ಕನ್ನಡಪ್ರಭ ವಾರ್ತೆ ಬೇಲೂರು
ಅಕ್ರಮ್ ಶರೀಫ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ಮಾಜಿ ಅಧ್ಯಕ್ಷ ಎ. ಆರ್. ಅಶೋಕ್ ಅವರ ಪಾತ್ರ ಪ್ರಮುಖವಾಗಿತ್ತು. ನೂತನ ಅಧ್ಯಕ್ಷರಿಗೆ ಕೇವಲ ಐದು ತಿಂಗಳ ಅಧಿಕಾರಾವಧಿ ಲಭಿಸಿದ್ದು, ಈ ಅವಧಿಯಲ್ಲಿ ಪುರಸಭೆಯ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಲಿ ಎಂದು ಶುಭ ಹಾರೈಸಿದರು.ಈ ಕುರಿತು ಮಾತನಾಡಿದ ಮಾಜಿ ಅಧ್ಯಕ್ಷ ಎ.ಆರ್. ಅಶೋಕ್ ಅವರು, “ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಮೂರು ಪಕ್ಷಗಳ ಒಮ್ಮತದ ಬೆಂಬಲದೊಂದಿಗೆ ಅಕ್ರಮ್ ಶರೀಫ್ ಅವರನ್ನು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಈ ಹಿಂದೆಯೂ ನಾನು ಅಧ್ಯಕ್ಷನಾಗುವಾಗ ಎಲ್ಲಾ ಪಕ್ಷಗಳ ಸಹಕಾರ ಸಿಕ್ಕಿತ್ತು. ಅದೇ ರೀತಿಯಲ್ಲಿ ಇಂದು ಅಕ್ರಮ್ ಶರೀಫ್ ಅವರಿಗೂ ಎಲ್ಲರ ಬೆಂಬಲ ದೊರೆತಿದೆ ಎಂದರು.ನಂತರ ನೂತನ ಅಧ್ಯಕ್ಷ ಅಕ್ರಮ್ ಶರೀಫ್ ಅವರು ಮಾತನಾಡಿ, ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಮಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ ಪಕ್ಷದ ಹಿರಿಯರು ಹಾಗೂ ಸದಸ್ಯರ ಪ್ರೋತ್ಸಾಹದಿಂದ ಈ ಸ್ಥಾನವನ್ನು ದೊರಕಿದೆ. ನಮ್ಮ ಸದಸ್ಯರು ಹಾಗೂ ಹಿರಿಯರಾದ ಶಿವರಾಮಣ್ಣ, ನಿಶಾಂತ್, ಎಂ.ಆರ್. ವೆಂಕಟೇಶ್, ಎ ಆರ್ ಅಶೋಕ್, ಬಿಸಿ ಜಗದೀಶ್, ಶೈಲೇಶ್, ಇಕ್ಬಾಲ್ ಅಹಮದ್, ಸೇರಿದಂತೆ ಅನೇಕರು ನನಗೆ ಧೈರ್ಯ ತುಂಬಿದರು. ಎಲ್ಲಾ ಸದಸ್ಯರು ಬಹುಮತದ ಬೆಂಬಲ ನೀಡಿ ಇಂದು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.ಶಿವರಾಮಣ್ಣ ಅವರು ಆರಂಭದಿಂದಲೂ ತಮ್ಮ ಪರವಾಗಿ ನಿಂತು ಪ್ರೋತ್ಸಾಹ ನೀಡಿದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದ ಅಕ್ರಮ್ ಶರೀಫ್, “ಕಾಂಗ್ರೆಸ್ ಪಕ್ಷದಲ್ಲೇ ನೀನು ಮುಂದುವರಿಯಬೇಕು ಎಂದು ಅವರು ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ಅವರ ಬೆಂಬಲ ನನಗೆ ಬಹಳ ಸಂತೋಷ ತಂದಿದೆ” ಎಂದರು.ಜೆಡಿಎಸ್ ಹಾಗೂ ಬಿಜೆಪಿ ಬೆಂಬಲದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಎಲ್ಲಾ ಪಕ್ಷದವರೂ ಸ್ನೇಹಭಾವದಿಂದ ಬೆಂಬಲ ನೀಡಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಹ ನನ್ನೊಂದಿಗೆ ಇದ್ದರು. ಆದರೆ ಮುಖ್ಯವಾಗಿ ಕಾಂಗ್ರೆಸ್ ಮುಖಂಡರಾದ ನಿಶಾಂತ್, ಎಂ.ಆರ್. ವೆಂಕಟೇಶ್ ಹಾಗೂ ಶಿವರಾಮಣ್ಣ ಅವರ ಮಾರ್ಗದರ್ಶನವೇ ನನ್ನ ಗೆಲುವಿಗೆ ಕಾರಣ ಎಂದು ಹೇಳಿದರು.ಈ ವೇಳೆ ಪುರಸಭಾ ಸದಸ್ಯರುಗಳಾದ ತೀರ್ಥ ಕುಮಾರಿ ವೆಂಕಟೇಶ್. ಉಷಾ ಸತೀಶ್. ಮೀನಾಕ್ಷಿ. ಜಮೀಲ. ಮಣಿ. ಆಶಾ ರಾಣಿ. ಅಶೋಕ್ .ಜಮಾಲ್. ಸೌಮ್ಯ. ಪುಟ್ಟಸ್ವಾಮಿ. ದಿವ್ಯ ಗಿರೀಶ್ ಶೈಲೇಶ್ ಪ್ರಭಾಕರ್ ರತ್ನ ಸತ್ಯ ನಾರಾಯಣ ಸೇರಿದಂತೆ ಇತರರು ಹಾಜರಿದ್ದರು