ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿ

KannadaprabhaNewsNetwork |  
Published : Oct 08, 2024, 01:14 AM IST
07ಎಂಡಿಎಲ್01 | Kannada Prabha

ಸಾರಾಂಶ

ತಲೇಖಾ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಉತ್ಸವ ಅಂಗವಾಗಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮುದಗಲ್: ಪಟ್ಟಣ ಸಮೀಪದ ತಲೇಖಾನ ಗ್ರಾಮದಲ್ಲಿ ಭಾನುವಾರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಉತ್ಸವ ಜರುಗಿತು.

ಉತ್ಸವಕ್ಕೆ ಕಲಬುರಗಿಯ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಚಾಲನೆ ನೀಡಿ, ಈ ಭಾಗದಲ್ಲಿ ಅನೇಕ ಶರಣರು, ಸೂಫಿಸಂತರು ಜನಿಸಿದ್ದು, ಶಾಂತಿಯ ನೆಲವಾಗಿರುವ ತಲೇಖಾನ ಗ್ರಾಮದಲ್ಲಿ ಜನ್ಮ ಪಡೆದಿದ್ದು ನನ್ನ ಪುಣ್ಯ ಎಂದರು.

ಗ್ರಾಮಗಳು ಅಭಿವೃದ್ಧಿಯಾಗಬೇಕಾದರೇ ಇಲ್ಲಿನ ಜನರ ಸಹಕಾರ ತುಂಬ ಮುಖ್ಯವಾಗಿದೆ. ಚುನಾವಣೆ ನಡೆದಾಗ ಮಾತ್ರ ಪಕ್ಷಪಾತ ಮಾಡಬೇಕು ಚುನಾವಣೆ ಮುಗಿದ ಬಳಿಕ ಎಲ್ಲಾರೂ ಒಗ್ಗಟ್ಟಿನಿಂದ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ದೇವಸ್ಥಾನ ಸಮೀತಿ ವತಿಯಿಂದ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಹಾಗೂ ದೇವಪ್ಪ ರಾಠೋಡ ಅವರಿಗೆ ಸನ್ಮಾನಿಸಿದರು.

ದಸರಾ ಅಂಗವಾಗಿ ಅ.3ರಿಂದ ಆರಂಭವಾಗಿರುವ ಉತ್ಸವದಲ್ಲಿ 9ದಿನಗಳ ಕಾಲ ವಿವೀಧ ಬಗೆಯ ಧಾರ್ಮಿಕ ಕಾರ್ಯಕ್ರಮಗಳ ನಡೆಯುತ್ತದೆ. ಉತ್ಸವದಲ್ಲಿ ದೇವರಿಗೆ ನಿತ್ಯ ನೈವೇದ್ಯ ಪ್ರಸಾದ ಕಾರ್ಯಕ್ರಮ ಜರಗುಲಿದ್ದು, ಎಲ್ಲಾ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಿದೆ ಎಂದು ದೇವಸ್ಥಾನ ಸಮಿತಿ ಪರವಾಗಿ ರಘುರಾಜ ಕುಲಕರ್ಣಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿ.ಕೆ.ಶ್ರೀನಿವಾಸ, ನಾರಾಯಣರಾವ್ ಕುಲಕರ್ಣಿ ಸೇರಿದಂತೆ ಸಮಸ್ತ ವಿಪ್ರಸಮಾಜದ ಮುಖಂಡರು, ಅಧಿಕಾರಿಗಳು ಸೇರಿದಂತೆ ಸಂಗನಗೌಡ, ರುದ್ರಗೌಡ, ಬಸನಗೌಡ, ಕನಕಪ್ಪ ಗುಡಿಹಾಳ, ಹನಮಂತಪ್ಪ ಬಾಲದಂಡಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ