ಗ್ಯಾರಂಟಿ ಯೋಜನೆಗಳಿಂದ ಬಡವರ ಪ್ರಗತಿ

KannadaprabhaNewsNetwork | Published : May 11, 2025 11:49 PM
ದಿ.11-ಅರ್.ಪಿ.ಟಿ.1ಪಿ: ರಿಪ್ಪನ್‍ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಸುಮಾರು 17 ಎಕರೆ ವಿಸ್ತೀರ್ಣಾದ ಅನೆಕರೆ ಹೂಳೇತ್ತುವ ಕಾಮಗಾರಿಗೆ  ಶಾಸಕ ಹಾಗೂ ರಾಜ್ಯ ಅರಣ್ಯಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ  ಗೋಪಾಲಕೃಷ್ಣ ಬೇಳೂರು  ನೇರವೇರಿಸಿದರು. | Kannada Prabha

ರಿಪ್ಪನ್‍ಪೇಟೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಬಡ ಜನರು ಆಭಿವೃದ್ಧಿ ಹೊಂದುತ್ತಿದ್ದಾರೆ, ಇದು ಆಭಿವೃದ್ಧಿಯಲ್ಲವೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ರಿಪ್ಪನ್‍ಪೇಟೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಬಡ ಜನರು ಆಭಿವೃದ್ಧಿ ಹೊಂದುತ್ತಿದ್ದಾರೆ, ಇದು ಆಭಿವೃದ್ಧಿಯಲ್ಲವೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ರಿಪ್ಪನ್‍ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಸುಮಾರು 17 ಎಕರೆ ವಿಸ್ತೀರ್ಣಾದ ಅನೆಕರೆ ಹೂಳೇತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಅನೆಕೆರೆ ಹೂಳೆತ್ತುವ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ 50 ಲಕ್ಷ ರು ಅನುದಾನ ನೀಡಿದ್ದು, ಕೆರೆಯ ಅಭಿವೃದ್ಧಿಯೊಂದಿಗೆ ಅಂತರ್ಜಲ ಹೆಚ್ಚಿಸುವ ಮೂಲಕ ಕೆರೆಯ ಕೆಳಗಿನ ಸುಮಾರು 100 ಎಕರೆ ಅಚ್ಚುಕಟ್ಟು ರೈತರ ಭೂಮಿಗೆ ನೀರು ಹರಿಸುವುದರೊಂದಿಗೆ ಬೇಸಿಗೆಯಲ್ಲಿ ಜನಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ಹಾಗೂ ಬೇಸಿಗೆಯಲ್ಲಿ ಇತರೆ ಬೆಳೆಗಳಿಗೆ ನೀರು ಹರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಈಗಾಗಲೇ ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆರೆ ಹೂಳೆತ್ತಲು ಈಗಿನ ಸರ್ಕಾರ 18 ಕೋಟಿ ರು ಅನುದಾನವನ್ನು ಬಿಡುಗಡೆ ಮಾಡಿದ್ದು, ಅದರಂತೆ ಹೊಸನಗರ, ಸಾಗರ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಗೆ ಸೇರಲಾಗಿರುವ ಕೆರೆಗಳ ಆಭಿವೃದ್ಧಿಗೆ ಅನುದಾನವನ್ನು ನೀಡಲಾಗಿದೆ ಎಂದು ವಿವರಿಸಿದರು.

ಕುಡಿಯುವ ನೀರಿನ ಯೋಜನೆ ಕಾಮಗಾರಿ ಶೀಘ್ರ ಮುಗಿಸಿ:

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಜೆಜೆಎಂ ಕಾಮಗಾರಿ ಬರುವ ಡಿಸೆಂಬರ್ ಅಂತ್ಯದೊಳಗೆ ಮುಗಿಸಿ ಗ್ರಾಮೀಣ ಜನರಿಗೆ ಶುದ್ಧಕುಡಿಯುವ ನೀರು ದೊರೆಯುವಂತೆ ಮಾಡಲು ಗುತ್ತಿಗೆ ದಾರರಿಗೆ ಶಾಸಕರು ಖಡಕ್ ಎಚ್ಚರಿಕೆ ನೀಡಿದರು.

ಚಕ್ರಾನಗರದಿಂದ ಕಸಬಾ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ನೂರಾರು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು 500 ಕೋಟಿ ರು. ವೆಚ್ಚದ ಜೆಜೆಎಂ ಯೋಜನೆ ಜಾರಿಗೊಳಿಸಲಾಗಿದ್ದು, ಕಾಮಗಾರಿ ಸಹ ಭರದಿಂದ ಸಾಗಿದೆ ಎಂದು ತಿಳಿಸಿದರು.ಕೆರೆ ಒತ್ತುವರಿದಾರರನ್ನು ತೆರವುಗೊಳಿಸಿ:

ಆನೆಕೆರೆಯನ್ನು ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದಾರೆಂದು ಶಾಸಕರ ಬಳಿ ಗ್ರಾಮಸ್ಥರು ನೀಡಿದ ದೂರಿಗೆ ಸ್ಪಂದಿಸಿ ತಹಸೀಲ್ದಾರ್ ರಶ್ಮಿ ಹಾಲೇಶಪ್ಪನವರಿಗೆ ಕೂಡಲೇ ಕೆರೆ ಒತ್ತುವರಿದಾರರನ್ನು ತೆರವುಗೊಳಿಸಿ ಕೆರೆಯ ಅಭಿವೃದ್ಧಿಗೆ ಸಹಕರಿಸುವಂತೆ ಸೂಚಿಸಿ, ಅಡ್ಡಿ ಮಾಡಿದರೆ ಆಂತಹವರ ವಿರುದ್ಧ ಠಾಣೆಗೆ ದೂರು ನೀಡಿ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಪಿಎಸ್‍ಐ ಗೆ ಸೂಚಿಸಿದರು.

ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಅಚಾರ್ ಆಧ್ಯಕ್ಷತೆ ವಹಿಸಿದ್ದರು.ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರುಮೌಳಿಗೌಡರು, ಸಾಗರ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಕಲಸ ಚಂದ್ರಪ್ಪ, ತಹಸೀಲ್ದಾರ್ ರಶ್ಮಿ ಕಾಲೇಶಪ್ಪ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಸತೀಶ್, ಬಾಳೂರು ಗ್ರಾಮ ಪಂಚಾಯತ್ ಸದಸ್ಯರಾದ ರಾಜುಗೌಡ, ದಿವಾಕರ, ಶಿವಮ್ಮ, ಲೀಲಾವತಿ, ಪಾರ್ವತಮ್ಮ, ರೇಖಾ, ಶಶಿಕಲಾ, ಬಾಳೂರು ಘಟಕದ ಕಾಂಗ್ರೆಸ್ ಅಧ್ಯಕ್ಷ ಸಂತೋಷ(ಚಿಂಟು), ಸಣ್ಣಕ್ಕಿ ಮಂಜು, ಶಿವಪ್ಪ ವಡಾಹೊಸಳ್ಳಿ, ನೆವಟೂರು ಅನೆಕೆರೆ ಬಾಳೂರು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.