25 ವರ್ಷದ ಬಳಿಕ ಕಾಫಿನಾಡಿ ಸಚಿವ ಸ್ಥಾನ, ಆರತಿ ಕೃಷ್ಣ ಬಹುತೇಕ ಫೈನಲ್‌ !

KannadaprabhaNewsNetwork |  
Published : Aug 01, 2026, 01:15 AM IST
ಆರತಿ ಕೃಷ್ಣ | Kannada Prabha

ಸಾರಾಂಶ

ಚಿಕ್ಕಮಗಳೂರುಬರೋಬ್ಬರಿ 25 ವರ್ಷದ ಬಳಿಕ ಚಿಕ್ಕಮಗಳೂರಿನ ಕಾಂಗ್ರೆಸ್‌ ಪಕ್ಷದ ಸ್ಥಳೀಯ ನಾಯಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಹಾಗೂ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಹೆಸರು ಮುಂಚೂಣಿಯಲ್ಲಿದೆ.

ಹೈಕಮಾಂಡ್‌ ಮಟ್ಟದಲ್ಲಿ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಪಡೆಯುವವರ ಹೆಸರು ಅಂತಿಮ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬರೋಬ್ಬರಿ 25 ವರ್ಷದ ಬಳಿಕ ಚಿಕ್ಕಮಗಳೂರಿನ ಕಾಂಗ್ರೆಸ್‌ ಪಕ್ಷದ ಸ್ಥಳೀಯ ನಾಯಕರಿಗೆ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಹಾಗೂ ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ ಹೆಸರು ಮುಂಚೂಣಿಯಲ್ಲಿದೆ.

ಕಾಂಗ್ರೆಸ್‌ ಹೈಕಮಾಂಡ್‌ ಮಟ್ಟದಲ್ಲಿ ಚಿಕ್ಕಮಗಳೂರಿನ ಕಾಂಗ್ರೆಸ್‌ ಶಾಸಕರು, ವಿಧಾನಸಭಾ ಸದಸ್ಯರು ಸಚಿವ ಸ್ಥಾನಕ್ಕೆ ದೊಡ್ಡಮಟ್ಟದಲ್ಲಿ ಲಾಭಿ ನಡೆಸುತ್ತಿದ್ದು, ಜಿಲ್ಲೆಯ ಹಲವು ಕಾಂಗ್ರೆಸ್‌ ಮುಖಂಡರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಶುಕ್ರವಾರ ಸಂಜೆ ಹೈಕಮಾಂಡ್‌ ಮಟ್ಟದಲ್ಲಿ ಸಭೆ ನಡೆದಿದೆ. ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಪಡೆಯುವವರು ಯಾರು ಎಂಬುದು ಅಂತಿಮವಾಗಿದೆ.

ಮೂಲಗಳ ಮಾಹಿತಿ ಪ್ರಕಾರ, ಹಾಲಿ ವಿಧಾನ ಪರಿಷತ್ ಸದಸ್ಯೆ ಹಾಗೂ ಕಳೆದ 15 ವರ್ಷಕ್ಕೂ ಅಧಿಕ ಕಾಲದಿಂದ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಸೇವೆ ಸಲ್ಲಿಸುತ್ತಿರುವ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎನ್ನಲಾಗುತ್ತಿದೆ.

ಒಕ್ಕಲಿಗ ಮಹಿಳಾ ಕೋಟಾದಡಿ ನಿರೀಕ್ಷೆ

ರಾಜ್ಯದಲ್ಲಿ ಬರೋಬ್ಬರಿ ಕಳೆದ 65 ವರ್ಷದಿಂದ ಒಕ್ಕಲಿಗ ಸಮುದಾಯದ ಯಾವುದೇ ಮಹಿಳೆಗೆ ಸಚಿವ ಸ್ಥಾನ ನೀಡಿಲ್ಲ. 1962 ರಲ್ಲಿ ಕೊನೆಯದಾಗಿ ಒಕ್ಕಲಿಗ ಮಹಿಳೆಗೆ ಸಚಿವ ಸ್ಥಾನ ನೀಡಲಾಗಿತ್ತು. ಆ ಬಳಿಕ ಈ ಬಾರಿ ಕಾಂಗ್ರೆಸ್‌ ಸರ್ಕಾರ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

---ಬಾಕ್ಸ್‌---

ಎನ್‌ಆರ್‌ಐ ಸಚಿವಾಲಯಕ್ಕೆ ಬೇಕಿದೆ ಆರತಿ ಕೃಷ್ಣ

ಈ ಹಿಂದೆ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರತಿ ಕೃಷ್ಣ ಅವರಿಗೆ ವಿವಿಧ ದೇಶಗಳ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇವರು ಯಾವುದೇ ದೇಶದಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದಾಗಲೂ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದೀಗ ರಾಜ್ಯ ಸರ್ಕಾರ ಅನಿವಾಸಿ ಭಾರತೀಯ ಸಚಿವಾಲಯ ಆರಂಭಿಸಿದ್ದು, ಈ ಸಚಿವಾಲಯದ ಸಮರ್ಥನಿರ್ವಹಣೆ ಆರತಿ ಕೃಷ್ಣ ಅವರಿಂದ ಮಾತ್ರ ಸಾಧ್ಯ. ಈ ಲೆಕ್ಕಚಾರದಲ್ಲಿ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗುತ್ತಿದೆ.

ಇದರ ಜೊತೆಗೆ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ. ಬೇಗಾನೆ ರಾಮಯ್ಯ ಅವರು ಮಲೆನಾಡಿನಲ್ಲಿ ತಮ್ಮದೇ ಆದ ಹೆಸರು ಉಳಿಸಿ ಹೋಗಿದ್ದಾರೆ. ಇಂದಿಗೂ ಕಾಫಿನಾಡಿನ ಮಲೆನಾಡು ಭಾಗದ ಜನ ಕೊಳವೆ ಬಾವಿಗಳನ್ನು ನೋಡಿದ್ದು ಬೇಗಾನೆ ರಾಮಯ್ಯ ಅವರು ಸಚಿವರಾಗಿದ್ದಾಗಲೇ ಹೀಗಾಗಿ ಇಂದಿಗೂ ಅವರ ಹೆಸರು ಮಲೆನಾಡಿನಲ್ಲಿ ಜನಜನಿತವಾಗಿದೆ. ಇದರೊಂದಿಗೆ ಆರತಿ ಕೃಷ್ಣ ಅವರ ಅಂತಾರಾಷ್ಟ್ರೀಯ ಪ್ರಭಾವದ ಕಾರಣದಿಂದ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗುತ್ತಿದೆ.

---ಬಾಕ್ಸ್‌---

25 ವರ್ಷದಿಂದ ಸ್ಥಳೀಯರಿಗೆ ಸಚಿವ ಸ್ಥಾನ ಸಿಕ್ಕಿಲ್ಲ

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಚಿಕ್ಕಮಗಳೂರಿನ ಸ್ಥಳೀಯ ಮೂವರು ಮುಖಂಡರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿರಲಿಲ್ಲ. ಇನ್ನೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿ.ಟಿ.ರವಿ ಹಾಗೂ ಜೀವರಾಜ್‌ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಬಿಟ್ಟರೆ ಇನ್ಯಾರಿಗೂ ಕಳೆದ 25 ವರ್ಷದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಇದೀಗ, ಚಿಕ್ಕಮಗಳೂರಿನ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದೆ.

-- ಬಾಕ್ಸ್‌ ---

ಕುರುಬ ಕೋಟಾದಡಿ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಲ್ಲಿಯೇ ಸ್ಪರ್ಧೆಶುಕ್ರವಾರವಷ್ಟೇ ಹೈಕೋರ್ಟ್‌ ಗಾಯತ್ರಿ ಶಾಂತೇಗೌಡ ಅವರು ವಿಧಾನಪರಿಷತ್‌ ಸದಸ್ಯರು ಎಂದು ಘೋಷಿಸಿದ್ದು, ಗಾಯತ್ರಿ ಶಾಂತೇಗೌಡರ ಪರವಾಗಿ ಫಲಿತಾಂಶ ಬರುವ ನಿರೀಕ್ಷೆ ಮೊದಲೇ ಇದ್ದರಿಂದ ಈಗಾಗಲೇ ಸಚಿವ ಸ್ಥಾನಕ್ಕೆ ಕುರುಬ ಸಮುದಾಯದ ಕೋಟಾದಡಿ ಸಚಿವ ಸ್ಥಾನ ಲಾಭಿ ಆರಂಭಿಸಿದ್ದಾರೆ. ಈ ನಡುವೆ ತರೀಕೆರೆ ಶಾಸಕ ಶ್ರೀನಿವಾಸ್‌ ಹಾಗೂ ಕಡೂರಿನ ಶಾಸಕ ಆನಂದ್‌ ಸಹ ದೆಹಲಿಯಲ್ಲಿ ಬೀಡುಬಿಟ್ಟು ಕುರುಬ ಕೋಟಾದಡಿ ಸಚಿವ ಸ್ಥಾನಕ್ಕೆ ಲಾಭಿ ನಡೆಸುತ್ತಿದ್ದಾರೆ.-- ಕೋಟ್‌ --

ಎಐಸಿಸಿ ಕಾರ್ಯದರ್ಶಿಯಾಗಿ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯಾಗಿ, ವಿಧಾನಪರಿಷತ್ ಸದಸ್ಯರಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇವೆ ಸಲ್ಲಿಸಿದ್ದೇನೆ. ಅತಿ ಮುಖ್ಯವಾಗಿ ಚಿಕ್ಕಮಗಳೂರಿನ ಸ್ಥಳೀಯ ನಾಯಕರಿಗೆ ಕಳೆದ 25 ವರ್ಷದಿಂದ ಸಚಿವ ಸ್ಥಾನ ನೀಡಿಲ್ಲ. ರಾಜ್ಯದಲ್ಲಿ ಕಳೆದ 65 ವರ್ಷದಿಂದ ಒಕ್ಕಲಿಗ ಮಹಿಳೆಯೊಬ್ಬರಿಗೆ ಯಾವುದೇ ಸರ್ಕಾರ ಸಚಿವ ಸ್ಥಾನ ನೀಡಿಲ್ಲ. ಈ ಎಲ್ಲ ಅಂಶಗಳೊಂದಿಗೆ ಹಿರಿತನ ಪರಿಗಣಿಸಿ ಸಚಿವ ದೊರೆಯಲಿದೆ ಎಂಬ ವಿಶ್ವಾಸವಿದೆ.

- ಆರತಿ ಕೃಷ್ಣ, ವಿಧಾನಪರಿಷತ್ತು ಸದಸ್ಯರು

(ಚಿಕ್ಕಮಗಳೂರು ಜಿಲ್ಲೆಯ ನಕ್ಷೆ ಸಹ ಬಳಸಬಹುದು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಡ್ರೋನ್ ಪ್ರಯೋಗಾಲಯ
ತಮಿಳುನಾಡಿಗೆ ನೀರು ಹರಿಸುವುದು ಬೇಡ