ಕಾಪು: ಕೃಷಿ ಪತ್ತಿನ ಸಹಕಾರ ಸಂಘಗಳು ಪರಿಸರದ ಕೃಷಿಕರ ಸೇವೆಗೆ ಸದಾ ಬದ್ಧರಾಗಿರಬೇಕು ಎಂದು ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಹೇಳಿದರು.
ತಾಲೂಕು ಕೃಷಿ ಅಧಿಕಾರಿ ಪುಷ್ಪಲತಾ ಅವರು ನೋಂದಣಿ ಬಗ್ಗೆ ಸಕಾಲಿಕ ಮಾಹಿತಿ ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿನಿಧಿ ರಾಜಗೋಪಾಲ್ ಬಲ್ಲಾಳ್, ನಿರ್ದೇಶಕರಾದ ರಂಜಿತ್ ಪ್ರಭು ಬೆಳಂಜಾಲೆ ಮತ್ತು ಪಾರಿಜಾತ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ, ತಾಲೂಕು ಕೃಷಿ ಅಧಿಕಾರಿ ಪುಷ್ಪಲತಾ, ತಾಂತ್ರಿಕ ವ್ಯವಸ್ಥಾಪಕಿ ದಿವ್ಯಾ, ಕೃಷಿ ಸಖಿಯರಾದ ಪ್ರಜ್ಞಾ, ಭಾರತಿ ಆಚಾರ್ಯ, ಪ್ರಗತಿಪರ ಕೃಷಿಕರಾದ ನಿತ್ಯಾನಂದ ನಾಯಕ್ ಪಾಲಮೆ, ಕಾರ್ಯವ್ಯಾಪ್ತಿಯ ಕೃಷಿಕರು ಉಪಸ್ಥಿತರಿದ್ದರು.