ನಾರಾಯಣ ಆಸ್ಪತ್ರೆಯಲ್ಲಿ ಸುಧಾರಿತ ಲೇಸರ್ ಚಿಕಿತ್ಸಾ ಘಟಕ ಪ್ರಾರಂಭ

KannadaprabhaNewsNetwork |  
Published : Mar 06, 2024, 02:16 AM IST
39 | Kannada Prabha

ಸಾರಾಂಶ

ನಾರಾಯಣ ಆಸ್ಪತ್ರೆ ಅತ್ಯಾಧುನಿಕ ಲೇಸರ್ ಸರ್ಜರಿ ಚಿಕಿತ್ಸಾ ಸೇವೆ ಪ್ರಾರಂಭಿಸಿದೆ. ಈ ಘಟಕದಲ್ಲಿ ಮೂಲವ್ಯಾದಿ, ಪಿಸ್ತುಲಾ, ಬಿರುಕುಗಳು, ಫಿಲೋನಿಡಲ್ಸೈನಸ್, ಲೇಸರ್ಲಿಪೊಸಕ್ಷನ್, ಉಬ್ಬಿರುವ ರಕ್ತನಾಳಗಳಿಗೆ ಎಂಡೋ ವೆನಸ್ ಲೇಸರ್ಅಬ್ಲೇಶನ್ ಜನನಾಂಗದ ನರಹುಲಿ ನಿವಾರಣೆ, ಲೇಸರ್ಹಿಸ್ಟರೊಸ್ಕೋಪಿ ಅಸಿಸ್ಟೆಡ್ರಿಪ್ರೊಡಕ್ಟಿವ್ ಟೆಕ್ನಾಲಜಿ, ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಮುಖ ಆರೋಗ್ಯ ಸೇವೆ ಒದಗಿಸುವ ನಾರಾಯಣ ಆಸ್ಪತ್ರೆಯು ಅತ್ಯಾಧುನಿಕ ಲೇಸರ್ ಸರ್ಜರಿ ಚಿಕಿತ್ಸಾ ಸೇವೆ ಪ್ರಾರಂಭಿಸಿದೆ. ಶಾಸಕ ತನ್ವೀರ್ ಸೇಠ್ ಮಂಗಳವಾರ ಈ ಘಟಕ ಉದ್ಘಾಟಿಸಿದರು. ಈ ಅತ್ಯಾಧುನಿಕ ಸೇವೆಗಳು ಮೈಸೂರಿನ ನಾರಾಯಣ ಆಸ್ಪತ್ರೆ ಮತ್ತು ವಿಜಯನಗರದ ನಾರಾಯಣ ಮೆಡಿಕಲ್ಸೆಂಟರ್ ಎರಡರಲ್ಲೂ ಲಭ್ಯವಿದೆ. ಹೊಸದಾಗಿ ಪ್ರಾರಂಭಿಸಲಾದ ಈ ಲೇಸರ್ ಸರ್ಜರಿ ಚಿಕಿತ್ಸಾ ಸೇವೆಗಳು ವಿವಿಧ ಆರೋಗ್ಯ ಕಾಳಜಿ ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ.

ಈ ಘಟಕದಲ್ಲಿ ಮೂಲವ್ಯಾದಿ, ಪಿಸ್ತುಲಾ, ಬಿರುಕುಗಳು, ಫಿಲೋನಿಡಲ್ಸೈನಸ್, ಲೇಸರ್ಲಿಪೊಸಕ್ಷನ್, ಉಬ್ಬಿರುವ ರಕ್ತನಾಳಗಳಿಗೆ ಎಂಡೋ ವೆನಸ್ ಲೇಸರ್ಅಬ್ಲೇಶನ್ ಜನನಾಂಗದ ನರಹುಲಿ ನಿವಾರಣೆ, ಲೇಸರ್ಹಿಸ್ಟರೊಸ್ಕೋಪಿ ಅಸಿಸ್ಟೆಡ್ರಿಪ್ರೊಡಕ್ಟಿವ್ ಟೆಕ್ನಾಲಜಿ, ಸಂಬಂಧಿಸಿದ ಸಮಸ್ಯೆಗಳಿಗೆ ಈ ಘಟಕದಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.

ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ನಾರಾಯಣ ಆಸ್ಪತ್ರೆಯಲ್ಲಿನ ವೈದ್ಯರ ತಂಡದ ಬಗ್ಗೆ ಹೆಮ್ಮೆ ಇದೆ. ಮೈಸೂರಿನಲ್ಲಿ ತನ್ನ ಸೇವೆ ಆರಂಭಿಸಿದ ದಿನದಿಂದ ನಾರಾಯಣ ಆಸ್ಪತ್ರೆಗೆ ಬೆಂಬಲ ನೀಡುತ್ತಿದ್ದೇನೆ. ಮೈಸೂರಿನಲ್ಲಿ ವೈದ್ಯಕೀಯ ಸೇವೆಯ ಪಯಣ ಮುಂದುವರೆಸಿ, ಈಗ ಆಸ್ಪತ್ರೆಯು ಸುಧಾರಿತ ಲೇಸರ್ ಚಿಕಿತ್ಸೆ ಪ್ರಾರಂಭಿಸುತ್ತಿರುವುದು ಬಹಳ ಒಳ್ಳೆಯದು. ಮೈಸೂರಿನ ಜನರಿಗೆ ಹೆಚ್ಚು ಅಗತ್ಯವಿರುವ ವೈದ್ಯಕೀಯ ಸೇವೆ ಒದಗಿಸುವುದಕ್ಕಾಗಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ನಾರಾಯಣ ಆಸ್ಪತ್ರೆಯ ವೈದ್ಯರ ತಂಡಕ್ಕೆ ನಾನು ಧನ್ಯವಾದ ಹೇಳುವುದಾಗಿ ಅವರು ತಿಳಿಸಿದರು.

ಆಸ್ಪತ್ರೆಯ ಫೆಸಿಲಿಟಿ ನಿರ್ದೇಶಕ ಪವನ್ ಕುಮಾರ್ ಮಾತನಾಡಿ, ನಾರಾಯಣ ಆಸ್ಪತ್ರೆಯಲ್ಲಿ ಸಹಾನುಭೂತಿಯೊಂದಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುತ್ತದೆ. ಸುಧಾರಿತ ಲೇಸರ್ ಚಿಕಿತ್ಸಾ ಸೇವೆ ಪರಿಚಯವು ನಮಗೆ ಮಹತ್ವದ ಮೈಲಿಗಲ್ಲಾಗಿದೆ. ನಾವು ಮೈಸೂರು ಪ್ರದೇಶದ ಜನರಿಗೆ ಗುಣಮಟ್ಟದ ಚಿಕಿತ್ಸೆಗೆ ಪ್ರವೇಶ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ