ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿರುವ ಕಲಿಕಾ ನ್ಯೂನತೆ ಸರಿಪಡಿಸಬೇಕು. ಅವರಿಗೆ ಪ್ರಸ್ತುತ ಯುಗಕ್ಕೆ ತಕ್ಕಂತೆ ಗುಣಾತ್ಮಕ ಶಿಕ್ಷಣವನ್ನು ಕಲಿಸಬೇಕು. ವಿದ್ಯಾರ್ಥಿಗಳು ಎಂಜಿನಿಯರ್, ಮೆಡಿಕಲ್, ಐಎಎಸ್ ಪದವಿ ಪಡೆದು ಉನ್ನತ ಸ್ಥಾನಕ್ಕೆ ಹೋದರೂ ಸಮಾಜಕ್ಕೆ ತೊಂದರೆ ಕೊಡಬಾರದು. ಸಮಾಜದಲ್ಲಿ ಸತ್ಪ್ರಜೆಗಳಾಗಿ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.
ಜಿಲ್ಲೆಯ ಜನರಿಗೆ ಮೊದಲ ಬಾರಿಗೆ ಕಂಪ್ಯೂಟರ್ ಪರಿಚಯಿಸಿದ ಡಾ.ಮೀರಾ ಶಿವಲಿಂಗಯ್ಯ ದಂಪತಿ ಮೈಸೂರಿನಲ್ಲಿ ಜೆಎಸ್‌ಎಸ್ ಸಂಸ್ಥೆಯವರು ಪ್ರಾರಂಭಿಸಿರುವಂತೆ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ತಾಂತ್ರಿಕ ಶಿಕ್ಷಣ ಕಾಲೇಜನ್ನು ನಗರದಲ್ಲಿ ಸ್ಥಾಪಿಸಿ ಅನುಕೂಲ ಕಲ್ಪಿಸಲಿ ಎಂದು ಆಶಿಸಿದರು.ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಹದೇವ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಜನ್ಮ ಕೊಡುವುದು ಎಷ್ಟು ಮುಖ್ಯವೋ ಅವರಿಗೆ ಜೀವನ ಕೊಡುವುದು ಅಷ್ಟೇ ಮುಖ್ಯ. ಎಸ್‌ಬಿಇಟಿ ಸಂಸ್ಥೆಯವರು ಎಲ್‌ಕೆಜಿಯಿಂದ ಪದವಿವರೆಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ಕೊಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಎಸ್‌ಬಿಇಟಿ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪ್ರತಿ ಮಗುವಿನಲ್ಲಿ ಕಲಿಯುವ ಪ್ರತಿಭೆ, ಶಕ್ತಿ ಇರುತ್ತದೆ. ಶಿಕ್ಷಕರು ಪ್ರತಿ ಮಕ್ಕಳಿಗೆ ಏನಾದರೂ ಕಲಿಸಬೇಕು ಎಂಬ ಛಲ ಇಟ್ಟುಕೊಂಡು ಅವರಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ಶಿಕ್ಷಣ ಕೊಡಬೇಕು. ಮಾಹಿತಿ ಕ್ರಾಂತಿಯಲ್ಲಿ ಮಕ್ಕಳು ತುಂಬಾ ಮುಂದುವರೆದಿದ್ದಾರೆ. ತಿಳಿವಳಿಕೆ ಹೇಳುವಷ್ಟು ಬೆಳೆಯುತ್ತಿದ್ದಾರೆ. ಅವರಿಗೆ ಮಾರ್ಗದರ್ಶನ ಕೊಡಿ. ಮಕ್ಕಳ ಹೊಸ ಕ್ರಾಂತಿಗೆ ಅಸ್ತ್ರ ಮಾಡಿಕೊಡಿ ಎಂದರು.
ಮಕ್ಕಳು ಸ್ನೇಹ, ಗೌರವ, ಸಂತೋಷದ ವರ್ತನೆಯಿಂದ ವರ್ತಿಸುವುದೇ ಶಿಕ್ಷಣ. ಎಳೆ ಮಕ್ಕಳ ಪ್ರತಿಭೆ, ಜ್ಞಾನ ಎನ್ನುವುದೇ ಸೋಜಿಗ. ಗೀತಾಂಜಲಿ ಶಾಲೆಯಲ್ಲಿ ಮಕ್ಕಳಿಗೆ ತಾಂತ್ರಿಕತೆಯನ್ನು ಧಾರೆ ಎರೆಯುತ್ತಿದ್ದೇವೆ. ಇದಕ್ಕೆ ಪೋಷಕರು ಸಹ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ಹೇಳಿದರು.ಎಸ್‌ಬಿಇಟಿ ಅಧ್ಯಕ್ಷ ಡಾ. ಬಿ. ಶಿವಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಗೀತಾಂಜಲಿ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ಎಚ್. ಸರೋಜ, ಮುಖ್ಯ ಶಿಕ್ಷಕ ವಿ.ಡಿ.ರಾಜಣ್ಣ, ರಂಗಸ್ವಾಮಿ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.