ಕನ್ನಡಪ್ರಭ ವಾರ್ತೆ ಮಂಡ್ಯ
ಕೃಷಿ ವಿಜ್ಞಾನಿಗಳ ವಿಶ್ವ ವಿದ್ಯಾನಿಲಯದಿಂದ ಡಿ.5ರಿಂದ 7ರ ವರೆಗೂ ನಡೆಯಲಿರುವ ಕೃಷಿ ಮೇಳದ ಅಂಗವಾಗಿ ಜಿಲ್ಲಾ ಪಂಚಾಯ್ತಿಯಿಂದ ವಿಸಿ ಫಾರ್ಮ್ ವರೆಗೂ ಸೈಕಲ್ ಮತ್ತು ಬೈಕ್ ಜಾಥಾ ನಡೆಯಿತು.ಜಾಥಾ ಉದ್ಘಾಟಿಸಿದ ಡೀಸಿ ಡಾ.ಕುಮಾರ, ರೈತರು ಕೃಷಿ ಮೇಳದಲ್ಲಿ ಪಾಲ್ಗೊಂಡು ಹೊಸ ಹೊಸ ತಂತ್ರಜ್ಞಾನ ಬಳಕೆ ಮತ್ತು ಹೊಸ ತಳಿಗಳ ಪ್ರದರ್ಶನ, ಕೃಷಿಯಲ್ಲಿ ನಾವಿನ್ಯತೆ, ತಂತ್ರಜ್ಞಾನ ಬಳಕೆ ಕುರಿತ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಕೃಷಿ ಮೇಳದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಬೈಕ್ ಮತ್ತು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಕೃಷಿ ಸಂಜೀವಿನಿಯ ಬಲವರ್ಧನೆಯನ್ನು ಹೇಗೆ ಸಾಧಿಸಬೇಕು. ಜನರಿಗೆ ಹೇಗೆ ಉಪಯೋಗ ಆಗುತ್ತದೆ ಎಂಬುದರ ಕುರಿತ ತಿಳಿಸುವುದಾಗಿದೆ ಎಂದರು.ಐದು ಜಿಲ್ಲೆಗಳಿಂದ ಬಂದ ಎನ್‌ಆರ್‌ಎಲ್‌ಎಂ ಮಹಿಳಾ ಸ್ವಸಹಾಯ ಗುಂಪಿನ ಮಹಿಳೆಯರು 50 ಹೆಚ್ಚು ಮಳಿಗೆಗಳನ್ನು ಕೃಷಿ ಮೇಳದಲ್ಲಿ ಸ್ಥಾಪನೆ ಮಾಡಲಿದ್ದಾರೆ. ವಿಭಿನ್ನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಕೃಷಿ ವಿವಿ ವಿಶೇಷಾಧಿಕಾರಿ ಹರಿಣಿ ಕುಮಾರ್ ಮಾತನಾಡಿದರು. ಈ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ರೂಪಾಶ್ರೀ ಸೇರಿದಂತೆ ಹಲವರು ಇದ್ದರು.ಸುತ್ತೂರು ಜಯಂತಿ ಯಶಸ್ಸಿಗೆ ಒಗ್ಗಟ್ಟಿನಿಂದ ಕೆಲಸ ಮಾಡಿ: ಬಿ.ವೈ.ವಿಜಯೇಂದ್ರಮಳವಳ್ಳಿ:
ಸರ್ವಧರ್ಮಗಳ ಶಾಂತಿ ಸೌಹಾರ್ದತೆಯ ಸಂಕೇತವಾದ ಸುತ್ತೂರು ಜಯಂತಿ ಮಹೋತ್ಸವದ ಯಶಸ್ಸಿಗೆ ಪಕ್ಷ-ಬೇಧ ಮರೆತು ಎಲ್ಲರೂ ಒಗ್ಗಟ್ಟಿನಿಂದಕಂಕಣ ಬದ್ಧರಾಗಿ ಕೆಲಸ ನಿರ್ವಹಿಸುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು.ಬುಧವಾರ ಕಾರ್ಯಕ್ರಮ ನಿಮಿತ್ತ ಟಿ.ನರಸಿಪುರಕ್ಕೆ ತೆರಳಿ ವಾಪಸ್ಸಾಗುತ್ತಿದ್ದಾಗ ಬಿವೈವಿ ಅವರನ್ನು ಪಟ್ಟಣದ ಡಾ.ರಾಜ್‌ಕುಮಾರ್ ರಸ್ತೆಯ ಸವಿರುಚಿ ಹೋಟೆಲ್ ಬಳಿ ಭೇಟಿ ಮಾಡಿದ ಸುತ್ತೂರು ಜಯಂತಿ ಮಹೋತ್ಸವದ ಸಮಿತಿ ಪದಾಧಿಕಾರಿಗಳು ಹಾಗೂ ಭಾಜಪ ಮತ್ತು ಜೆಡಿಎಸ್ ಮುಖಂಡರು ಅಭಿನಂದಿಸಿ ಜಯಂತಿ ಮಹೋತ್ಸವಕ್ಕೆ ಅಗಮಿಸುವಂತೆ ಕೋರಿದ ಮನವಿಗೆ ಸ್ಪಂದಿಸಿ ಮಾತನಾಡಿದರು.
ಮಳವಳ್ಳಿಯಲ್ಲಿ ಸುತ್ತೂರು ಜಯಂತಿ ಆಚರಣೆ ಈ ಭಾಗದ ಜನರ ಪುಣ್ಯವಾಗಿದೆ. 7 ದಿನಗಳು ನಡೆಯಲಿರುವ ಜಯಂತಿಯನ್ನು ಎಲ್ಲರೂ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಬೇಕು. ಜಯಂತಿಗೆ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಾರೆ. ರಾಷ್ಟ್ರ ಮತ್ತು ರಾಜ್ಯದ ಅತಿ ಗಣ್ಯ ವ್ಯಕ್ತಿಗಳು ಬರಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜಯಂತಿ ಮಹೋತ್ಸವದ ಸಂಚಾಲಕರಾದ ಪಿ.ಎಂ.ಮಹದೇವಸ್ವಾಮಿ, ವೀರಶೈವ ಮಹಾಸಭಾದ ಪದಾಧಿಕಾರಿಗಳು, ಜೆಡಿಎಸ್, ಭಾಜಪ ಮುಖಂಡರು, ಜಯಂತಿ ಮಹೋತ್ಸವದ ಪದಾಧಿಕಾರಿಗಳು ಇದ್ದರು.