ಬಸವಾದಿ ಶರಣರ ಚಿಂತನೆ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Mar 10, 2025, 12:17 AM IST
್ಗನಹಗಮಕಗ | Kannada Prabha

ಸಾರಾಂಶ

ಶರಣರು ಸಮಾಜ,ಅಸಮಾನತೆ,ಶೋಷಣೆ, ಧಾರ್ಮಿಕ ಮೌಢ್ಯತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ವಿರುದ್ಧ ಕ್ರಾಂತಿ ಮಾಡಿದ್ದಾರೆ.

ಹನುಮಸಾಗರ: ಶ್ರೀಗುರು ಕರಿಸಿದ್ದೇಶ್ವರ ಮಠಕ್ಕೆ ಪುರಾತ ಕಾಲದಿಂದ ಸರ್ವ ಧರ್ಮದವರು ನಡೆದುಕೊಳ್ಳುತ್ತಾರೆ. ಬಸವಾದಿ ಶರಣರ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ ಬಸವ ಮಂಟಪದಲ್ಲಿ ನಡೆದ 9ನೇ ದಿನದ ಶರಣರ ಚರಿತ್ರೆ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣರು ಸಮಾಜ,ಅಸಮಾನತೆ,ಶೋಷಣೆ, ಧಾರ್ಮಿಕ ಮೌಢ್ಯತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ವಿರುದ್ಧ ಕ್ರಾಂತಿ ಮಾಡಿದ್ದಾರೆ. ಸಮಾಜದಲ್ಲಿ ಕಾಯಕ, ದಾಸೋಹ, ನಂಬಿಕೆ, ಸಮಾನತೆಯ ಸಹೋದರತೆ ದೇಶದ ಉದ್ಧಗಲಕ್ಕೂ ಬಿತ್ತಿ ಮಾನವೀಯ ಮೌಲ್ಯಗಳ ತತ್ವಗಳನ್ನು ಎಲ್ಲರ ಹೃದಯದಲ್ಲಿ ನೆಲೆಸುವಂತೆ ಮಾಡಿದ್ದಾರೆ. ಪ್ರವಚನಕಾರ ಸದಾನಂದಯ್ಯ ಶಾಸ್ತ್ರೀ ಹಿರೇಮಠ, ಮಲ್ಲಯ್ಯ ಕೋಮಾರಿ, ಮಹಾಂತೇಶ ಅಗಸಿಮುಂದಿನ, ಬಸವರಾಜ ಚಿನಿವಾಲರ, ನಿಂಗಪ್ಪ ಮೋಟಗಿ, ಮಹಾಂತಯ್ಯ ಕೋಮಾರಿ, ಹುನಗುಂಡಿ ಈರಣ್ಣ, ಮಲ್ಲಪ್ಪ ಲಂಗಟದ, ಉಮೇಶ ಬಾಚಲಾಪುರ, ಶರಣಪ್ಪ ಹುಬ್ಬಳ್ಳಿ, ರಮೇಶ ನಿಡಗುಂದಿ ಹಾಗೂ ಪತ್ರಿಬಸವೇಶ್ವರ ತರುಣ ಸಂಘದ ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು