ಎಸ್.ಐ.ಕೋಡಿಹಳ್ಳಿ ಗ್ರಾಮದ ಆಲೆಮನೆಯಿಂದ ವಾಯುಮಾಲಿನ್ಯ: ಗ್ರಾಮಸ್ಥರಿಂದ ದೂರು

KannadaprabhaNewsNetwork |  
Published : Jul 24, 2025, 12:49 AM IST
23ಕೆಎಂಎನ್‌ಡಿ-4ಮಂಡ್ಯ ತಾಲೂಕಿನ ಎಸ್‌.ಐ.ಕೋಡಿಹಳ್ಳಿ ಗ್ರಾಮದ ಆಲೆಮನೆಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ತಪ್ಪಿಸುವಂತೆ ಒತ್ತಾಯಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಆಲೆಮನೆಯಲ್ಲಿ ಬೆಲ್ಲ ತಯಾರಿಕೆಗೆ ಚಪ್ಪಲಿ ಕಾರ್ಖಾನೆಗಳಿಂದ ತಂದ ರಬ್ಬರ್, ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದಾಗಿ ಸುತ್ತಮುತ್ತಲ ಪರಿಸರಕ್ಕೆ ತುಂಬಾ ತೊಂದರೆಯುಂಟಾಗುತ್ತಿದೆ. ವಾಯುಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದ ಆಲೆಮನೆಯಿಂದ ಉಂಟಾಗುತ್ತಿರುವ ವಾಯು ಮಾಲಿನ್ಯ ತಪ್ಪಿಸುವಂತೆ ಒತ್ತಾಯಿಸಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದಿಂದ ಆಗಮಿಸಿದ ಹಲವಾರು ಮಂದಿ ಗ್ರಾಮಸ್ಥರು ಪರಿಸರ ಮಾಲಿನ್ಯ ಇಲಾಖೆಗೆ ತೆರಳಿ ವಾಯು ಮಾಲಿನ್ಯ ತಡೆಗಟ್ಟುವಂತೆ ಒತ್ತಾಯಿಸಿದರು.

ಗ್ರಾಮದ ಕೆ.ಬಿ.ಸಿದ್ದಲಿಂಗಪ್ಪ ಎಂಬುವರ ಆಲೆಮನೆಯಿಂದ ನಿತ್ಯ ವಾಯುಮಾಲಿನ್ಯವಾಗುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡು ವಾಯು ಮಾಲಿನ್ಯ ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ಆಲೆಮನೆಯಲ್ಲಿ ಬೆಲ್ಲ ತಯಾರಿಕೆಗೆ ಚಪ್ಪಲಿ ಕಾರ್ಖಾನೆಗಳಿಂದ ತಂದ ರಬ್ಬರ್, ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದಾಗಿ ಸುತ್ತಮುತ್ತಲ ಪರಿಸರಕ್ಕೆ ತುಂಬಾ ತೊಂದರೆಯುಂಟಾಗುತ್ತಿದೆ. ವಾಯುಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈಗಾಗಲೇ ಹಲವಾರು ಮಂದಿ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಆಲೆಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಗ್ರಾಪಂ ಸದಸ್ಯ ಪ್ರದೀಪ್, ಮುಖಂಡರಾದ ವಿಕಾಸ್, ಪುಟ್ಟೇಗೌಡ, ಲೋಕೇಶ್, ಶಿವಶಂಕರ್, ಬೋರೇಗೌಡ ಸೇರಿದಂತೆ ಇತರರು ಹಾಜರಿದ್ದರು.

ಡೇರಿ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಸಿಂಗ್ರೀಗೌಡ - ಜಯಶೀಲ ಆಯ್ಕೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಸಿಂಗ್ರೀಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ರೈತಸಂಘ- ಕಾಂಗ್ರೆಸ್ ಮೈತ್ರಿಕೂಟ ಬೆಂಬಲಿತ ಸಿಂಗ್ರೀಗೌಡ ಹಾಗೂ ಜಯಶೀಲ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಒಟ್ಟು 10 ಮಂದಿ ಮೈತ್ರಿಕೂಟದ ಬೆಂಬಲಿತರು ನಿರ್ದೇಶಕರು ಆಯ್ಕೆಯಾಗಿದ್ದರು. ಬುಧವಾರ ನಡೆದ ಚುನಾವಣೆಯಲ್ಲಿ ಸಿಂಗ್ರೀಗೌಡ ಹಾಗೂ ಜಯಶೀಲ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆ ವಸೀಂಪಾಷ ನೂತನ ಅಧ್ಯಕ್ಷ - ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಬಳಿಕ ಕಾರ್ಯಕರ್ತರು ಸಿಹಿ ವಿತರಿಸಿ ಸಂಭ್ರಮಿಸಿದರು.

ಈ ವೇಳೆ ಡೇರಿ ಮಾಜಿ ಅಧ್ಯಕ್ಷ ನರಸೇಗೌಡ ಮತ್ತು ಯುವ ಮುಖಂಡ ಅಜಯ್ ಮಾತನಾಡಿ, ಸಿಂಗ್ರಿಗೌಡ ಮತ್ತು ಜಯಶೀಲರನ್ನು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಇವರು ಎಲ್ಲಾ ನಿರ್ದೇಶಕರ ಮಾರ್ಗದರ್ಶನ ಪಡೆದುಕೊಂಡು ಡೇರಿ ಉನ್ನತೀಕರಣಕ್ಕೆ ಮುಂದಾಗಬೇಕು ಎಂದರು.

ಈ ವೇಳೆ ಡೇರಿ ನಿರ್ದೇಶಕರಾದ ಪಾಪಣ್ಣ, ರಮೇಶ್, ಮಂಜುಳಾ, ದೇವಿರಮ್ಮ, ಭಾಗ್ಯಮ್ಮ, ಯಶೋಧಮ್ಮ, ಕನ್ಯಾಕುಮಾರಿ, ಸುಮಿತ್ರಾ, ಕಾರ್ಯದರ್ಶಿ ಕೃಷ್ಣೇಗೌಡ (ಬಾಬು), ಯಜಮಾನರಾದ ಸಣ್ಣೇಗೌಡ, ಸಿಂಗ್ರಿಗೌಡ, ಬಿ.ಎಸ್.ನರಸೇಗೌಡ, ಪುಟ್ಟಸ್ವಾಮಿಗೌಡ, ಪಾಪೇಗೌಡ, ಚಿಕ್ಕಣ್ಣ, ಪಟೇಲ್ ಕೃಷ್ಣೇಗೌಡ, ಮಾಣಿಕ್ಯನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್, ಮಾಜಿ ಸದಸ್ಯೆ ಅರ್ಪಿತಾ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ನಟರಾಜು,ಎಂ.ಶೆಟ್ಟಹಳ್ಳಿ ಡೇರಿ ಅಧ್ಯಕ್ಷ ಸುರೇಶ್, ಮುಖಂಡರಾದ ಬಿ.ಕೆ.ಯೋಗೇಶ್, ಮಹಾಂತೇಶ್, ಭಾಸ್ಕರ್, ಪುಟ್ಟೇಗೌಡ ಇತರರಿದ್ದರು.

PREV

Recommended Stories

ಕರಾವಳಿಯಲ್ಲಿ ಭಾರೀ ಮಳೆ - ರೆಡ್‌ ಅಲರ್ಟ್ : ಶಾಲಾ, ಕಾಲೇಜಿಗೆ ರಜೆ
ಬಿಎಂಟಿಸಿ ನೌಕರರ ಅಪಘಾತ ವಿಮಾ ಮೊತ್ತ 1.25 ಕೋಟಿಗೆ ಏರಿಕೆ