ರೈತರನ್ನು ಒಕ್ಕಲೆಬ್ಬಿಸಿ ಕೃಷಿಭೂಮಿ ವಶ: ಕಾನೂನು ಕ್ರಮಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಕೆ

KannadaprabhaNewsNetwork |  
Published : Oct 12, 2026, 01:45 AM IST
11ಕೆಎಂಎನ್ ಡಿ13 | Kannada Prabha

ಸಾರಾಂಶ

ಗ್ರಾಮದ ಸರಹದ್ದಿನ ಬಿ.ಕೋಡಿಹಳ್ಳಿ ಗ್ರಾಮದ 32 ಎಕರೆಗೂ ಹೆಚ್ಚಿನ ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯಿದೆ. ಈ ಭೂಮಿಯನ್ನು 1961- 62ರಲ್ಲಿ ಕಂದಾಯ ಇಲಾಖೆಯು 15ಕ್ಕೂ ಹೆಚ್ಚಿನ ರೈತರಿಗೆ ದರಕಾಸ್ತು ಮೂಲಕ ಮಂಜೂರು ಮಾಡಿದೆ. ಆದರೆ, ಇವರ ವಿರುದ್ಧ ಕೆಲವರು ಕಿರುಕುಳ ನೀಡಿ ಜಮೀನು ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಮಾಯಕ ರೈತರನ್ನು ಒಕ್ಕಲೆಬ್ಬಿಸಿ ಹತ್ತಾರು ಎಕರೆ ಕೃಷಿ ಭೂಮಿ ವಶಪಡಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ನೊಂದ ಕೃಷಿಕರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಸಲ್ಲಿಸಿದರು.

ಅಗ್ರಹಾರ ಬಾಚಹಳ್ಳಿಯ ರೈತರ ಪರ ನಿಯೋಗದ ನೇತೃತ್ವ ವಹಿಸಿದ್ದ ಉದ್ಯಮಿ ಹರೀಶ್ ಗೌಡ, ಈಗಾಗಲೆ ತಹಸೀಲ್ದಾರ್, ಪೊಲೀಸ್ ಇನ್ಸ್‌ಪೆಕ್ಟರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ. ದಬ್ಬಾಳಿಕೆಯಿಂದ ರಕ್ಷಣೆ ಕೊಡಬೇಕು ಮತ್ತು ಒತ್ತುವರಿ ಮಾಡಿಕೊಂಡಿರುವ ಭೂಮಿ ಬಿಡಿಸಿಕೊಟ್ಟು ನ್ಯಾಯ ಕೊಡಿಸಿಕೊಡಬೇಕು ಎಂದು ಶಾಸಕರನ್ನು ಒತ್ತಾಯಿಸಿದರು.

ಗ್ರಾಮದ ಸರಹದ್ದಿನ ಬಿ.ಕೋಡಿಹಳ್ಳಿ ಗ್ರಾಮದ 32 ಎಕರೆಗೂ ಹೆಚ್ಚಿನ ಗೋಮಾಳ ಸೇರಿದಂತೆ ಸರ್ಕಾರಿ ಭೂಮಿಯಿದೆ. ಈ ಭೂಮಿಯನ್ನು 1961- 62ರಲ್ಲಿ ಕಂದಾಯ ಇಲಾಖೆಯು 15ಕ್ಕೂ ಹೆಚ್ಚಿನ ರೈತರಿಗೆ ದರಕಾಸ್ತು ಮೂಲಕ ಮಂಜೂರು ಮಾಡಿದೆ. ಆದರೆ, ಇವರ ವಿರುದ್ಧ ಕೆಲವರು ಕಿರುಕುಳ ನೀಡಿ ಜಮೀನು ಕಿತ್ತುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಇವರೊಂದಿಗೆ ಹೋರಾಡಲು ಆರ್ಥಿಕವಾಗಿ ಶಕ್ತಿಯಿಲ್ಲದಿರುವುದರಿಂದ ನಮಗೆ ರಕ್ಷಣೆ ಕೊಡಿಸಿ ನಮ್ಮ ಜಮೀನನ್ನು ನಮಗೆ ಬಿಡಿಸಿಕೊಡಿ. ಬಡತನದಿಂದ ನೊಂದವರಿಗೆ ನ್ಯಾಯ ದೊರಕಿಸಿಕೊಡಿ ಎಂದು ರೈತರು ಮನವಿ ಮಾಡಿದರು.

ನಿಯೋಗದಲ್ಲಿ ನೊಂದ ರೈತರಾದ ಗುರುಮೂರ್ತಾಚಾರ್, ವೇಣುಗೋಪಾಲ್, ನಟೇಶ, ರಾಜಗೋಪಾಲ್, ಮಂಚಮ್ಮ, ಶಂಕರ್‌ಶೆಟ್ಟಿ, ಕೃಷ್ಣಶೆಟ್ಟಿ, ಭದ್ರಶೆಟ್ಟಿ, ವೀರಭದ್ರಶೆಟ್ಟಿ, ಸ್ವಾಮಿ, ರಾಜಕುಮಾರ, ಕುಂದೂರಶೆಟ್ಟಿ ಭಾರತಿ, ಅಣ್ಣಯ್ಯಶೆಟ್ಟಿ, ಶಂಕರಶೆಟ್ಟಿ ಭದ್ರಶೆಟ್ಟಿ ಮಂಜುಳಾ, ಸುಂದರಮ್ಮ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಯಾನ್ಸಿರಾಂ ತತ್ವಾದರ್ಶಗಳ ಆದರ್ಶಗಳ ಪಾಲಿಸಿ: ಅಂದಾನಪ್ಪ
ಚಂದ್ರಶೇಖರ್ ನಿಸ್ವಾರ್ಥ ರಾಜಕಾರಣಿ,ಪಟೇಲರು ಶ್ರೇಷ್ಠರು: ಬಿಎಲ್‌ ಶಂಕರ್‌