ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಂದಗರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8 ಮಂದಿ ಆಯ್ಕೆಯಾಗಿದ್ದಾರೆ.ಚುನಾವಣೆಯಲ್ಲಿ 12 ನಿರ್ದೇಶಕರ ಸ್ಥಾನಗಳಿಗೆ 20 ಮಂದಿ ಸ್ಪರ್ಧಿಸಿದ್ದರು. ಸಾಲಗಾರ ಕ್ಷೇತ್ರದಿಂದ ಗದ್ದೆಹೊಸೂರು ಜಿ.ಎನ್ ದೀಪಕ್, ಜಿ.ಬಿ.ಮನು, ಚಿಕ್ಕಮಂದಗರೆ ರಮೇಶ್, ಕೆ.ಎನ್, ವಸಂತ, ಆಲೇನಹಳ್ಳಿ ಆಶೋಕ, ಸಾವಿತ್ರಮ್ಮ, ಮಂದಗರೆ ಮಂಜುನಾಥ್, ಮೂಡನಹಳ್ಳಿ ನಿಂಗೇಗೌಡ, ತಿಮ್ಮನಾಯಕ, ಹೊನ್ನೇನಹಳ್ಳಿ ಮಂಜೇಗೌಡ, ಶ್ರವಣನಹಳ್ಳಿ ಬೋಜಯ್ಯ ನಿರ್ದೇಶಕರರಾಗಿ ಚುನಾಯಿತರಾದರು.ಸಾಲಗಾರರಲ್ಲದ ಕ್ಷೇತ್ರದಿಂದ ಅಲೇನಹಳ್ಳಿ ಮಹೇಶ್ ವಿಜೇತರಾದರು. ನೂತನ ನಿರ್ದೇಶಕರನ್ನು ಜೆಡಿಎಸ್ ಯುವ ಮುಖಂಡ ಗದ್ದೆಹೊಸೂರು ಜಗದೀಶ್ ಮಾತನಾಡಿ, ಜೆಡಿಎಸ್ ಬೆಂಬಲಿತ 8 ನಿರ್ದೇಶಕರು ಗೆಲವು ಸಾಧಿಸಿದ್ದು, ಚುನಾವಣೆ ಮುಗಿದಿದೆ. ಈಗ ತಾವೆಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದು ಕರೆ ನೀಡಿದರು.
ಈ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಪಟಾಕಿ ಸಿಡಿಸಿ, ಪುಷ್ಪಮಾಲೆ ಅರ್ಪಿಸಿ, ಸಿಹಿ ಹಂಚಿ ಸಂಭ್ರಮಿಸಿದರು.ಪಿಇಟಿ ಅಧ್ಯಕ್ಷರಾಗಿ ಕೆ.ಎಸ್.ವಿಜಯ್ ಆನಂದ್ ಪುನರಾಯ್ಕೆ
ಮಂಡ್ಯ:ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಕೆ.ಎಸ್.ವಿಜಯ್ ಆನಂದ್ ಪುನರಾಯ್ಕೆಯಾಗಿದ್ದಾರೆ. ಟ್ರಸ್ಟ್‌ಗೆ ಆಡಳಿತ ಮಂಡಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕೆ.ಎಸ್.ವಿಜಯ್ ಆನಂದ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಪುನರಾಯ್ಕೆಯಾದ ಕೆ.ಎಸ್.ವಿಜಯ್ ಆನಂದ್ ಅವರನ್ನು ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಅಭಿನಂದಿಸಿದರು.5 ಮಂದಿ ವಿದ್ಯಾರ್ಥಿಗಳು ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣ
ಮಳವಳ್ಳಿ: ಪಟ್ಟಣದ ಸನ್‌ರೈಸ್ ಪಬ್ಲಿಕ್ ಶಾಲೆಯ ಐದು ಮಂದಿ ವಿದ್ಯಾರ್ಥಿಗಳು 2024- 25ನೇ ಸಾಲಿನ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. 2019ರಿಂದ 2025ರವರೆಗೆ 22 ವಿದ್ಯಾರ್ಥಿಗಳು ನವೋದಯ ಹಾಗೂ 59 ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯಕ್ಕೂ ಪ್ರವೇಶ ಪಡೆದಿದ್ದು, ತಾಲೂಕಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದ ಹೆಗ್ಗಳಿಕೆಗೆ ಸನ್ ರೈಸ್ ಪಬ್ಲಿಕ್ ಶಾಲೆ ಪಾತ್ರವಾಗಿದೆ. ನವೋದಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಶಾಲೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮನ್ಮುಲ್ ನಿರ್ದೇಶಕರಾದ ಆರ್.ಎನ್ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಶ್, ಮಧು ಹಾಗೂ ದಿನೇಶ್ ಅಭಿನಂದನೆ ಸಲ್ಲಿಸಿದ್ದಾರೆ.