ಕನ್ನಡಪ್ರಭ ವಾರ್ತೆ ವಿಧಾನಸಭೆ
ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದು, ‘1ನೇ ತರಗತಿಗೆ ಜೂ.1ರ ವೇಳೆಗೆ 6 ವರ್ಷ ಪೂರೈಸಬೇಕೆಂಬ ನಿಯಮದಿಂದ ಕೆಲ ಪೋಷಕರು ಗಾಬರಿಯಲ್ಲಿದ್ದಾರೆ. ನಮ್ಮ ಬಳಿ ಹಾಗೂ ಹಲವು ಕಚೇರಿಗಳಿಗೆ ಹೋಗಿ ವಿನಾಯಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪೋಷಕರಲ್ಲಿ ಗೊಂದಲ ಉಂಟಾಗುವುದು ಬೇಡ ಎಂಬ ಕಾರಣಕ್ಕೆ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 20ರ ಪ್ರಕಾರ 1ನೇ ತರಗತಿಗೆ ದಾಖಲಾಗಲು 60 ದಿನಗಳ ವಿನಾಯಿತಿ ನೀಡಲಾಗಿದೆ’ ಎಂದು ಹೇಳಿದರು.
ಕಾಯಂ ಪರಿಹಾರ ಕಲ್ಪಿಸಲು ಕಾನೂನು:ದಾಖಲಾತಿ ತಂತ್ರಾಂಶದಲ್ಲೂ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ. 6 ವರ್ಷ ಕಡ್ಡಾಯ ನಿಯಮದಿಂದಾಗಿ ಎಲ್‌ಕೆಜಿ, ಯುಕೆಜಿ ದಾಖಲಾತಿಗೂ ತೊಂದರೆ ಆಗುತ್ತದೆ. ಇದಕ್ಕಾಗಿ ಪ್ರತ್ಯೇಕ ಕಾನೂನು ತಂದು ಕಾಯಂ ಆಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶಾಸನಬದ್ಧ ಕಾಯ್ದೆ ಅಥವಾ ನಿಯಮ ತಂದು ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಆಗ ಮಧು ಬಂಗಾರಪ್ಪ, ಕಳೆದ ವರ್ಷವೂ ನಾವು ಸಡಿಲಿಕೆ ನೀಡಿದ್ದೆವು. ಪ್ರತಿ ವರ್ಷವೂ ಈ ಸಮಸ್ಯೆ ಆಗದಿರುವಂತೆ ಶಾಸನಬದ್ಧ ವ್ಯವಸ್ಥೆ ತರುತ್ತೇವೆ. ಇದಕ್ಕಾಗಿ ಕಾನೂನನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.