ಅಹಿಂದ ಬಳಗ ಕೊಡಗು ಜಿಲ್ಲೆ: ಅಧ್ಯಕ್ಷರಾಗಿ ನಾಪಂಡ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಈ.ಸುರೇಶ್ ಆಯ್ಕೆ

KannadaprabhaNewsNetwork |  
Published : Oct 25, 2026, 02:45 AM IST
ಚಿತ್ರ : 24ಎಂಡಿಕೆ2 : ಅಧ್ಯಕ್ಷರಾಗಿ ನಾಪಂಡ ಮುತ್ತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಈ.ಸುರೇಶ್ ಆಯ್ಕೆ. | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ಅಹಿಂದ ಸಮುದಾಯದ ಪ್ರಮುಖರು ಹಾಗೂ ಪ್ರಗತಿಪರರು ಸಭೆ ಸೇರಿ ಅಹಿಂದ ಬಳಗ ಕೊಡಗು ಜಿಲ್ಲೆ ಎಂಬ ನೂತನ ಸಮಿತಿಯನ್ನು ರಚಿಸಿದ್ದಾರೆ.

ಮಡಿಕೇರಿ : ಕೊಡಗು ಜಿಲ್ಲೆಯ ಅಹಿಂದ ಸಮುದಾಯದ ಪ್ರಮುಖರು ಹಾಗೂ ಪ್ರಗತಿಪರರು ಸಭೆ ಸೇರಿ ಅಹಿಂದ ಬಳಗ ಕೊಡಗು ಜಿಲ್ಲೆ ಎಂಬ ನೂತನ ಸಮಿತಿಯನ್ನು ರಚಿಸಿದ್ದಾರೆ.

ಕುಶಾಲನಗರದ ಕೂಡ್ಲೂರಿನ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹಿಂದ ಸಮುದಾಯದ ಸಭೆಯಲ್ಲಿ ನಾಪಂಡ ಮುತ್ತಪ್ಪ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಹಾಗೂ ಟಿ.ಈ.ಸುರೇಶ ತೋಳೂರು ಶೆಟ್ಟಳ್ಳಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಾಪಂಡ ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ.ಕೆ.ಮಂಜುನಾಥ್ ಕುಮಾರ್ ಕೂಡ್ಲೂರು, ಎಚ್.ಎಂ.ನಂದಕುಮಾರ್ ಮಡಿಕೇರಿ, ಕೆ.ಎ.ಯಾಕುಬ್ ಸೋಮವಾರಪೇಟೆ, ಅರುಣ್ ರಾವ್ ರಾಜರಾವ್ ಕೂಡಿಗೆ, ವಕೀಲ ಬಿ.ಈ.ಜಯೇಂದ್ರ ಸೋಮವಾರಪೇಟೆ, ಕೆ.ಎ.ಆದಮ್ ಸೋಮವಾರಪೇಟೆ ಹಾಗೂ ಬುಡಕಟ್ಟು ಸಮುದಾಯದ ಮುಖಂಡರಾದ ಅನಿತಾ ಕುಶಾಲನಗರ, ಕೋಯ ಹೊಸತೋಟ, ಅಬ್ಬಾಸ್ ಶನಿವಾರಸಂತೆ, ರವಿ ಅಜ್ಜಳ್ಳಿ, ಹಮೀದ್ ಕೂಡಿಗೆ, ನಾಸಿರ್ ಮಾದಾಪುರ, ಆನಂದ್ ರಾಜು ತಣ್ಣೀರುಹಳ್ಳ, ಲೋಕೇಶ್ ಎಡುವಾರೆ, ಲೋಕೇಶ್ ಅರೆಯೂರು, ದಾಮೋದರ ಮಾದಾಪಟ್ಟಣ, ಸುನಿಲ್ ರಾವ್ ಕೂಡಿಗೆ, ದಯಾಕರ ದೊಡ್ಡಹಳ್ಳಿ, ವಸಂತ ನಗರಹಳ್ಳಿ, ಶಿವಣ್ಣ ಶನಿವಾರಸಂತೆ, ರಸೀನಾ ಎಂ.ಎ. ಚೆಟ್ಟಳ್ಳಿ, ಕುಸುಮ ಶನಿವಾರಸಂತೆ, ಸಾಕಿನ ಸಿ.ಜೆ. ಚೆಟ್ಟಳ್ಳಿ, ನಂಜುಂಡಸ್ವಾಮಿ ಕುಶಾಲನಗರ ಸೇರಿದಂತೆ ಅಹಿಂದ ಸಮುದಾಯದ ನೂರಕ್ಕೂ ಹೆಚ್ಚು ಪ್ರಮುಖರು ಉಪಸ್ಥಿತರಿದ್ದರು.ನೂತನ ಸಮಿತಿಯ ರಚನೆಯ ಮೂಲಕ ಜಿಲ್ಲೆಯ ಅಹಿಂದ ಸಮುದಾಯದ ಪ್ರಮುಖರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಪ್ರಮುಖರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಳತೆ, ಸಜ್ಜನಿಕೆ, ಅಪಾರ ಪಾಂಡಿತ್ಯದ ಅಪರೂಪದ ಸಂಗಮ ಪುಣಿಂಚತ್ತಾಯ: ಸಲೀಂ ಅಹ್ಮದ್
ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವುದಷ್ಟೇ ಅಂತಿಮ ಗುರಿಯಲ್ಲ: ಪ್ರೊ. ಜಗದೀಶ್ ಕುಮಾರ್