಾಗಿ ಈಗ ನಮ್ಮ ಪರಿಶ್ರಮದಿಂದ ನಮ್ಮ ಭವಿಷ್ಯದ ಸುಖ ಶಾಂತಿ ಆರೋಗ್ಯ ಸಂಪತ್ತು ಸಂತೋಷದ ಖಾತೆಯನ್ನು ವೃದ್ಧಿಸಿಕೊಳ್ಳಬೇಕು. 2ನೇ ಪ್ರಕಾರದ ಖಾತೆ ಸದಾ ಸ್ವಯಂ ಸಂತೃಪ್ತಿಯಾಗಿದ್ದು ಸೇವೆಯಲ್ಲಿ ಸದಾ ನಿಸ್ವಾರ್ಥ ಭಾವ ಇರಬೇಕು. ಯಾವುದೇ ರೀತಿ ನಾನು ನನ್ನತನ ಎನ್ನುವ ಅಭಿಮಾನ ಅಹಂಕಾರ ನಮ್ಮ ಪುಣ್ಯದ ಖಾತೆಯನ್ನು ಸಮಾಪ್ತಿ ಮಾಡಿಬಿಡುತ್ತದೆ. ಸೇವೆಯಲ್ಲಿ ನಿಸ್ವಾರ್ಥ ಸೇವೆ ಇರಬೇಕು. ಶುದ್ಧ ಶ್ರೇಷ್ಠ ದೈವಿ ಸಂಸ್ಕಾರ ಶಕ್ತಿಶಾಲಿಯಾಗಿ ಮಾಡಿ ಕೊಳ್ಳಬೇಕು. ನಮ್ಮ ಮೇಲೆ ಯಾರದ್ದೇ ಬಲಹೀನ ಸ್ವಭಾವ ಸಂಸ್ಕಾರಗಳ ಪ್ರಭಾವ ಆಗಬಾರದು ಎಂದು ಹೇಳಿದರು. ನಮ್ಮ ಸುರಕ್ಷತೆ ಸಾಧನ ಪರಮಾತ್ಮನ ನೆನಪಿನ ಛತ್ರ ಛಾಯೆ ಆಗಿದೆ. ಪರಮಾತ್ಮ ತಂದೆ ಜೊತೆ ಸದಾ ಇರಬೇಕು ಹಾಗೂ ಪರಮಾತ್ಮನ ಮಾರ್ಗದರ್ಶನದಲ್ಲಿ ನಮ್ಮ ಪ್ರತಿ ಹೆಜ್ಜೆ ಇಡಬೇಕು. ಆಗಲೇ ದೈವಿ ಸಂಸಾರ ದೈವಿ ರಾಜ್ಯದ ಸ್ಥಾಪನೆ ಆಗುವುದು. ಹೀಗೆ ನಿರಾಕಾರ ಪರಮಾತ್ಮ ಶಿವ ತಂದೆಯ ಅನೇಕ ಶಿಕ್ಷಣ ಹಾಗೂ ಮಾರ್ಗದರ್ಶನ ಹೇಳುತ್ತಾ ನಿಜವಾದ ದೀಪಾವಳಿ ಆಚರಿಸೋಣ, ನಮ್ಮ ಮಸ್ತಕದಲ್ಲಿ ಆತ್ಮಜ್ಯೋತಿ ಸದಾ ಪ್ರಕಾಶಮಯವಾಗಿ ಬೆಳಗುತ್ತಿರಲಿ, ನಯನಗಳಲ್ಲಿ ಆತ್ಮೀಯತೆ ದೃಷ್ಟಿ ಇರಲಿ, ಮುಖದಿಂದ ಶುದ್ಧ ಶ್ರೇಷ್ಠ ವಚನಗಳನ್ನು ನುಡಿಯುತ್ತಿರಲಿ ಹಾಗೂ ಸದಾ ಆತ್ಮೀಯ ಮುಗುಳ್ನಗೆ ಇರಲಿ ಎಂದು ಹೇಳಿದರು. ವಕೀಲರಾದ ಜಿ. ಸುಬ್ರಹ್ಮಣ್ಯ ಮಾತನಾಡಿ ದೇವಿ ದರ್ಶನ ಮಾಡಿ ಅವರಿಂದ ನಾವು ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದ್ದು ನಮ್ಮ ಭಾರತದ ಸಂಸ್ಕೃತಿ ಉಳಿಸುವ ಕಾರ್ಯ ಈ ವಿದ್ಯಾಲಯ ಮಾಡುತ್ತಿದೆ ಎಂದು ತಿಳಿಸಿದರು. ಶಿರಸ್ತೇದಾರರಾದ ವಾಣಿಶ್ರೀ ಮಾತನಾಡಿ ಚೈತನ್ಯ ಅಷ್ಟಲಕ್ಷ್ಮಿಯರ ದರ್ಶನ ಮಾಡುವ ಭಾಗ್ಯ ನಮಗೆ ಸಿಕ್ಕಿದೆ. ನಾವು ಲಕ್ಷ್ಮಿಯ ಸರ್ವಗುಣಗಳನ್ನು ಅಳವಡಿಸಿಕೊಂಡು ನಿಜವಾದ ದೀಪಾವಳಿ ಆಚರಿಸಬೇಕು ಎಂದರು.ಅನ್ವಿತಾ , ಸಿಂಧು,ಗಾನವಿ, ತೃಪ್ತಿ, ಕವಿತಾ, ಅಷ್ಟಲಕ್ಷ್ಮಿಯರ ವೇಷ ಧರಿಸಿ ಈ ಕಾರ್ಯಕ್ರಮಕ್ಕೆ ಶೋಭೆ ತಂದರು.
ಟಿ. ಆರ್. ಮಂಜುನಾಥ್, ನೇರಳೆಕೆರೆಯ ಷಡಾಕ್ಷರಪ್ಪ, ಶಾರದಮ್ಮ, ಬಿ. ಕೆ. ಕವಿತಾ, ಬಿ. ಕೆ. ಅಮೃತ ಭಾಗವಹಿಸಿದ್ದರು. 24ಕೆಟಿಅರ್.ಕೆ.4ಃತರೀಕೆರೆಯಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ ಶ್ರದ್ದಾಭಕ್ತಿಯ ದೀಪಾವಳಿ ಕಾರ್ಯಕ್ರಮದಲ್ಲಿ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ಕಲೈವಾಣಿ ಮತ್ತಿತರರು ಭಾಗವಹಿಸಿದ್ದರು.