ನಾಡಗೌಡರಿಗೆ ಸಚಿವ ಸ್ಥಾನ ಬೇಡಿಕೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಸ್ಪಂದನೆ

KannadaprabhaNewsNetwork |  
Published : Jun 28, 2026, 04:00 AM IST
ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಶನಿವಾರ ತೆರಳಿದ ನಿಯೋಗ ಖರ್ಗೆ ಅವರನ್ನು ಭೆಟ್ಟಿಯಾಗಿ ಮನವಿ ಸಲ್ಲಿಸಿತು. | Kannada Prabha

ಸಾರಾಂಶ

ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಸಚೀವ ಸಂಪುಟ ವಿಸ್ತರಣೆಯಲ್ಲಿ ಕ್ಯಾಬಿನೆಟ್‌ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ನಿಯೋಗ ಬೆಂಬಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ-ಮುದ್ದೇಬಿಹಾಳ

ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡರರಿಗೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಕಲ್ಪಿಸಬೇಕೆಂದು ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನಿಂದ ತೆರಳಿದ ನಿಯೋಗಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಕಾರಾತ್ಮಕ ಸ್ಪಂದಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ಶನಿವಾರ ತೆರಳಿದ ನಿಯೋಗ ಖರ್ಗೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ೪೦ ವರ್ಷ ರಾಜಕಾರಣದಲ್ಲಿ ೬ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಉತ್ತರ ಕರ್ನಾಟಕ ಭಾಗದ ಶಾಸಕರಲ್ಲಿ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ಸಂಘಟನೆಯಲ್ಲಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಈ ಬಾರಿಯ ಸಚಿವ ಸ್ಥಾನ ವಿಸ್ತರಣೆಯಲ್ಲಿ ಕ್ಯಾಬಿನೆಟ್‌ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕೆಂದು ಖರ್ಗೆ ಅವರಿಗೆ ನಿಯೋಗದ ಉಸ್ತುವಾರಿ ವಹಿಸಿಕೊಂಡಿದ್ದ ವೈ.ಎಚ್. ವಿಜಯಕರ ಮನವಿ ಮಾಡಿದರು.

ನಿಯೋಗದ ಜನರ ಮನವಿ ಸ್ವೀಕರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾಡಗೌಡರಿಗೆ ಸಚಿವ ಸ್ಥಾನ ನೀಡುವುದರ ಬಗ್ಗೆ ನನ್ನ ಗಮನಕ್ಕಿದೆ. ರಾಜ್ಯ ಹಾಗೂ ಕೇಂದ್ರದ ನಾಯಕರ ಸಭೆಯಲ್ಲಿ ಚರ್ಚಿಸಿ ನಿಮ್ಮಲ್ಲರ ಆಸೆ ಈಡೇರಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಈ ಸಮಯದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗುರು ತಾರನಾಳ, ಬಿ.ಕೆ. ಬಿರಾದಾರ, ಪ್ರಭುರಾಜ ಕಲ್ಬುರ್ಗಿ, ಪ್ರಭುಗೌಡ ಮದರಕಲ್ಲ, ಶರಣುಧನಿ ದೇಶಮುಖ, ಮುತ್ತುಕಡಿ, ಸಿದ್ದನಗೌಡ ನಾವದಗಿ, ಕಾಶಿಮ್‌ ಪಟೇಲ್‌ ಮೂಕೀಹಾಳ, ರಾಜುಗೌಡಗೌಡರ, ಸಂಗನಗೌಡ ಬಿರಾದಾರ, ಜಿಟಿಸಿ ಸಂಗನಗೌಡ, ಶರಣು ಸಜ್ಜನ, ಸಂಗಮೇಶ ದೇಸಾಯಿ, ಶಿವಾನಂದ ಹೂಗಾರ, ಡಾ.ನಜೀರ್‌ ಕೋಳ್ಯಾಳ, ಬಾಪುರಾಯ ದೇಸಾಯಿ, ರವಿ ಪಾಟೀಲ, ಸಂಗನಗೌಡ ಅಸ್ಕಿ, ರಾಯನಗೌಡತಾತರೆಡ್ಡಿ, ಚಾಂದಸಾಬ ಲಾಹೋರಿ, ಸಿದ್ದನಗೌಡ ಪಾಟೀಲ, ಮಲ್ಲನಗೌಡ ಯಾತಗಿರಿ, ವಿರೇಶ ಹಡಲಗೇರಿ, ಇಬ್ರಾಹಿಂ ಮನ್ಸೂರ್, ಕಾಮರಾಜ ಬಿರಾದಾರ, ಮೈಹಿಬೂಬ ಚೋರಗಸ್ತಿ, ಮೋದಿನಸಾ ನಗಾರ್ಚಿ, ಸಿಕಂದರ್‌ ಜಾನ್ವೇಕರ, ಶ್ರೀಕಾಂತ ಚಲವಾದಿ, ಮೈಹಿಬೂಬ ಗೊಳಸಂಗಿ, ಮಲ್ಲು ಮದರಕಲ್ಲ, ಮುನ್ನಾ ಅರ್ಜುಣಗಿ, ಜಮಾದಾರ, ತನ್ವೀರ್ ಮನಗೂಳಿ, ಬುಡ್ಡಾಕೇಂಭಾವಿ, ಮೈಹಿಬೂಬ ಕೇಂಬಾವಿ, ಬಸ್ಸು ಕಟ್ಟಿಮನಿ, ಗೋಪಾಲ ಕಟ್ಟಿಮನಿ, ಬಿ.ಕೆ. ಬಿರಾದಾರ, ಎಚ್.ಎಸ್. ಗೂಗಲ್ಲ, ಎಸ್.ಎಸ್. ಮಾಲಗತ್ತಿ, ಅಕ್ಷತಾ ಚಲವಾದಿ, ಸಾವಿರಾರು ಉಪಸ್ಥಿತರಿದ್ದರು.

ಖರ್ಗೆ ಕಾಲಿಗೆರಗಿ ಬೇಡಿಕೊಂಡ ವಿಜಯಕರ:

ನಿಯೋಗದೊಂದಿಗೆ ತೆರಳಿದ ಮುದ್ದೇಬಿಹಾಳದ ವೈ.ಎಚ್. ವಿಜಯಕರ ಅವರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಾಲಿಗೆರಗಿ ಈ ಬಾರಿ ಶಾಸಕ ನಾಡಗೌಡ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಿ ಲಕ್ಷಾಂತರ ಅಭಿಮಾನಿ ಕಾರ್ಯಕರ್ತರ ಆಸೆ ಈಡೇರಿಸಬೇಕೆಂದು ಬೇಡಿಕೊಂಡಿದ್ದು, ಖರ್ಗೆ ಅವರು ಮೌನಮುರಿದು ನಾಡಗೌಡರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಲು ಕಾರಣವಾಯಿತು.

ಗಮನ ಸೆಳೆದ ಗಾಂಧಿ ಟೋಪಿ:

ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬೆಂಗಳೂರಿಗೆ ತೆರಳಿದ್ದ ನಿಯೋಗದ ಸಾವಿರಾರು ಜನರ ತಲೆಯ ಮೇಲೆ ಗಾಂಧಿ ಟೋಪಿಗಳು ಎದ್ದು ಕಂಡವಲ್ಲದೇ ಕೆಲವರು ಪ್ಯಾಂಟ್ ಶರ್ಟ್‌ ಬದಲು ಧೋತಿ, ನೆಹರು ಶರ್ಟ್ ಧರಿಸಿದ್ದು, ಗಮನ ಸೆಳೆಯುವಂತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ