ಕೃಷಿ ಅಧಿಕಾರಿಗಳಿಗೆ ನಕಲಿ ಪತ್ರಕರ್ತರ ಕಿರುಕುಳ

KannadaprabhaNewsNetwork |  
Published : Jul 10, 2025, 01:46 AM IST
9ಎಚ್ಎಸ್ಎನ್12 : ಕೃಷಿ ಇಲಾಖೆ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಕೃಷಿ ತಾಂತ್ರಿಕಾಧಿಕಾರಿ ವಿರುದ್ಧ  ಕರಪತ್ರ ಮುದ್ರಿಸಿ ಹಂಚಲು ಯತ್ನಿಸಿದ ಕೃಷ್ಣಮೂರ್ತಿ ಹಾಗು  ರತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಮಾಡಿದರು. | Kannada Prabha

ಸಾರಾಂಶ

ಕೆಲವರು ತಾವು ಪತ್ರಕರ್ತರು ಎಂದು ಹೆಸರೇಳಿಕೊಂಡು ನಿಷ್ಠಾವಂತ ಅಧಿಕಾರಿಗಳ ತೇಜೋವಧೆಗೆ ಮುಂದಾಗುತ್ತಿದ್ದು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಹಾಗೂ ಸಾರ್ವಜನಿಕರು ಆಗ್ರಹಿದರು. ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘ ಪ್ರತಿಭಟನೆ ಸಮಯದ ಕೃಷಿ ಇಲಾಖೆ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಕೃಷಿ ತಾಂತ್ರಿಕಾಧಿಕಾರಿ ಕಾವ್ಯಶ್ರೀ ಇವರ ಮೇಲೆ ಆರೋಪ ಮಾಡಿ ಕರಪತ್ರ ಮುದ್ರಿಸಿ ಹಂಚಲು ಯತ್ನಿಸಿದ ಕೃಷ್ಣಮೂರ್ತಿ ಹಾಗೂ ರತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರುಕೃಷಿ ಇಲಾಖೆ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಕೃಷಿ ತಾಂತ್ರಿಕಾಧಿಕಾರಿ ವಿರುದ್ಧ ಕರಪತ್ರ ಮುದ್ರಿಸಿ ಹಂಚಲು ಯತ್ನಿಸಿದ ಕೃಷ್ಣಮೂರ್ತಿ ಹಾಗೂ ರತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಮಾಡಿದರು.

ಕೆಲವರು ತಾವು ಪತ್ರಕರ್ತರು ಎಂದು ಹೆಸರೇಳಿಕೊಂಡು ನಿಷ್ಠಾವಂತ ಅಧಿಕಾರಿಗಳ ತೇಜೋವಧೆಗೆ ಮುಂದಾಗುತ್ತಿದ್ದು ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೈತ ಸಂಘ ಹಾಗೂ ಸಾರ್ವಜನಿಕರು ಆಗ್ರಹಿದರು. ತಾಲೂಕು ಕಚೇರಿ ಮುಂಭಾಗದಲ್ಲಿ ರೈತ ಸಂಘ ಪ್ರತಿಭಟನೆ ಸಮಯದ ಕೃಷಿ ಇಲಾಖೆ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಕೃಷಿ ತಾಂತ್ರಿಕಾಧಿಕಾರಿ ಕಾವ್ಯಶ್ರೀ ಇವರ ಮೇಲೆ ಆರೋಪ ಮಾಡಿ ಕರಪತ್ರ ಮುದ್ರಿಸಿ ಹಂಚಲು ಯತ್ನಿಸಿದ ಕೃಷ್ಣಮೂರ್ತಿ ಹಾಗೂ ರತನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಮನವಿ ಮಾಡಿದರು.ರೈತ ಸಂಘದವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾಧ್ಯಮದಲ್ಲಿ ಬೇಗ ಹೆಸರು ಮಾಡಬೇಕೆಂದು ಸುಳ್ಳು ಹೇಳಿಕೊಂಡು ಪತ್ರಕರ್ತರ ಹಾಗೂ ಸಾಮಾಜಿಕ ಹೋರಾಟಗಾರರ ಹೆಸರಿನಲ್ಲಿ ದಂಧೆ ಮಾಡುತ್ತಿದ್ದು, ಕೆಲ ಅಧಿಕಾರಿಗಳನ್ನು ಹೆದರಿಸುವುದು ಅವರ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವುದರಿಂದ ಮತ್ತು ಅವರಲ್ಲಿ ಹಣದ ಬೇಡಿಕೆ ಇಡುವುದು ಮಾಮೂಲಾಗಿದೆ. ಇಲ್ಲಿ ನಿಷ್ಠಾವಂತ ಅಧಿಕಾರಿಗಳು ಕೆಲಸ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ.ಈ ವೇಳೆ ಮಾತನಾಡಿದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ರಮೇಶ್ ಕುಮಾರ್, ಕೆಲವರು ಪತ್ರಕರ್ತರ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ನಮ್ಮ ಇಲಾಖೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ಅವರನ್ನು ಹಿಡಿದು ವಿಚಾರಿಸಿದಾಗ ಸುಮ್ಮನೆ ಸಾರ್ವಜನಿಕರನ್ನು ಪತ್ರಕರ್ತರು ಎಂದು ದಿಕ್ಕುತಪ್ಪಿಸುತ್ತಿದ್ದು, ಇವರ ಮೇಲೆ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿದ್ದು ಇವರ ಮೇಲೆ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೃಷಿ ಉಪ ನಿರ್ದೇಶಕರಾದ ಕೋಕಿಲ. ರೈತ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಜರಿದ್ದರು.

PREV