ನಾಳೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

KannadaprabhaNewsNetwork |  
Published : Apr 27, 2025, 01:33 AM IST
ಏ.28ರಂದು ಕೃಷಿ ಪತ್ತಿನ ಸಹಕಾರಿ ಸಂಘದ  ಚುನಾವಣೆ | Kannada Prabha

ಸಾರಾಂಶ

ಪಟ್ಟಣದ ಉಮಾಶಂಕರ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಏ.28ರಂದು ನಡೆಯಲಿದ್ದು 10 ಸ್ಧಾನಕ್ಕಾಗಿ 33ಮಂದಿ ಕಣದಲ್ಲಿದ್ದಾರೆ.

ಕನ್ನಡಪ್ರಭ ವಾತೆ ಕೊಳ್ಳೇಗಾಲ

ಪಟ್ಟಣದ ಉಮಾಶಂಕರ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆ ಏ.28ರಂದು ನಡೆಯಲಿದ್ದು 10 ಸ್ಧಾನಕ್ಕಾಗಿ 33ಮಂದಿ ಕಣದಲ್ಲಿದ್ದಾರೆ.

12 ಸ್ಧಾನಕ್ಕೆ ನಡೆಯಬೇಕಿದ್ದ ಚುನಾವಣೆಯಲ್ಲಿ ಈಗಾಗಲೇ ಹಾಲಿ ಉಪಾಧ್ಯಕ್ಷರಾಗಿದ್ದ ಶೀಲ ಹಾಗೂ ರೈತ ಹೋರಾಟಗಾರ ಅಣಗಳ್ಳಿ ಅವರ ಪತ್ನಿ ಅನ್ನಪೂರ್ಣ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆ 10 ಸ್ಥಾನಕ್ಕೆ 28ರಂದು ನಡೆಯಲಿರುವ ಚುನಾವಣೆಯಲ್ಲಿ 33ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ 1ಸ್ಥಾನಕ್ಕೆ ಕಾಂತರಾಜು, ನಟರಾಜು, ಬಸವರಾಜಪ್ಪ, ರಾಜಶೇಖರ್, ಸಿಗ್ಬತ್ ಉಲ್ಲಾ, ಎಸ್.ಸೋಮಣ್ಣ, ಸೈಯಜ್ ಏಜಾಜ್ಸೇ ರಿದಂತೆ 9ಮಂದಿ ಕಣದಲ್ಲಿದ್ದಾರೆ, ಅದೇ ರೀತಿ ಸಾಲಗಾರರ ಕ್ಷೇತ್ರಕ್ಕ 9ಸ್ಥಾನಕ್ಕೆ 26ಮಂದಿ ಸ್ಫರ್ಧೆಯಲ್ಲಿದ್ದಾರೆ.

ಸಿದ್ದಪ್ಪಸ್ವಾಮಿ, ಸೋಮಶೇಖರ್. ಶೇಖರ್, ಬಿ. ಶಿವರಾಜು, ಎಂ. ಶಿವಮೂರ್ತಿ, ಲೋಕೇಶ್, ರವಿಕುಮಾರ್, ರಮೇಶ್, ಮಂಜುನಾಥ, ಮಾದೇಶ, ಕೆ ಎಸ್ ಮಹೇಶ್, ಎಂ. ಮಹೇಶ್, ಆಲ್ಬರ್ಟ ಮನೋಹರ್, ಇಬ್ರಾಹಿಂ ಬೇಗ್, ಎಂಪಿಇಂದ್ರ, ಕೃಷ್ಣರಾಜು, ಜಗದೀಶ್, ಎಂ ಕೆ ಪುಟ್ಟಸ್ವಾಮಿ, ಸಿ. ಬಸವರಾಜು, ಎಂ ಬಸವರಾಜು, ಎಂ.ಇ. ಬಸವರಾಜು, ಬೋಳೆಗೌಡ, ಎನ್ ಮಹದೇವಸ್ವಾಮಿ. ಮಹೇಶ್, ಸೇರಿದಂತೆ 26ಮಂದಿ ಕಣದಲ್ಲಿದ್ದು ಚುನಾವಣೆ ಕುತೂಹಲ ಕೆರಳಿಸಿದ್ದು 33ಮಂದಿ ಸ್ಪರ್ಧಿಗಳ ಭವಿಷ್ಯವನ್ನು 1605ಮತದಾರರು ಏ.28ರ ಚುನಾವಣೆಯಲ್ಲಿ ಬರೆಯಲಿದ್ದಾರೆ.

ಈ ವೇಳೆ ಸಂಘದ ಕಾರ್ಯನಿರ್ವಾಹಣಾಧಿಕಾರಿ ನಾಗರಾಜು ಮಾತನಾಡಿ, 28ರಂದು ಚುನಾವಣೆ ಹಿನ್ನೆಲೆ ಸಂಘ ಭಾನುವಾರವೂ ಸಹಾ ತೆರೆದಿದ್ದು ಚುನಾವಣಾ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡಲಿದೆ. ಚುನಾವಣಾಧಿಕಾರಿ ಕಡ್ಡಾಯವಾಗಿ ಸಂಘದ ಸದಸ್ಯತ್ವದ ಗುರುತಿನ ಚೀಟಿ ಕಡ್ಡಾಯಗೊಳಿಸಿರುವ ಹಿನ್ನೆಲೆ ದೃಕಿೃತ ಚೀಟಿ ಇನ್ನಿತರೆ ಸೌಕರ್ಯ ನೀಡಲು ಸಂಘ ಸಿದ್ದವಾಗಿದ್ದು ಈ ಹಿನ್ನೆಲೆ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಚುನಾವಣಾಧಿಕಾರಿಗಳು, ಸಂಘದ ಗುರುತಿನ ಚೀಟಿ ಇನ್ನಿತರೆ ಮಾಹಿತಿಗಾಗಿ ಭಾನುವಾರವೂ ಕಛೇರಿ ತೆರೆದಿದ್ದು ಇದರ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ