ಗ್ಯಾಸ್‌ ಬಿಸಿ ಬಳಿಕ ಈಗ ತರಕಾರಿ ದರ ಏರಿಕೆ ಬರೆ

KannadaprabhaNewsNetwork |  
Published : May 10, 2026, 01:45 AM ISTUpdated : May 10, 2026, 12:09 PM IST
vegetable

ಸಾರಾಂಶ

ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ಬೆಲೆ ಜನರಿಗೆ ಸಂಕಷ್ಟ ಇನ್ನಷ್ಟು ಹೆಚ್ಚು ಮಾಡಿದೆ. ಕಳೆದ ಹದಿನೈದು ದಿನಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಳವಾಗಿದೆ.

 ಬೆಂಗಳೂರು : ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ಬೆಲೆ ಜನರಿಗೆ ಸಂಕಷ್ಟ ಇನ್ನಷ್ಟು ಹೆಚ್ಚು ಮಾಡಿದೆ. ಕಳೆದ ಹದಿನೈದು ದಿನಕ್ಕೆ ಹೋಲಿಸಿದರೆ ಕೆಲವು ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಳವಾಗಿದೆ.

ಕೆಲವೆಡೆ ಸುರಿದ ಭಾರೀ ಮಳೆ

ಬಿಸಿಲಿನ ತಾಪಕ್ಕೆ ತರಕಾರಿಗಳ ಹೂವು ಉದುರುತ್ತಿದ್ದು, ಇತ್ತೀಚೆಗೆ ಕೆಲವೆಡೆ ಸುರಿದ ಭಾರೀ ಮಳೆಯಿಂದಲೂ ಇಳುವರಿ ಕಡಿಮೆ ಆಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ವಿವಾಹ, ಊರ ಹಬ್ಬ, ಜಾತ್ರೆ, ರಥೋತ್ಸವಗಳ ಹಿನ್ನೆಲೆಯಲ್ಲಿ ತರಕಾರಿಗೆ ಬೇಡಿಕೆ ಹೆಚ್ಚಾಗಿದ್ದು ಪೂರೈಕೆಯ ಪ್ರಮಾಣ ಕಡಿಮೆ ಇರುವುದೂ ಸಹ ದರ ಹೆಚ್ಚಳಕ್ಕೆ ಕಾರಣವಾಗಿದೆ. 10 ದಿನದ ಹಿಂದೆ ಕೆಜಿ ಬೀನ್ಸ್‌ಗೆ 80 ರುಪಾಯಿ ಇದ್ದದ್ದು ಈಗ 200 ರು ತಲುಪಿದೆ. ಬೀನ್ಸ್‌ಗೆ ಡಿಮ್ಯಾಂಡ್‌ ಹೆಚ್ಚಾಗಿರುವುದರಿಂದ ಬೆಲೆ ಅಧಿಕವಾಗಿದೆ.

ವಾರದ ಹಿಂದೆ ಕೆಜಿ ಕ್ಯಾರೆಟ್‌ಗೆ 30 ರು. ಇದ್ದದ್ದು ಈಗ 60 ರು. ಆಗಿದೆ. 120 ರು. ಇದ್ದ ಬಟಾಣಿ 360 ರು. ಆಗಿದೆ. 120 ರು. ಇದ್ದ ಡಬಲ್‌ ಬೀನ್ಸ್‌ 260 ಕ್ಕೆ, 30 ರು. ಇದ್ದ ಸೌತೆ ಕಾಯಿ 60 ರುಪಾಯಿಗೆ, ಒಂದು ಕೆಜಿ ಟೊಮೆಟೋ 30 ರು. ಇದ್ದದ್ದು ಈಗ 60 ರುಪಾಯಿ ಆಗಿದೆ. ಹಸಿ ಮೆಣಸಿನ ಕಾಯಿ 70 ರು.ನಿಂದ 95 ರುಪಾಯಿಗೆ, ಬೀಟ್‌ರೋಟ್‌ 45 ರುಪಾಯಿಯಿಂದ 70 ರುಪಾಯಿಗೆ, ಕ್ಯಾಪ್ಸಿಕಮ್‌ 65 ರಿಂದ 90, ಎಲೆಕೋಸು 30 ರಿಂದ 50, ಹೂ ಕೋಸು 40 ರಿಂದ 65 ರುಪಾಯಿಗೆ ಹೆಚ್ಚಳವಾಗಿದೆ. ಸದ್ಯ ದರ ಇಳಿಕೆ ಲಕ್ಷಣಗಳು ಕಂಡು ಬರುತ್ತಿಲ್ಲ.

ತರಕಾರಿ ಹಿಂದಿನ ದರ ಪ್ರಸ್ತುತ ದರ

ಕ್ಯಾರೆಟ್‌3060

ಬಟಾಣಿ120360

ಸೌತೆಕಾಯಿ3060

ಬೀಟ್‌ರೂಟ್‌4570

ಟೊಮೆಟೋ3060

ಕ್ಯಾಪ್ಸಿಕಮ್‌6590

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಕ್ಷತೆ, ಪಾರದರ್ಶಕತೆ ಇದ್ದರೆ ಸಂಘಟನೆ ಪ್ರಗತಿ: ಮಲ್ಲಿಕಾರ್ಜುನ ಬಳ್ಳಾರಿ
ಫಾಸ್ಟ್‌ಫುಡ್‌ ಬದಲು ತರಕಾರಿ, ಹಣ್ಣು ದೇಹಕ್ಕೆ ಉತ್ತಮ