ಜಾನುವಾರುಗಳ ಆರೋಗ್ಯ ನಿರ್ವಹಣೆಯ ಕುರಿತು ರೈತರಿಗೆ ಸಲಹೆ

KannadaprabhaNewsNetwork |  
Published : Sep 07, 2026, 01:45 AM IST
6ಎಚ್ಎಸ್ಎನ್3 :  | Kannada Prabha

ಸಾರಾಂಶ

ತಪಾಸಣೆಯ ಸಂದರ್ಭದಲ್ಲಿ ಜಾನುವಾರುಗಳಲ್ಲಿ ಗೈನಕಾಲಜಿಗೆ ಸಂಬಂಧಿಸಿದ ಸಮಸ್ಯೆಗಳು, ಮ್ಯಾಗಟ್ ಗಾಯ, ಜಂತುಹುಳು ಬಾಧೆ, ಮಾಸ್ಟೈಟಿಸ್, ಅಬ್ಸೆಸ್, ಗರ್ಭಧಾರಣೆ, ಮೆಟ್ರೈಟಿಸ್ ಹಾಗೂ ಕಾಲಿನ ಗಾಯ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲಾಯಿತು. ಗರ್ಭಧಾರಣೆ ಪತ್ತೆಗಾಗಿ ಬಳಸಲಾಯಿತು. ಮ್ಯಾಗಟ್ ಗಾಯ ಮತ್ತು ಜಂತುಹುಳು ಬಾಧೆಗೆ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು. ಹೀಟ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇಂಜೆಕ್ಷನ್‌ನ ಬಳಕೆಯ ಕುರಿತು ಪಶುವೈದ್ಯರು ಮಾಹಿತಿ ನೀಡಿದರು. ಮಾಸ್ಟೈಟಿಸ್, ಮೆಟ್ರೈಟಿಸ್ ಹಾಗೂ ಇತರ ಸೋಂಕುಗಳಿಗೆ ವೈದ್ಯರ ಸಲಹೆಯಂತೆ ಸೂಕ್ತ ಔಷಧೋಪಚಾರ ನೀಡಲಾಯಿತು

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಊಪಿನಹಳ್ಳಿ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದ ಮುಖ್ಯ ಉದ್ದೇಶ ಗ್ರಾಮಸ್ಥರ ಜಾನುವಾರುಗಳ ಆರೋಗ್ಯ ತಪಾಸಣೆ ನಡೆಸಿ, ಅವುಗಳಲ್ಲಿರುವ ವಿವಿಧ ರೋಗಗಳನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ಹಾಗೂ ಆರೋಗ್ಯ ನಿರ್ವಹಣೆಯ ಕುರಿತು ರೈತರಿಗೆ ಸಲಹೆ ನೀಡುವುದಾಗಿತ್ತು.ಶಿಬಿರದಲ್ಲಿ ಒಟ್ಟು ೫೧ ರೈತರು ತಮ್ಮ ಜಾನುವಾರುಗಳೊಂದಿಗೆ ಭಾಗವಹಿಸಿದರು. ಒಟ್ಟು ೨೧೩ ಜಾನುವಾರುಗಳಿಗೆ ಪಶುವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು. ಶಿಬಿರದಲ್ಲಿ ಒಟ್ಟು ೩೪ ಪಶುವೈದ್ಯರು ಭಾಗವಹಿಸಿ ಜಾನುವಾರುಗಳ ತಪಾಸಣೆ, ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ನಮ್ಮ ಕೃಷಿ ಮಹಾವಿದ್ಯಾಲಯದ ಡೀನ್ ಬಸವರಾಜು, ಸಂಯೋಜಕರಾದ ಶಶಿಕಲಾ ಹಾಗೂ ಸಹ ಸಂಯೋಜಕರಾದ ಚಂದನ ಅವರು ಆಗಮಿಸಿ ಶಿಬಿರಕ್ಕೆ ಪ್ರೋತ್ಸಾಹ ನೀಡಿದರು.ತಪಾಸಣೆಯ ಸಂದರ್ಭದಲ್ಲಿ ಜಾನುವಾರುಗಳಲ್ಲಿ ಗೈನಕಾಲಜಿಗೆ ಸಂಬಂಧಿಸಿದ ಸಮಸ್ಯೆಗಳು, ಮ್ಯಾಗಟ್ ಗಾಯ, ಜಂತುಹುಳು ಬಾಧೆ, ಮಾಸ್ಟೈಟಿಸ್, ಅಬ್ಸೆಸ್, ಗರ್ಭಧಾರಣೆ, ಮೆಟ್ರೈಟಿಸ್ ಹಾಗೂ ಕಾಲಿನ ಗಾಯ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಲಾಯಿತು. ಗರ್ಭಧಾರಣೆ ಪತ್ತೆಗಾಗಿ ಬಳಸಲಾಯಿತು. ಮ್ಯಾಗಟ್ ಗಾಯ ಮತ್ತು ಜಂತುಹುಳು ಬಾಧೆಗೆ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು. ಹೀಟ್‌ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇಂಜೆಕ್ಷನ್‌ನ ಬಳಕೆಯ ಕುರಿತು ಪಶುವೈದ್ಯರು ಮಾಹಿತಿ ನೀಡಿದರು. ಮಾಸ್ಟೈಟಿಸ್, ಮೆಟ್ರೈಟಿಸ್ ಹಾಗೂ ಇತರ ಸೋಂಕುಗಳಿಗೆ ವೈದ್ಯರ ಸಲಹೆಯಂತೆ ಸೂಕ್ತ ಔಷಧೋಪಚಾರ ನೀಡಲಾಯಿತು. ಅಬ್ಸೆಸ್ ಇರುವ ಜಾನುವಾರುಗಳಲ್ಲಿ ಕೀವು ಹೊರತೆಗೆದು, ಆಂಟಿಬಯಾಟಿಕ್ ಮತ್ತು ಸ್ಪ್ರೇ ಮೂಲಕ ಚಿಕಿತ್ಸೆ ನೀಡಲಾಯಿತು. ಕಾಲಿನ ಗಾಯಗಳಿಗೆ ಹಾಗೂ ಕ್ಯಾಲ್ಸಿಯಂ ಸಿರಪ್ ಮುಂತಾದ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ನೀಡಲಾಯಿತು. ಶಿಬಿರದ ಮೂಲಕ ರೈತರಿಗೆ ಜಾನುವಾರುಗಳ ಆರೋಗ್ಯ ತಪಾಸಣೆ, ರೋಗಗಳ ಆರಂಭಿಕ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯ ಮಹತ್ವ ಹಾಗೂ ನಿಯಮಿತ ಪಶುವೈದ್ಯಕೀಯ ಆರೈಕೆಯ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಪಶುವೈದ್ಯರು, ಶಿಕ್ಷಕರು, ರೈತರು ಹಾಗೂ ಇತರ ಭಾಗವಹಿಸಿದವರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲರಿಗೂ ಊಟವನ್ನು ವಿತರಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಮಾರೋಪಗೊಳಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ ಕಲ್ಯಾಣಾರ್ಥ ಕಲ್ಯಾಣೋತ್ಸವ ಪೂಜಾ ಮಹೋತ್ಸವ
ಶಿಕ್ಷಕ ವೃತ್ತಿಗೆ ಸಿಗುವ ಗೌರವ ಮತ್ತ್ಯಾವ ವೃತ್ತಿಗೂ ಸಿಗಲಾರದು