ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ. 21 ರ ನಂತರ ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಯಾರು ಹಾಗೂ 2028 ರ ಚುನಾವಣೆಯ ನಂತರದ ಮುಖ್ಯಮಂತ್ರಿ ಆಯ್ಕೆಯ ಊಹಾಪೋಹ ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುಮಾರು ಒಂದೂದರೆ ಕೋಟೆ ಜನಸಂಖ್ಯೆಯ ದಲಿತ ಜನಾಂಗಳಲ್ಲಿ ರಾಜಕೀಯ ಚಿಂತನೆಗಳು ದೊಡ್ಡ ಅಲೆಗಳನ್ನೇ ಎಬ್ಬಿಸಿವೆ. ಈ ಹಿಂದೆ ದಲಿತ ಸಂಘಟನೆಗಳು ದಲಿತ ಮುಖ್ಯಮಂತ್ರಿ ಹೋರಾಟ ಆರಂಭಿಸಿದ್ದಕ್ಕಾಗಿ ದಲಿತ ಉಪ ಮುಖ್ಯಮಂತ್ರಿ ಮಾಡುವ ಇಚ್ಛಾಶಕ್ತಿ ರಾಜಕೀಯ ಪಕ್ಷಗಳಲ್ಲಿ ಮೂಡಿಬಂದು ಬಿಜೆಪಿ. ಮತ್ತು ಕಾಂಗ್ರೆಸ್ ಆಡಳಿತಗಳಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಾಗಿದ್ದರು ಎಂದರು.ಸಿದ್ದರಾಮಯ್ಯಗೆ ವಿರೋಧ ಇಲ್ಲ
ಸಮರ್ಥ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರನ್ನು ಮುಂದಿನ ಎರಡೂದರೆ ವರ್ಷಗಳಿಗೆ ಮುಂದುವರೆಸುವುದಾದರೆ ದಲಿತ ಸಂಘಟನೆಗಳ ಯಾವುದೇ ತಕಾರಾರು ಇಲ್ಲ. ಆದರೆ ಇದೀಗ ದಲಿತ ಸಂಘಟನೆಗಳು ಮತ್ತು ದಲಿತ ಜನಾಂಗವು ರಾಜಕೀಯವಾಗಿ ಜಾಗೃತಿಗೊಂಡು ಬೀದಿಗಿಳಿದು ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡುವ ಕಾಲ ಸನ್ನಿಹಿತವಾಗಿದೆ. ದಲಿತರು ಮುಖ್ಯಮಂತ್ರಿ ಆಗುವಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದು ದಲಿತ ನಾಯಕತ್ವವನ್ನು ಹಿಂದಕ್ಕೆ ಸರಿಸಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಪಕ್ಷವು ಇಂದಿಗೂ ಸಹ ದಲಿತರ ಋಣದಲ್ಲಿರುವುದನ್ನು ಮರೆಯಬಾರದು, ಕಾಂಗ್ರೆಸ್ ಇಂದಿನ ಮುತ್ಸದ್ಧಿಗಳಾದ ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್ ಮುನಿಯಪ್ಪ, ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಅವರುಗಳು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿಗಳು ಹಾಗೂ ಸಮರ್ಥ ಆಡಳಿತಗಾರರಾಗಿ ಮತ್ತು ಪಕ್ಷದ ಕಟ್ಟಾಳುಗಳಾಗಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಇವರಲ್ಲಿ ಯಾರಾದರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಇಲ್ಲವಾದರೆ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡರುಗಳಾದ ಜಿ.ಸಿ.ವೆಂಕಟರೋಣಪ್ಪ, ಬಿ.ಎನ್.ಗಂಗಾಧರಪ್ಪ,ಮುನಿಆಂಜಿನಪ್ಪ, ಅರುಣ್ ಕುಮಾರ್, ವೈ.ಶಂಕರ್, ಲಯನ್ ಬಾಲಕೃಷ್ಣ, ಡಾ.ಅಶ್ವಥ್, ಶಂಕರ್ ರಾಮಲಿಂಗಯ್ಯ, ಜಗನ್ನಾಥ್,ರಾಮಕೃಷ್ಣ ಮತ್ತಿತರರು ಇದ್ದರು.