ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ರೂಢಿಸಿಕೊಳ್ಳಿ

KannadaprabhaNewsNetwork |  
Published : Sep 09, 2025, 01:01 AM IST
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ | Kannada Prabha

ಸಾರಾಂಶ

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ‍್ಯಕ್ರಮ ಇಂದು ಅರ್ಥಪೂರ್ಣವಾಗಿ ನಡೆದಿದೆ

ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಉತ್ತರಕನ್ನಡ ಬ್ರಹ್ಮಶ್ರೀ ನಾರಾಯಣ ಗುರುಗಳ ಹಿಂದುಳಿದ ವರ್ಗಗಳ ವೇದಿಕೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೧ನೇ ಜಯಂತಿ, ನಾರಾಯಣ ಗುರುಗಳ ತತ್ವದ ಬಗ್ಗೆ ಉಪನ್ಯಾಸ ವಿಶೇಷ ಸಾಧಕರಿಗೆ ಸನ್ಮಾನ ಕಾರ‍್ಯಕ್ರಮ ನಡೆಯಿತು.

ದೀಪ ಬೆಳಗುವ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿದ ನೀಲಗೋಡ ಯಕ್ಷಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ‍್ಯಕ್ರಮ ಇಂದು ಅರ್ಥಪೂರ್ಣವಾಗಿ ನಡೆದಿದೆ ಎಂದರು.

ವಿಶೇಷ ಆಹ್ವಾನಿತರಾಗಿ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ೧೯ನೇ ಶತಮಾನದಲ್ಲಿ ಹುಟ್ಟಿದ ಮಹಾನಸಂತ, ಪ್ರತಿಯೊಬ್ಬರಲ್ಲು ಭಗವಂತನಿದ್ದಾನೆ ಎಂದು ತೋರಿಸಿಕೊಟ್ಟವರು ನಾರಾಯಣ ಗುರುಗಳು. ಇವರ ತತ್ವ,ಆದರ್ಶಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದು ಕರೆನೀಡಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಬಗ್ಗೆ ವಕೀಲರಾದ ನಾಗರಾಜ ನಾಯಕ ಉಪನ್ಯಾಸ ನೀಡಿ,೧೯ನೇ ಶತಮಾನದಲ್ಲಿ ಭಾರತ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಅನೇಕ ಮಹಾನುಭಾವರ ಜನನವಾಗಿದೆ. ಅದರಲ್ಲಿ ನಾರಾಯಣ ಗುರುಗಳು ಒರ್ವರು.ಭಾರತದ ಮೇಲೆ ಎಲ್ಲ ಸಮಾಜದವರು ಹಕ್ಕುಳ್ಳವರು. ಎಲ್ಲ ವರ್ಗದವರು ಕೊಡುಗೆ ನೀಡಿದ್ದಾರೆ ಎಂದು ಸಾರಿದವರು ಎಂದರು.

ನ್ಯಾಯವಾದಿ ವಿಕ್ರಂ ನಾಯ್ಕ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ಸಮಾಜದ ವಿಶೇಷ ಸಾಧಕರಿಗೆ ಸನ್ಮಾನ ನಡೆಯಿತು.ಮಾದೇವ ಸ್ವಾಮಿ ಹಾಗೂ ಸತ್ಯಜಿತ್ ಸುರತ್ಕಲ್ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ಶಿರಾಲಿ ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಭಟ್ಕಳ ನಾಮಧಾರಿ ಸೇವಾ ಸಮಿತಿ ಅಧ್ಯಕ್ಷ ಭವಾನಿ ಶಂಕರ್, ಮಂಗಳೂರು ವಿಶ್ವವಿದ್ಯಾಲಯದ ಪ್ರಾಚರ‍್ಯ‌ ಡಾ. ಗಣಪತಿ ಎಸ್ ಗೌಡ, ಬೆಂಗಳೂರು ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಬಾಬು ಗಿರಿಯ ಗೌಡ, ಮಂಕಿ ಗೋಲ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಅಣ್ಣಪ್ಪ ನಾಯ್ಕ, ನಾರಾಯಣಗುರು ಸಮಿತಿ ಭಟ್ಕಳ ಸಂಚಾಲಕ ಸತೀಶ ನಾಯ್ಕ, ಭಟ್ಕಳ ತಾಲೂಕ ದೇವಾಡಿಗ ಸಂಘಟನೆ ಕಾರ್ಯದರ್ಶಿ ಸುರೇಶ ದೇವಾಡಿಗ, ನಾಮಧಾರಿ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಅಜಿತ್ ನಾಯ್ಕ, ಬೆಳಕೊಂಡ ಮೀನುಗಾರ ಸೊಸೈಟಿ ಅಧ್ಯಕ್ಷ ಉಮೇಶ ಮೇಸ್ತ, ಪರಿಶಿಷ್ಟ ಜಾತಿ ಪಂಗಡದ ತಾಲೂಕ ಅಧ್ಯಕ್ಷ ನಾರಾಯಣ ಶಿವ ಮುಕ್ರಿ, ಬಿ.ಎನ್.ಎಸ್ ಡಿ.ಪಿ ಜಿಲ್ಲಾಧ್ಯಕ್ಷ ದಿವಾಕರ ನಾಯ್ಕ, ತಾಲೂಕ ಅಧ್ಯಕ್ಷ ಧನಂಜಯ ನಾಯ್ಕ, ಟಿಬಿ ನಾಯ್ಕ ಭಟ್ಕಳ, ಎನ್.ಕೆ ನಾಯ್ಕ ಉಪಸ್ಥಿತರಿದ್ದರು. ಸುದೀಶ್ ನಾಯ್ಕ ಸ್ವಾಗತಿಸಿದರು. ಪ್ರಕಾಶ ನಾಯ್ಕ ನಿರೂಪಿಸಿದರು.ಬಿಟಿ ಗಣಪತಿ ನಾಯ್ಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ: ಸಂಸದ ಡಾ.ಕೆ.ಸುಧಾಕರ್
ಕುವೆಂಪು ಪಂಚಶೀಲ ತತ್ವಗಳು ಎಲ್ಲ ಕಾಲಕ್ಕೂ ಬೇಕು