ರೈತರ ಮೇಲಿನ ಶೋಷಣೆ ತಪ್ಪಿಸಲು ಕ್ರಮ ವಹಿಸಿ

KannadaprabhaNewsNetwork |  
Published : Nov 16, 2026, 01:15 AM IST
3 | Kannada Prabha

ಸಾರಾಂಶ

ಖರೀದಿ ಕೇಂದ್ರಗಳಲ್ಲಿ ರೈತರಿಗೆ ಮೋಸವಾಗುತ್ತಿದೆ. ರಸಗೊಬ್ಬರ, ಕೀಟನಾಶಕ ಖರೀದಿಯ ವಿಷಯದಲ್ಲಿಯೂ ಅನ್ಯಾಯವಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ರೈತರ ಮೇಲಿನ ಶೋಷಣೆ ತಪ್ಪಿಸಲು ಕ್ರಮ ವಹಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸಲಹೆ ಮಾಡಿದರು.

ಎಸ್‌.ಪಿ. ಶ್ರೀಹರ್ಷ ಹಾಗೂ ಶಿವಶಂಕರ್‌ ಆರಂಭಿಸಿರುವ ಆಗ್ರೋ ಇ- ಸಾಫ್ಟ್‌- ಕೃಷಿಗಾಗಿ ಸ್ಮಾರ್ಟ್‌ ತಂತ್ರಜ್ಞಾನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಖರೀದಿ ಕೇಂದ್ರಗಳಲ್ಲಿ ರೈತರಿಗೆ ಮೋಸವಾಗುತ್ತಿದೆ. ರಸಗೊಬ್ಬರ, ಕೀಟನಾಶಕ ಖರೀದಿಯ ವಿಷಯದಲ್ಲಿಯೂ ಅನ್ಯಾಯವಾಗುತ್ತಿದೆ. ಡಿಜಿಟಲ್‌ ತಂತ್ರಜ್ಞಾನ ಬಳಸಿಕೊಂಡು ಇದನ್ನು ತಪ್ಪಿಸಬೇಕು ಎಂದರು.

29-270 ರೂ.ಗಳಿಗೆ ಸಿಗುವ ಯೂರಿಯಾವನ್ನು 280 ರೂ.ಗಳಲ್ಲಿ 350 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದಲ್ಲದೇ ಕಳಪೆ ಗೊಬ್ಬರ ನೀಡಲಾಗುತ್ತಿದೆ. ಇದನ್ನು ನಿಯಂತ್ರಿಸಬೇಕು ಎಂದರು.

ಕೃತಕ ಬುದ್ಧಿಮತ್ತೆಯನ್ನು ರೈತರು ಕೂಡ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಮಾಹಿತಿ ಸಿಗುತ್ತಿದೆ ಎಂದು ಅವರು ಹೇಳಿದರು.

ನಾನೊಬ್ಬ ರೈತನ ಮಗ. ನಾನು ಕೂಡ ವ್ಯವಸಾಯ ಮಾಡಿದ್ದೇನೆ. ಅಧಿಕಾರಕ್ಕಾಗಿ ರಾಜಕಾರಣ ಮಾಡದೇ ಕಳೆದ 40-45 ವರ್ಷಗಳಿಂದ ರೈತ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇದರಿಂದಾಗಿಯೇ ಹಳ್ಳಿಯಿಂದ ದಿಲ್ಲಿವರೆಗೆ ಬೆಳೆದಿದ್ದೇನೆ. ನಾನು ಕೂಡ ಎಪಿಎಂಸಿಯಲ್ಲಿ 2016 ರಿಂದ ರೈತಮಿತ್ರ ಅಗ್ರಿಕಲ್ಚರ್ ಪ್ರೊಡ್ಯೂಷರ್ಸ್‌ ಕಂಪನಿ ನಡೆಸಿಕೊಂಡು ಬರುತ್ತಿದ್ದೇನೆ. ಈ ಕಚೇರಿಯನ್ನು ನೀವು ಕೂಡ ಬಳಸಿಕೊಂಡು ರೈತರಿಗೆ ಒಳ್ಳೆಯ ಸೇವೆ ಮಾಡಿ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ಡಿಜಿಟಲ್‌ ತಂತ್ರಜ್ಞಾನದಿಂದ ಪಾರದರ್ಶಕ ವ್ಯವಹಾರ ಸಾಧ್ಯ ಎಂದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಈಗ ರೈತೋದ್ಯಮಕ್ಕಿಂತ ರಿಯಲ್‌ ಎಸ್ಟೇಟ್‌ ಉದ್ಯಮವೇ ಜೋರಾಗಿದೆ. ಕೃಷಿ ಉದ್ಯಮವನ್ನು ವಾಣಿಜ್ಯಕ್ಕೆ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕರಾದ ಎಸ್‌.ಪಿ. ಶ್ರೀಹರ್ಷ ಪ್ರಾಸ್ತಾವಿಕ ಭಾಷಣ ಮಾಡಿದರು. ಶಿವಶಂಕರ್‌ ಯೋಜನೆಯ ಉದ್ದೇಶ ವಿವರಿಸಿದರು.ಲತಾ ಶ್ರೀಹರ್ಷ ಸ್ವಾಗತಿಸಿದರು.

ರೂಪಶ್ರೀ ಭಟ್‌ ಕಾರ್ಯಕ್ರಮ ನಿರೂಪಿಸಿದರು. ವಿನುತಾ ನಿರಂಜನ್‌, ಸುನೀತಾ ಚಂದ್ರಶೇಖರ್‌, ಕೆ,ಯು. ಸಿಂಧು ಪ್ರಾರ್ಥಿಸಿದರು.

ನಂತರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೃಷಿ ಪರಿಕರಗಳ ಉತ್ಪಾದಕರು, ವಿತರಕರು ಡೀಲರ್ ಮತ್ತು ಕೃಷಿಕರು ಸಂವಾದ ನಡೆಸಿ, ಪರಸ್ವರ ವಿಚಾರ ವಿನಿಮಯ ಮಾಡಿಕೊಂಡರು.

ಬಾಕ್ಸ್...

ಏನಿದು ಯೋಜನೆ?

ಆಗ್ರೋ ಇ- ಸಾಫ್ಟ್‌ ಮೊಟ್ಟ ಮೊದಲ ಬಿ2ಬಿ ಕೃಷಿ ಪರಿಕರಗಳ ವಿತರಣಾ ವೇದಿಕೆಯಾಗಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಗೆ ತಂತ್ರಜ್ಞಾನವನ್ನು ಜೋಡಿಸುವುದು, ತಯಾರಕರು ಮತ್ತು ವಿತರಕರ ನಡುವೆ ಉತ್ತಮ ಸಂಪರ್ಕ ಕಲ್ಪಿಸುವುದು ಹಾಗೂ ಕೃಷಿ ಒಳಹರಿವುಗಳ ವಿತರಣಾ ವ್ಯವಸ್ಥೆಯನ್ನು ಸುಲಭಗೊಳಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ, ವ್ಯಾಪಾರ ಮತ್ತು ವಿತರಣಾ ವ್ಯವಸ್ಥೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಉದ್ದೇಶದೊಂದಿಗೆ ಆರಂಭಿಸಲಾಗಿದೆ ಎಂದು ಸಂಸ್ಥಾಪಕರಾದ ಎಸ್‌.ಪಿ. ಶ್ರೀಹರ್ಷ ಹಾಗೂ ಶಿವಶಂಕರ್‌ ತಿಳಿಸಿದರು.

---

ಬಯೋ ಗ್ಯಾಸ್‌ ಸ್ಥಾವರ ಆರಂಭಕ್ಕೆ ನೆರವಾಗಿ- ಶ್ರೀಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಮನವಿ

ಫೋಟೋ 15 ಎಂವೈಎಸ್‌ 38

--

ಕೃಷ್ಣರಾಜ ಕ್ಷೇತ್ರ ಒಂದರಲ್ಲಿಯೇ 60 ಟನ್ ಸಗಣಿ ಸಂಗ್ರಹವಾಗುತ್ತಿದೆ. ಇದರ ಸದುಪಯೋಗ ಆಗಬೇಕಾದರೆ ಜೈವಿಕ ಅನಿಲ ಸ್ಥಾವರ ಘಟಕಗಳು ಸ್ಥಾಪನೆ ಆಗಬೇಕು. ಇದಕ್ಕೆ ನೆರವಾಗುವಂತೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡಿರುವುದಾಗಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ