ಬಸವಣ್ಣನವರ ವಿಚಾರಧಾರೆ ಅಳವಡಿಸಿಕೊಳ್ಳಿ: ಗುರುಮಹಾಂತ ಸ್ವಾಮೀಜಿ

KannadaprabhaNewsNetwork | Published : Aug 6, 2024 12:30 AM

ಸಾರಾಂಶ

ಬಸವಣ್ಣನವರ ವಿಚಾರಧಾರೆಗಳನ್ನು ನಾವೆಲ್ಲರೂ ಬದುಕಿನಲ್ಲಿ ರೂಢಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಎಂದು ಚಿತ್ತರಗಿ ಸಂಸ್ಥಾನಪೀಠ ಇಳಕಲ್ಲದ ಗುರು ಮಹಾಂತ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಬಸವಣ್ಣನವರ ವಿಚಾರಧಾರೆಗಳನ್ನು ನಾವೆಲ್ಲರೂ ಬದುಕಿನಲ್ಲಿ ರೂಢಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಎಂದು ಚಿತ್ತರಗಿ ಸಂಸ್ಥಾನಪೀಠ ಇಳಕಲ್ಲದ ಗುರು ಮಹಾಂತ ಸ್ವಾಮೀಜಿ ನುಡಿದರು.

ತಾಲೂಕಿನ ಮಲಾಬಾದ ಗ್ರಾಮದ ವಿಮೋಚನಾ ವಸತಿ ಶಾಲೆಯಲ್ಲಿ ಲಿಂ.ಮಹಾಂತಪ್ಪನವರ ಜಯಂತಿ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಹಾಗೂ ಮಹಾಂತ ಮಂದಾರ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನೂರಾರು ಮಕ್ಕಳಿಗೆ ಶಿಕ್ಷಣ ಕೊಡಿಸಿದ ಫಲವಾಗಿ ಇಂದು ಅಥಣಿ ವಿಮೋಚನಾ ಸಂಸ್ಥೆಯ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬರುವ ಮೂಲಕ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದೇ ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ. ಇಂತಹ ಕಾಯಕವನ್ನು ಬಸವಣ್ಣನವರು ಸಾವಿರ ವರ್ಷಗಳ ಹಿಂದಿಯೇ ಮಾಡಿ ನಮ್ಮೆಲ್ಲರಿಗೆ ಆದರ್ಶವಾಗಿದ್ದಾರೆ ಎಂದು ಶ್ಲಾಘಿಸಿದರು.

ಧಾರವಾಡದ ಮನೋವೈದ್ಯ ಡಾ.ಆನಂದ ಪಾಂಡುರಂಗಿ ಮಹಾಂತ ಮಂದಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದ ಇಂದಿನ ಕಾಲದಲ್ಲಿ ನಮ್ಮ ಮಕ್ಕಳು ಮೊಬೈಲ್ ಮತ್ತು ಟಿವಿಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳ ಕನಸುಗಳನ್ನು ನನಸಾಗಿಸುವುದು ಪಾಲಕರ ಕರ್ತವ್ಯ ಎಂದರು.

ಶಾಲಾ ಕಾಲೇಜುಗಳ ದಿನಗಳಲ್ಲಿಯೇ ಮಕ್ಕಳು ಗಾಂಜಾ ಮತ್ತು ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇವುಗಳ ಜೊತೆಗೆ ಮೊಬೈಲ್ ಚಟವೂ ಅತ್ಯಂತ ಹಾನಿಕಾರಕವಾಗಿದೆ . ಮೊಬೈಲ್ ಮತ್ತು ಟಿವಿಗಳಿಂದ ಮಕ್ಕಳ ಮಾನಸಿಕ ಸ್ಥಿತಿ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ಪಾಟೀಲ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಈ ವಿಮೋಚನಾ ಸಂಸ್ಥೆ ಹಗಲಿರುಳು ಶ್ರಮಿಸಿದೆ. ಅನೇಕ ಅವಮಾನ, ಸವಾಲುಗಳನ್ನು ಎದುರಿಸಿ ಸುಮಾರು 80 ಹಳ್ಳಿಗಳಲ್ಲಿ ದೇವದಾಸಿಯರನ್ನು ಹುಡುಕಿ ಅವರ ಮನ ಪರಿವರ್ತಿಸುವ ಮೂಲಕ ಅವರಿಗೆ ಸ್ವಯಂ ಉದ್ಯೋಗ ಮತ್ತು ತರಬೇತಿ ನೀಡಿ ಅವರ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿದ ಹೆಮ್ಮೆ ನಮಗಿದೆ ಎಂದು ವಿವರಿಸಿದರು.

ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ.ಎಸ್.ಬಿ.ದಂಡಿನ, ಬೆಂಗಳೂರಿನ ವಿಜ್ಞಾನಿ ಚಂದ್ರಶೇಖರ ಬಿರಾದಾರ, ಉದ್ಯಮಿ ಚಂದ್ರಕಾಂತ ಸಾಂಗ್ಲೀಕರ, ಶ್ರೀಪಾದ ಹೆಬ್ಬಾರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ.ವಿ.ಎಸ್.ಮಾಳಿ ರಚಿಸಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಮತ್ತು ಪ್ರಕಾಶ ರಾಜಗೋಳಿ ರಚಿಸಿದ ಮಜಾ ಮನೆ ಹೆಸರುಗಳು ಎಂಬ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಗ್ರಂಥಗಳ ಕುರಿತು ಡಾ.ವಿ.ಎಸ್.ಮಾಳಿ ಮಾತನಾಡಿದರು.

ಧಾರವಾಡದ ಡಾ.ಆನಂದ ಪಾಂಡುರಂಗಿ ಹಾಗೂ ಸಿದ್ದರಾಮ ನಡಕಟ್ಟಿ ದಂಪತಿಗೆ, ಪುಣೆಯ ಡಾ.ಸಿದ್ದಾರ್ಥ ಬಂಗಾರ, ಉದ್ಯಮಿ ಹಾಗೂ ಸಮಾಜಸೇವಕ ಧರೇಪ್ಪ ಟಕ್ಕಣ್ಣವರ ಅವರಿಗೆ 2024ನೇ ಸಾಲಿನ ಮಹಾಂತ ಮಂದಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಮೋಚನಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕ ಪ್ರಕಾಶ ಸೂರಗೌಡ ದಂಪತಿಯನ್ನು ಸನ್ಮಾನಿಸಲಾಯಿತು. ಶಾಲೆಗೆ 5 ಕೆವಿ ಸೌರ ವಿದ್ಯುತ್ ಘಟಕ ಉದ್ಘಾಟಿಸಲಾಯಿತು.

ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ, ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನಿಯರ್‌-2023 ಪ್ರಶಸ್ತಿ ಪುರಸ್ಕೃತರಾದ ಅರುಣಕುಮಾರ ಯಲಗುದ್ರಿ, ಕಲ್ಮೇಶ್ ಹೊನ್ನಪ್ಪನವರ, ಡಾ.ರಾಮ ಕುಲಕರ್ಣಿ, ವಿ.ಎಲ್.ಕುಲಕರ್ಣಿ, ಎಸ್.ಬಿ.ಲಟ್ಟೆ, ಡಾ.ಪಿ.ಪಿ.ಮಿರಜ, ಪ್ರಕಾಶ ರಾಜಗೋಳಿ, ವಿ.ಎಸ್.ನಿಲಾರಿ, ಐ.ಬಿ.ಪಾಟೀಲ, ಶಿವಾನಂದ ಗೌರಾಣಿ, ಪಿ.ಎಂ.ಕಾಂಬಳೆ, ಸತೀಶ ಇಬ್ರಾಹಿಂಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಬಿ.ಎಲ್.ಪಾಟೀಲ ಸ್ವಾಗತಿಸಿದರು. ಕು.ಸೌಂದರ್ಯ ಜೈನಾಪುರ ಮತ್ತು ಕು.ಸ್ವಾತಿ ಸನದಿ ಕಾರ್ಯಕ್ರಮ ನಿರೂಪಿಸಿದರು. ಪಿ.ಎಂ.ಕಾಂಬಳೆ ವಂದಿಸಿದರು.ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿ ಎನಿಸಿಕೊಳ್ಳುವ ವೇಶ್ಯೆ ಹಾಗೂ ಅವಳ ಪುತ್ರನಿಗೆ ಯಾವುದೇ ಗೌರವ ಇರುವುದಿಲ್ಲ. ಅಂಥವರ ಬದುಕು ಬದಲಿಸಲು ಮಾನವೀಯ ಮೌಲ್ಯ ಹೊಂದಿರುವ ವಿಮೋಚನಾ ಸಂಸ್ಥೆಯ ಮೂಲಕ ಬಿ.ಎಲ್.ಪಾಟೀಲರು ಮಾಡಿದ ಸೇವೆ ಅಪಾರ ಮತ್ತು ಅಪರೂಪವಾದದ್ದು. ಅನೇಕ ಅವಮಾನ ಮತ್ತು ಸವಾಲುಗಳನ್ನು ಎದುರಿಸಿ ಈ ಸಂಸ್ಥೆ ಕಟ್ಟಿದ್ದು ಐತಿಹಾಸಿಕ ಸಾಧನೆಯಾಗಿದೆ.

-ಗುರು ಮಹಾಂತ ಸ್ವಾಮೀಜಿ, ಚಿತ್ತರಗಿ ಸಂಸ್ಥಾನಪೀಠ ಇಳಕಲ್ಲ.ಸರಾಯಿ, ಗುಟ್ಕಾ, ತಂಬಾಕು, ಬಿಡಿ, ಸಿಗರೇಟ ಚಟಗಳಿಗೆ ಅಂಟಿಕೊಂಡಿರುವ ಮಾತ್ರ ವ್ಯಸನಿಗಳಲ್ಲ, ಸೋಮಾರಿತನ, ಸುಳ್ಳು ಹೇಳುವುದು, ಕಳ್ಳತನ ಮಾಡುವುದು ಕೂಡ ಕೆಟ್ಟ ವ್ಯಸನಗಳಾಗಿವೆ. ತಂದೆ-ತಾಯಿ ಮಕ್ಕಳ ಕಾಳಜಿ ವಹಿಸಿ ಉತ್ತಮ ಹವ್ಯಾಸಗಳನ್ನು ಬೆಳೆಸಿ ಸುಂದರ ಬದುಕು ಕಟ್ಟಿಕೊಡುವುದು ಇಂದಿನ ಅಗತ್ಯವಾಗಿದೆ.

-ಡಾ.ಆನಂದ ಪಾಂಡುರಂಗಿ, ಮನೋವೈದ್ಯರು.ನಮ್ಮ ವಿಮೋಚನಾ ಸಂಸ್ಥೆಯಲ್ಲಿ ಅನೇಕ ದೇವದಾಸಿಯರ ಮಕ್ಕಳು ಉಚಿತ ಶಿಕ್ಷಣ ಪಡೆದು ಇಂದು ಜಿಲ್ಲಾಧಿಕಾರಿಯಾಗಿ, ಸೈನಿಕರಾಗಿ, ವೈದ್ಯರಾಗಿ, ನರ್ಸ್‌ಗಳಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸದೃಢವಾಗಿಸಿದ್ದಾರೆ. ಈ ಸಂಸ್ಥೆಗೆ ಅನೇಕ ದಾನಿಗಳು ನೀಡಿದ ಸಹಾಯ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

-ಬಿ.ಎಲ್.ಪಾಟೀಲ, ವಿಮೋಚನಾ ಸಂಸ್ಥೆಯ ಅಧ್ಯಕ್ಷರು.

-------

04ಅಥಣಿ 01ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿ ಎನಿಸಿಕೊಳ್ಳುವ ವೇಶ್ಯೆ ಹಾಗೂ ಅವಳ ಪುತ್ರನಿಗೆ ಯಾವುದೇ ಗೌರವ ಇರುವುದಿಲ್ಲ. ಅಂಥವರ ಬದುಕು ಬದಲಿಸಲು ಮಾನವೀಯ ಮೌಲ್ಯ ಹೊಂದಿರುವ ವಿಮೋಚನಾ ಸಂಸ್ಥೆಯ ಮೂಲಕ ಬಿ.ಎಲ್.ಪಾಟೀಲರು ಮಾಡಿದ ಸೇವೆ ಅಪಾರ ಮತ್ತು ಅಪರೂಪವಾದದ್ದು. ಅನೇಕ ಅವಮಾನ ಮತ್ತು ಸವಾಲುಗಳನ್ನು ಎದುರಿಸಿ ಈ ಸಂಸ್ಥೆ ಕಟ್ಟಿದ್ದು ಐತಿಹಾಸಿಕ ಸಾಧನೆಯಾಗಿದೆ.

-ಗುರು ಮಹಾಂತ ಸ್ವಾಮೀಜಿ, ಚಿತ್ತರಗಿ ಸಂಸ್ಥಾನಪೀಠ ಇಳಕಲ್ಲ.ಸರಾಯಿ, ಗುಟ್ಕಾ, ತಂಬಾಕು, ಬಿಡಿ, ಸಿಗರೇಟ ಚಟಗಳಿಗೆ ಅಂಟಿಕೊಂಡಿರುವ ಮಾತ್ರ ವ್ಯಸನಿಗಳಲ್ಲ, ಸೋಮಾರಿತನ, ಸುಳ್ಳು ಹೇಳುವುದು, ಕಳ್ಳತನ ಮಾಡುವುದು ಕೂಡ ಕೆಟ್ಟ ವ್ಯಸನಗಳಾಗಿವೆ. ತಂದೆ-ತಾಯಿ ಮಕ್ಕಳ ಕಾಳಜಿ ವಹಿಸಿ ಉತ್ತಮ ಹವ್ಯಾಸಗಳನ್ನು ಬೆಳೆಸಿ ಸುಂದರ ಬದುಕು ಕಟ್ಟಿಕೊಡುವುದು ಇಂದಿನ ಅಗತ್ಯವಾಗಿದೆ.

-ಡಾ.ಆನಂದ ಪಾಂಡುರಂಗಿ, ಮನೋವೈದ್ಯರು.ನಮ್ಮ ವಿಮೋಚನಾ ಸಂಸ್ಥೆಯಲ್ಲಿ ಅನೇಕ ದೇವದಾಸಿಯರ ಮಕ್ಕಳು ಉಚಿತ ಶಿಕ್ಷಣ ಪಡೆದು ಇಂದು ಜಿಲ್ಲಾಧಿಕಾರಿಯಾಗಿ, ಸೈನಿಕರಾಗಿ, ವೈದ್ಯರಾಗಿ, ನರ್ಸ್‌ಗಳಾಗಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತ ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸದೃಢವಾಗಿಸಿದ್ದಾರೆ. ಈ ಸಂಸ್ಥೆಗೆ ಅನೇಕ ದಾನಿಗಳು ನೀಡಿದ ಸಹಾಯ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

-ಬಿ.ಎಲ್.ಪಾಟೀಲ, ವಿಮೋಚನಾ ಸಂಸ್ಥೆಯ ಅಧ್ಯಕ್ಷರು.

Share this article