ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!

KannadaprabhaNewsNetwork |  
Published : Nov 12, 2026, 03:45 AM IST
11ಕೆಆರ್ ಎಂಎನ್ 2.ಜೆಪಿಜಿಬಿಡದಿ ವ್ಯಾಪ್ತಿಯ ನಲ್ಲಿ ಗುಡ್ಡೆ ಕೆರೆ ಆವರಣದಲ್ಲಿ ವಾಯು ವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಸಚಿವ ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ದೀಪಾವಳಿ ಹಬ್ಬದ ವೇಳೆ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದ್ದು, ನ.9,10 ಮತ್ತು 11ರಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಸರಾಸರಿ 100 ರಿಂದ ಗರಿಷ್ಠ 116ರವರೆಗೆ ತಲುಪಿದೆ.

-ಹಬ್ಬಕ್ಕೆ ಮುನ್ನ 59 ಪಟಾಕಿ ಎಕ್ಯುಐ ಇದ್ದ ಮಾಲಿನ್ಯ । ಪಟಾಕಿ ಸಿಡಿತದ ಪರಿಣಾಮ, 116ಕ್ಕೆ ತಲುಪಿದ ವಾಯು ಗುಣಮಟ್ಟ ಸೂಚ್ಯಂಕ

---ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಬ್ಬದ ವೇಳೆ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದ್ದು, ನ.9,10 ಮತ್ತು 11ರಂದು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಸರಾಸರಿ 100 ರಿಂದ ಗರಿಷ್ಠ 116ರವರೆಗೆ ತಲುಪಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾಪನ ಕೇಂದ್ರಗಳ ಮಾಹಿತಿ ಪ್ರಕಾರ, ದೀಪಾವಳಿ ಹಬ್ಬದ ಪೂರ್ವದಲ್ಲಿ ಅಂದರೆ ನ.7ರಂದು ರಾತ್ರಿ 8 ಗಂಟೆಗೆ ಎಕ್ಯುಐ 55 ದಾಖಲಾಗಿತ್ತು. ನ.8ರ ರಾತ್ರಿ 8ಕ್ಕೆ 59 ಎಕ್ಯುಐ ಇತ್ತು. ಆದರೆ, ನ.9ರಂದು ರಾತ್ರಿ 8ಕ್ಕೆ ಎಕ್ಯುಐ 89ಕ್ಕೆ ತಲುಪಿದೆ. ದೀಪಾವಳಿ ಬಲಿಪಾಡ್ಯಮಿ ದಿನವಾದ ನ.10ರಂದು ರಾತ್ರಿ 8 ಗಂಟೆಗೆ ಎಕ್ಯುಐ ಗರಿಷ್ಠ 116ಕ್ಕೆ ತಲುಪಿದೆ. ದೀಪಾವಳಿ ಮುಗಿದ ನಂತರವೂ ಮಾಲಿನ್ಯ ಪ್ರಮಾಣದ ಗರಿಷ್ಠ ಮಟ್ಟದಲ್ಲೇ ಮುಂದುವರಿದಿದ್ದು ನ.11ರ ರಾತ್ರಿ 8 ಗಂಟೆಗೆ ಎಕ್ಯುಐ 112 ಇತ್ತು.

ಇನ್ನು ಗಾಳಿಯಲ್ಲಿ ತೇಲಾಡುವ ಸೂಕ್ಷ್ಮ ಕಣಗಳು (ಪಿ.ಎಂ 2.5) ಕೂಡ ದೀಪಾವಳಿ ವೇಳೆ ಅನಾರೋಗ್ಯಕರ ಮಟ್ಟಕ್ಕೆ ಏರಿಕೆಯಾಗಿತ್ತು. ನ.8ರ ರಾತ್ರಿ 8 ಗಂಟೆಗೆ ಪಿಎಂ 2.5 ಪ್ರಮಾಣ 20 ಇದ್ದದ್ದು, ನ.9ರ ರಾತ್ರಿ 8 ಗಂಟೆಗೆ 40ಕ್ಕೆ ಏರಿಕೆಯಾಗಿದೆ. ನ.10ರ ನಸುಕಿನ 4 ಗಂಟೆಗೆ ಗರಿಷ್ಠ 45ಕ್ಕೆ ತಲುಪಿದ್ದು, ರಾತ್ರಿ 8 ಗಂಟೆಗೆ 39ಕ್ಕೆ ಇಳಿಕೆಯಾಗಿದೆ. ನ.11ರಂದು ರಾತ್ರಿ 8 ಗಂಟೆಗೆ ಪಿ.ಎಂ 2.5 ಪ್ರಮಾಣ 37 ದಾಖಲಾಗಿದೆ.

ಎಕ್ಯುಐ ಪ್ರಮಾಣ 100ರ ಗಡಿ ದಾಟಿದರೆ ಹಾಗೂ ಪಿ.ಎಂ 2.5 ಪ್ರಮಾಣ 35ರ ಗಡಿ ದಾಟಿದರೆ ಶ್ವಾಸಕೋಶ, ಹೃದಯ ಸಮಸ್ಯೆ ಇರುವವರು, ಪುಟ್ಟ ಮಕ್ಕಳು, ಹಿರಿಯ ನಾಗರಿಕರಿಗೆ ಹೊರಗಡೆ ಓಡಾಡುವಾಗ ತೊಂದರೆ ಉಂಟಾಗುತ್ತದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಕೆಲವು ಪ್ರದೇಶಗಳಲ್ಲಿ ಭಾರಿ ಏರಿಕೆ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಗರದ ಕೆಲವು ಮಾಪನ ಕೇಂದ್ರಗಳಲ್ಲಿ ಮಾಲಿನ್ಯ ಪ್ರಮಾಣವೂ ಕೆಲವು ಪ್ರದೇಶಗಳಲ್ಲಿ ಎಕ್ಯುಐ ಪ್ರಮಾಣ ಗರಿಷ್ಠ 181ರವರೆಗೂ ತಲುಪಿದೆ. ಅದೇ ರೀತಿ, ಗಾಳಿಯಲ್ಲಿ ತೇಲಾಡುವ ಸೂಕ್ಷ್ಮಕಣಗಳ ಪ್ರಮಾಣ ಗರಿಷ್ಠ 97ರವರೆಗೂ ತಲುಪಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌
ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಲು ‘ಜೊಲ್ಲೆ ಧ್ವನಿ’ ಎಫ್‌ಎಂ