ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಲು ಸಲಹೆ

KannadaprabhaNewsNetwork |  
Published : Jan 05, 2026, 01:30 AM IST
ಪೊಟೊ-4ಕೆಎನ್‌ಎಲ್‌ಎಮ್‌1-ಪದಗ್ರಹಣ: ನೆಲಮಂಗಲ ವಿವಿಎಸ್ ಕನ್ವಿಕ್ಷನ್ ಹಾಲ್‌ನಲ್ಲಿ ರೋಟರಿ ಬೆಂಗಳೂರು ಅರುಣೋಧಯ  ಸಂಸ್ಥೆಯಿಂದ ಆಯೋಜಿಸಿದ್ದ ಸಂಸ್ಥಾಪಕ ಪದಗ್ರಹಣ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ನೂತನ ಸಂಸ್ಥಾಪಕ ಅಧ್ಯಕ್ಷರಾಗಿ ಎಂ.ಗಂಗಣ್ಣ ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲಾ ಪಾಲಕಿ ಎಲಿಜಬೆತ್ ಚರಿಯನ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನೆಲಮಂಗಲ: ರೋಟರಿ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುವ ಕಾರ್ಯ ನಿರಂರವಾಗಿ ನಡೆಯಲಿ ಎಂದು ರೋಟರಿ ಜಿಲ್ಲಾ ಪಾಲಕಿ ಡಾ.ಎಲಿಜಬೆತ್ ಚೆರಿಯನ್ ಹೇಳಿದರು.

ನೆಲಮಂಗಲ: ರೋಟರಿ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸುವ ಕಾರ್ಯ ನಿರಂರವಾಗಿ ನಡೆಯಲಿ ಎಂದು ರೋಟರಿ ಜಿಲ್ಲಾ ಪಾಲಕಿ ಡಾ.ಎಲಿಜಬೆತ್ ಚೆರಿಯನ್ ಹೇಳಿದರು.

ನಗರದಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೂತನ ಕ್ಲಬ್‌ನ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.

ನೂತನ ಅಧ್ಯಕ್ಷ ಗಂಗಣ್ಣ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಮ್ಮ ಸಂಸ್ಥೆ ಸಲಹೆಗಾರರಾದ ನವೀನ್‌ಕುಮಾರ್ ಮಾರ್ಗದರ್ಶನದಲ್ಲಿ‌ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.

ನಗರದ ಜಯನಗರ ಸರ್ಕಾರಿ ಶಾಲೆಗೆ ರೋಟರಿ ಸಂಸ್ಥೆ ನೆಲಮಂಗಲ ಹಾಗೂ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಸಹಯೋಗದಲ್ಲಿ ಉಚಿತ ಶುದ್ದ ಕುಡಿಯುವ ನೀರಿನ ಘಟಕ ನೀಡಲಾಯಿತು.

ರೋಟರಿ ವೊಕೇಷನಲ್ ಎಕ್ಸಲೆನ್ಸ್ ಪ್ರಶಸ್ತಿ: ತಾಲೂಕಿನ ಕಾಸರಘಟ್ಟದ ಪ್ರಗತಿ ಪರ ರೈತ ಹೋರಾಟಗಾರ ಹಾಗೂ ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಸಿ.ಗಂಗಾಧರ್ ಕಾಸರಘಟ್ಟ ಅವರಿಗೆ ರೋಟರಿ ವೊಕೇಷನಲ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪದಾಧಿಕಾರಿಗಳ ಪದಗ್ರಹಣ:

ನೂತನ ಅಧ್ಯಕ್ಷರಾಗಿ ಎಂ.ಗಂಗಣ್ಣ, ಕಾರ್ಯದರ್ಶಿ ಕೇಶವಮೂರ್ತಿ, ಉಪಾಧ್ಯಕ್ಷ ಸುರೇಶ್, ಖಜಾಂಚಿ ಕಿರಣ್‌ಕುಮಾರ್, ಸಹ ಕಾರ್ಯದರ್ಶಿ ಗೋವಿಂದರಾಜು, ಬುಲೆಟ್ ಎಡಿಟರ್ ಕಿರಣ್, ನಿಯೋಜಿತ ಅದ್ಯಕ್ಷ ಹನುಮಂತರಾಜು, ನಿರ್ದೇಶಕರಾಗಿ ಕೃಷ್ಣಪ್ಪ, ನಟರಾಜು, ವಿಜಯ್‌ಕುಮಾರ್, ನಂದಕುಮಾರ್, ಭಾನುಪ್ರಕಾಶ್, ರವಿಶಂಕರ್, ಗಂಗಾಧರ್, ಚೌಡಪ್ಪ, ಗಂಗರಾಜು, ಗಣೇಶಮೂರ್ತಿ ಪ್ರಸನ್ನಕುಮಾರ್, ಶಶಿಕುಮಾರ್, ಚಂದ್ರಶೇಖರ್ ಪದಗ್ರಹಣ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಉಮೇಶ್, ಜಗದೀಶ್, ದೇವದಾಸನ್, ಜಿಲ್ಲಾ ಉಪಪಾಲಕ ಕಿರಣ್, ನೂತನ ಕ್ಲಬ್ ಮಾರ್ಗದರ್ಶಕ ಎಂ.ಟಿ.ನವೀನ್‌ಕುಮಾರ್, ನೆಲಮಂಗಲ ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು, ಕಾರ್ಯದರ್ಶಿ ರವಿಕುಮಾರ್ ಮಾಜಿ ಅಧ್ಯಕ್ಷ ಹೆಚ್.ರಾಜು, ಟಿ.ನಾಗರಾಜು, ಕೆ.ಮಂಜುನಾಥ್, ವನರಾಜು, ಟಿ.ನಾಗರಾಜು, ವಿ.ಆರ್.ಸ್ವಾಮಿ‌, ಕಾರ್ಯದರ್ಶಿ ಕೇಶವಮೂರ್ತಿ, ಉಪಾಧ್ಯಕ್ಷ ಸುರೇಶ್, ಖಜಾಂಚಿ ಕಿರಣ್‌ಕುಮಾರ್, ಸಹ ಕಾರ್ಯದರ್ಶಿ ಗೋವಿಂದರಾಜು, ರೋಟರಿ ಅರುಣೋದಯ ಬುಲೆಟ್ ಎಡಿಟರ್ ಕಿರಣ್, ನಿಯೋಜಿತ ಅದ್ಯಕ್ಷ ಹನುಮಂತರಾಜು, ನಿರ್ದೇಶಕರಾಗಿ ಕೃಷ್ಣಪ್ಪ, ನಟರಾಜು, ವಿಜಯ್‌ಕುಮಾರ್, ನಂದಕುಮಾರ್, ಭಾನುಪ್ರಕಾಶ್, ರವಿಶಂಕರ್, ಗಂಗಾಧರ್, ಚೌಡಪ್ಪ, ಗಂಗರಾಜು, ಗಣೇಶಮೂರ್ತಿ ಪ್ರಸನ್ನಕುಮಾರ್, ಶಶಿಕುಮಾರ್, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದರು.

ಪೊಟೊ-4ಕೆಎನ್‌ಎಲ್‌ಎಮ್‌1

ನೆಲಮಂಗಲದಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಆಯೋಜಿಸಿದ್ದ ಸಂಸ್ಥಾಪಕ ಪದಗ್ರಹಣ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ನೂತನ ಸಂಸ್ಥಾಪಕ ಅಧ್ಯಕ್ಷರಾಗಿ ಎಂ.ಗಂಗಣ್ಣ ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲಾ ಪಾಲಕಿ ಎಲಿಜಬೆತ್ ಚರಿಯನ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ