ಗುಣಮಟ್ಟದ ಆರೋಗ್ಯ ಒದಗಿಸುವ ಉದ್ದೇಶ: ಶ್ರೀ ಸಾಯಿ

KannadaprabhaNewsNetwork |  
Published : Sep 02, 2025, 12:00 AM IST
01ಬಿಜಿಪಿ-1 | Kannada Prabha

ಸಾರಾಂಶ

ಭಾಗೇಪಲ್ಲಿ ಭಾಗದ 2 ಲಕ್ಷ ಜನರಿಗೆ ಇಲ್ಲಿನ ಆರೋಗ್ಯ ಕೇಂದ್ರ ಉಪಯುಕ್ತವಾಗಲಿದೆ. ಅಲ್ಲದೆ ಪ್ರತಿ ನಿತ್ಯದ ಅನಾರೋಗ್ಯ ಸಮಸ್ಯೆಗಳಿಗೆ ತುರ್ತು ಸೇವೆಗಳು, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಾಮಾನ್ಯ ವೈದ್ಯಕೀಯ ಸೇವೆಗಳು, ಎಕ್ಸ್-ರೇ,ಪ್ರಯೋಗಾಲಯ ಮತ್ತಿತರ ಘಟಕಗಳು ಸೇರಿದಂತೆ ಡಯೋಗ್ನಸ್ಟಿಕ್ ಸೌಲಭ್ಯಗಳು ಇಲ್ಲಿ ಸಿಗಲಿವೆ. ಅಲ್ಲದೆ ಎಲ್ಲಾ ವಿಭಾಗಗಳ ತಜ್ಞ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಪ್ರತಿಯೊಬ್ಬರಿಗೂ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಒದಗಿಸುವುದೇ ನಮ್ಮ ಏಕೈಕ ಉದ್ದೇಶವಾಗಿದೆ. ಒಳ್ಳೆಯತನಕ್ಕೆ ಸಮಾಜವನ್ನು ಪರಿವರ್ತನೆ ಮಾಡುವ ಶಕ್ತಿ ಇದೆ. ಒಳ್ಳೇತನದಿಂದ ಜನರ ಸೇವೆ ಮಾಡುವ ಮೂಲಕ ಸಮಾಜದ ಬದಲಾವಣೆ ತರಲು ಕೈಜೋಡಿಸಬೇಕೆಂದು ಸದ್ಗುರು ಶ್ರೀ ಮಧುಸೂಧನ ಸಾಯಿ ರವರು ಹೇಳಿದರು.

ಪಟ್ಟಣದ ಡಿವಿಜಿ ರಸ್ತೆಯಲ್ಲಿನ ಆರ್‌ವಿ ರಾಮಚಂದ್ರ ರವರ ಶ್ರೀವೆಂಕಟೇಶ್ವರ ನಿಲಯದಲ್ಲಿ ಆರೋಗ್ಯಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿರುವ ನಿಟ್ಟಿನಲ್ಲಿ ಇಲ್ಲಿ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

2 ಲಕ್ಷ ಜನರಿಗೆ ಆರೋಗ್ಯ ಸೇವೆ

ಈ ಭಾಗದ 2 ಲಕ್ಷ ಜನರಿಗೆ ಇಲ್ಲಿನ ಆರೋಗ್ಯ ಕೇಂದ್ರ ಉಪಯುಕ್ತವಾಗಲಿದೆ. ಅಲ್ಲದೆ ಪ್ರತಿ ನಿತ್ಯದ ಅನಾರೋಗ್ಯ ಸಮಸ್ಯೆಗಳಿಗೆ ತುರ್ತು ಸೇವೆಗಳು, ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸಾಮಾನ್ಯ ವೈದ್ಯಕೀಯ ಸೇವೆಗಳು, ಎಕ್ಸ್-ರೇ,ಪ್ರಯೋಗಾಲಯ ಮತ್ತಿತರ ಘಟಕಗಳು ಸೇರಿದಂತೆ ಡಯೋಗ್ನಸ್ಟಿಕ್ ಸೌಲಭ್ಯಗಳು ಇಲ್ಲಿ ಸಿಗಲಿವೆ. ಅಲ್ಲದೆ ಎಲ್ಲಾ ವಿಭಾಗಗಳ ತಜ್ಞ ವೈದ್ಯರು ಸೇವೆಗೆ ಲಭ್ಯರಿರುತ್ತಾರೆ ಎಂದರು.

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರವನ್ನು ನಿರ್ವಹಿಸಲಿದೆ. ಈ ಆರೋಗ್ಯ ಕೇಂದ್ರವು ‘ಒಂದು ಜಗತ್ತು ಒಂದು ಕುಟುಂಬದ ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ’ ಸಮೂಹದ ಭಾಗವಾಗಲಿದೆ. ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕೆನ್ನುವುದೇ ಮುಖ್ಯ ಉದ್ದೇಶವಾಗಿದೆ ಎಂದರು.

ಮುದ್ದೇನಹಳ್ಳಿಯಲ್ಲಿ 650 ಹಾಸಿಗೆ ಆಸ್ಪತ್ರೆ

ಪುಟ್ಟಪರ್ತಿ ಶ್ರೀ ಸಾಯಿಬಾಬಾ ರವರ 100ನೇ ಜನ್ಮದಿನೋತ್ಸವದ ದಿನದಂದು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ 650 ಹಾಸಿಗೆ ಆಸ್ಪತ್ರೆ ಪ್ರಾರಂಭಿಸಲಾಗುವುದು. ಈಗಾಗಲೇ ಮುದ್ದೇನ ಹಳ್ಳಿ ಆಸ್ಪತ್ರೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಜನರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸಿದ್ದೇವೆ. ಅಲ್ಲದೆ ಇಲ್ಲಿ ವೈದ್ಯಕೀಯ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಹ ಹ್ಯಾಪಿನೆಸ್ ಫೌಂಡೇಷನ್ನ ಮುಖ್ಯಸ್ಥರು, ಮನು ಭಾವಿ ಶಾ, ಡಾ ನಿತಿನ್ ಭಾಯಿ ಶಾ, ಎಂಎಎಸ್ಐ ಭಾರತದ ತಂಡದ ಸದಸ್ಯರು, ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು, ಬಿ.ಆರ್.ನರಸಿಂಹ ನಾಯ್ಡು,ಸದಸ್ಯರಾದ ಶ್ರೀನಿವಾಸ್ ರೆಡ್ಡಿ, ನ್ಯಾಷನಲ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಎನ್.ನಂಜುಂಡಪ್ಪ , ಟಿಹೆಚ್ಓ ಡಾ.ಸತ್ಯನಾರಾಯಣ ರೆಡ್ಡಿ, ಎಲ್ಐಸಿ ಏಜೆಂಟ್ ಹಾಗೂ ಮಾಳಿಗೆ ಮಾಲೀಕ ರಾಮಚಂದ್ರ ಮತ್ತಿತರರು ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ