ಕನ್ನಡಪ್ರಭ ವಾರ್ತೆ ಗುರುಮಠಕಲ್
ತಾಲೂಕಿನ ಅಜಲಾಪುರ ಗ್ರಾಮದ ಬಲಭೀಮಸೇನ ರಥೋತ್ಸವವು ಮಾ.21ರಂದು ಬೆಳಗ್ಗೆ 7 ಗಂಟೆಗೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಲಿಂ.ದ್ವಾರಕಮ್ಮ ಪಾಂಡುರಂಗ ತಾತನವರ 7ನೇ ಪುಣ್ಯ ಸ್ಮರಣೆ ಅಂಗವಾಗಿ ಜರುಗುವ ಜಾತ್ರಾ ಮಹೋತ್ಸವದ ಮುನ್ನ ಬುಧವಾರ ಸಾಯಂಕಾಲ ಮಹಾ ಗಣಪತಿ ಪೂಜೆಯೊಂದಿಗೆ ದೇವತಾಪೂಜೆ, ಗಣಹೋಮ, ರುದ್ರಹೋಮ ಹಾಗೂ ಪುರವಂತಿಕೆ ಕಾರ್ಯಕ್ರಮ ನೆರವೇರಿತು.
ಮಾ.21ರಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಬಲಭಿಮಸೇನ ಮೂರ್ತಿಗೆ ಮಹಾರುದ್ರಾಭಿಷೇಕ ನಂತರ 9 ಗಂಟೆಗೆ ನೇರಡಗಂ ಶ್ರೀಮಠದ ಪೀಠಾಧಿಪತಿ ಪಂಚಮ ಸಿದ್ಧಲಿಂಗ ಮಹಾಸ್ವಾಮೀಜಿ ಭವ್ಯ ಮೆರವಣಿಗೆ ಜರುಗಲಿದೆ.ನಂತರ ಜರುಗುವ ಧರ್ಮ ಸಭೆಯಲ್ಲಿ ಪಂಚಮ ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶಾಸಕ ಶರಣಗೌಡ ಕಂದಕೂರು, ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ, ಮಾಲಿಕಯ್ಯ ಗುತ್ತೇದಾರ, ಮುಖಂಡರಾದ ಬಾಲರಾಜ ಗುತ್ತೇದಾರ, ರಾಜೇಶ ಗುತ್ತೇದಾರ, ಹನುಮಾನ ಆರಾಧಕ ಎ. ರಾಘವೇಂದ್ರರಾವ್, ಡಾ. ಪ್ರಣವಾನಂದ ಮಹಾಸ್ವಾಮಿಗಳು, ಮಹೇಶ ಮುತ್ಯಾಜಿ, ಭೀಮಾಶಂಕರ ಶ್ರೀಗಳು, ಮಲ್ಲಪ್ಪ ಶರಣರು, ಲಿಂಗಪ್ಪ ತಾತಾ, ಬುಸ್ಸಣ್ಣ ತಾತ ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನೇತೃತ್ವವನ್ನು ಹನುಮಾನ ಆರಾಧಕರಾದ ಶಂಕರಪ್ಪ ಪಾಂಡುರಂಗ ತಾತ ಅವರು ವಹಿಸಲಿದ್ದಾರೆ.
ಗ್ರಾಮೀಣ ಕ್ರೀಡೆಗಳಿಗೆ ವೇದಿಕೆಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದ ಬಲಭೀಮಸೇನ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮೀಣ ಸೊಗಡಿನ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಏರ್ಪಡಿಸಲಾಗಿದೆ. 105 ಕೆಜಿ ಸಂಗ್ರಾಣಿ ಕಲ್ಲು ಎತ್ತಿದವರಿಗೆ 5 ತೊಲಿ, 95 ಕೆಜಿ ಎತ್ತಿದವರಿಗೆ 3 ತೊಲಿ ಹಾಗೂ 85 ಕೆಜಿ ಎತ್ತಿದವರಿಗೆ 2 ತೊಲಿ ಬೆಳ್ಳಿ ಕಡಗ ಕೊಟ್ಟು ಸನ್ಮಾನಿಸಲಾಗುತ್ತದೆ. ಮತ್ತು ಜಾತ್ರೆಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ.