ದೊಡ್ಡಬಳ್ಳಾಪುರ: 11ನೇ ಕೃಷಿ ಗಣತಿಗೆ ಸಂಬಂಧಿಸಿದಂತೆ ಮುಖ್ಯ ಅಂಶಗಳಾದ ಭೂಉಪಯೋಗ, ನೀರಾವರಿ ಸ್ಥಿತಿ, ಬೆಳೆಗಳ ವಿಧಾನ, ವ್ಯವಸಾಯಕ್ಕೆ ಬಳಸುವ ರಸಗೊಬ್ಬರ, ಕೃಷಿ ಉಪಕರಣಗಳು, ಜಾನುವಾರು ಬಳಕೆ, ಪಡೆದ ಸಾಲ ಅಂಕಿ ಅಂಶಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಗಣತಿಯ 2ನೇ ಹಂತದಲ್ಲಿ ಸಕಾಲಿಕ ವರದಿ ಯೋಜನೆ ಅಡಿ ಆಯ್ಕೆಯಾದ ಒಟ್ಟು ಗ್ರಾಮಗಳ ಶೇ.20ರಷ್ಟು ಗ್ರಾಮಗಳಲ್ಲಿ ಕೃಷಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ ಎಂದರು.2024-25ನೇ ಸಾಲಿನ ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ತಯಾರಿಕೆ, ಮುಂಗಾರು ಋತುವಿನಲ್ಲಿನಲ್ಲಿ ಬೆಳೆಯಲಾದ ಬೆಳೆಗಳ ವಿಸ್ತೀರ್ಣ ಗ್ರಾಮವಾರು ಮೊಬೈಲ್ ಆಪ್‌ನಲ್ಲಿ ತಂತ್ರಾಂಶ ಅಳವಡಿಸಲಾಗಿದ್ದು ಮೂರು ಋತುವಿಗೂ ಮೊಬೈಲ್ ಆಪ್‌ನಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು. ಸಮೀಕ್ಷೆ ಕೈಗೊಳ್ಳುವ ಮುನ್ನ ಖಾಸಗಿ ನಿವಾಸಿಗಳಿಗೆ ಪೂರ್ಣ ಪ್ರಮಾಣದಲ್ಲಿ ತರಬೇತಿ ನೀಡಿದಲ್ಲಿ ಮಾತ್ರ ಹಿಂದೆ ಬೆಳೆ ಸಮೀಕ್ಷೆಯಲ್ಲಿ ಆಗಿರುವ ತಪ್ಪುಗಳನ್ನು ಕೆಳಹಂತದಲ್ಲಿ ಸರಿಪಡಿಸಿಕೊಳ್ಳಬಹುದು ಹಾಗೂ ಸಮೀಕ್ಷೆಯಲ್ಲಿದ್ದುಕೊಂಡು ಬೆಳೆಗಳು ಮತ್ತು ವಿಸ್ತೀರ್ಣ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
2024-25ನೇ ಮುಂಗಾರು ಹಂಗಾಮಿನಲ್ಲಿ 210 ಗ್ರಾಮಗಳು ಬೆಳೆ ಸಮೀಕ್ಷೆಯ ಶೇ.1ರ ದತ್ತಾಂಶ ಪರಿಶೀಲನೆಗೆ ಆಯ್ಕೆಯಾಗಿದ್ದು ಮೊಬೈಲ್ ಮೂಲಕ ದತ್ತಾಂಶ ಪರಿಶೀಲನೆ ಕೈಗೊಳ್ಳಲಾಗುವುದು ಈ ಕಾರ್ಯವನ್ನು ಮೇಲ್ವಿಚಾರಕರಾದ ಸಾಂಖ್ಯಿಕ, ಕೃಷಿ, ತೋಟಗಾರಿಕೆ ಹಾಗೂ ಸಾಂಖ್ಯಿಕ ಇಲಾಖೆಯ ಅನ್ಯ ಕಾರ್ಯದ ನಿಮಿತ್ತ ಸೇವೆಯಲ್ಲಿರುವವರು ನಿರ್ವಹಿಸಲು ಕ್ರಮ ವಹಿಸಿ ಎಂದರು.2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ಮೊಬೈಲ್ ಆಪ್ ಮುಖಾಂತರ ಅನುಷ್ಠಾನಗೊಳಿಸುತ್ತಿದ್ದು ಜಿಲ್ಲೆಗೆ 1052 ಪ್ರಯೋಗಗಳು ಯೋಜಿತಗೊಂಡಿದ್ದು. ರಾಗಿ, ಮುಸುಕಿನ ಜೋಳ, ಟೊಮೇಟೊ, ತೊಗರಿ, ಶೇಂಗಾ, ಹುರುಳಿ, ಶುಂಠಿ, ಹುರುಳಿಕಾಯಿ ಬೆಳೆಗಳು ಅಧಿಸೂಚಿತ ಬೆಳೆಗಳಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಬೆಳೆ ಕಟಾವು ಪ್ರಯೋಗಗಳಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಲಕ್ಷ್ಮೀಕಾಂತ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಂಖ್ಯಿಕ ಇಲಾಖೆಯ ತಾಲೂಕು ಮಟ್ಟದ ಗಣತಿದಾರರು ಮತ್ತು ಸಾಂಖ್ಯಿಕ ನಿರೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.(ಫೋಟೋ ಚಿಕ್ಕದಾಗಿ ಬಳಸಿ)
27ಕೆಡಿಬಿಪಿ2-ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಮನ್ವಯ ಸಭೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಿತು.