೨ನೇ ಹಂತ ಬಳಿಕ ೪ನೇ ಹಂತ ಕೆರೆಗೆ ನೀರು: ಶಾಸಕ ಗಣೇಶ್‌

KannadaprabhaNewsNetwork |  
Published : Nov 08, 2026, 01:30 AM IST
೨ ನೇ ಹಂತದ ಕೆರೆಗಳು ತುಂಬಿದ ಬಳಿಕ ೪ ನೇ ಹಂತದ ಕೆರೆಗೆ ನೀರು | Kannada Prabha

ಸಾರಾಂಶ

ಆಲಂಬೂರು ಏತ ನೀರಾವರಿ ಯೋಜನೆಯಡಿ ೨ನೇ ಹಂತದ ಕೆರೆಗಳಿಗೆ ನೀರು ತುಂಬಿದ ಬಳಿಕ ೪ನೇ ಹಂತದ ಕೆರೆಗಳಿಗೆ ಮುಂದಿನ ತಿಂಗಳ ಮೊದಲ ವಾರದಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಆಲಂಬೂರು ಏತ ನೀರಾವರಿ ಯೋಜನೆಯಡಿ ೨ನೇ ಹಂತದ ಕೆರೆಗಳಿಗೆ ನೀರು ತುಂಬಿದ ಬಳಿಕ ೪ನೇ ಹಂತದ ಕೆರೆಗಳಿಗೆ ಮುಂದಿನ ತಿಂಗಳ ಮೊದಲ ವಾರದಲ್ಲಿ ನೀರು ಹರಿಸಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಭರವಸೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯ ತಹಸೀಲ್ದಾರ್‌ ಕಚೇರಿಯಲ್ಲಿ ರೈತಸಂಘದ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ಕಳೆದ ೨೦೨೩ ರಿಂದ ಇಲ್ಲಿಯ ತನಕ ೧,೨,೩ ಮತ್ತು ೪ ನೇ ಹಂತದ ಕೆರೆಗಳಿಗೆ ಎಷ್ಟೆಷ್ಟು ನೀರು ಹರಿಸಿದ್ದೀರಾ ಎಂದು ಮಾಹಿತಿ ಸಭೆಗೆ ನೀಡಬೇಕು ಎಂದು ಆಗ್ರಹಿಸಿದರೂ ಅಧಿಕಾರಿಗಳು ನೀರು ಹರಿಸಿದ ಬಗ್ಗೆ ಮಾಹಿತಿ ಕೊಡಲೇ ಇಲ್ಲ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರು ಸಭೆಯಲ್ಲಿಯೇ ಸಚಿವರಾದ ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಜತೆ ಮೊಬೈಲ್‌ ಮೂಲಕ ಸಂಪರ್ಕಿಸಿ ೪ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಚರ್ಚಿಸಿದ ಬಳಿಕ ಮಾತನಾಡಿ, ಸದ್ಯಕ್ಕೀಗ ೨ನೇ ಹಂತದ ಕೆರೆಗಳಿಗೆ ನೀರು ತುಂಬಿದ ಬಳಿಕ ೪ನೇ ಹಂತದ ಕೆರೆಗಳಿಗೆ ನೀರು ಮುಂದಿನ ಡಿಸೆಂಬರ್‌ ಮೊದಲ ವಾರದಲ್ಲಿ ಬಿಡಲಾಗುವುದು ಎಂದು ಹೇಳಿದರು.

ತಹಸೀಲ್ದಾರ್‌ ಎಂ.ಎಸ್.ತನ್ಮಯ್‌, ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್‌, ಕಾವೇರಿ ನೀರಾವರಿ ನಿಗಮದ ಎಇಇ ಮಹೇಶ್‌, ರೈತಸಂಘದ ಶಿವಣ್ಣ ಸೇರಿ ರೈತಸಂಘದ ಕಾರ್ಯಕರ್ತರು ಇದ್ದರು.

೪ನೇ ಹಂತದ ಕೆರೆಗಳಿಗೆ ನೀರು ಬರೋ ತನಕ ಪ್ರತಿಭಟನೆ

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮುಂದಿನ ತಿಂಗಳ ಡಿಸೆಂಬರ್‌ ಮೊದಲ ವಾರದಲ್ಲಿ ೪ ನೇ ಹಂತದ ಕೆರೆಗಳಿಗೆ ನೀರು ಹರಿಸುವುದಾಗಿ ಶಾಸಕರು ಹೇಳಿದ್ದಾರೆ ಆದರೆ ೪ ನೇ ಹಂತದ ಕೆರೆಗಳಿಗೆ ನೀರು ಬಿಡುವ ತನಕ ರೈತಸಂಘದ ಅಹೋ ರಾತ್ರಿ ಪ್ರತಿಭಟನೆ ನಿಲ್ಲೋದಿಲ್ಲ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿ, ಶಾಸಕಾಂಗ ಹೇಳಿದಂತೆ ಕಾರ್ಯಾಂಗ ಕೇಳುತ್ತಿಲ್ಲ ಎಂಬುದಕ್ಕೆ ಇಂದಿನ ಸಭೆಯೇ ಸಾಕ್ಷಿಯಾಗಿದೆ.ಸಚಿವರು ಹಾಗೂ ಶಾಸಕರ ನಡುವೆ ನೀರಿನ ವಿಚಾರದಲ್ಲಿ ಸಮನ್ವಯತೆ ಇಲ್ಲ ಎಂದು ಆರೋಪಿಸಿದರು.

೪ನೇ ಹಂತದ ಕೆರೆಗಳಿಗೆ ನೀರು ಬಿಡೋ ತನಕ ರೈಸತಂಘದ ಅಹೋ ರಾತ್ರಿ ಧರಣಿ ನಿರಂತರವಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ