ಎ.ಎಂ.ಕರ್ನಾಚಿ
ಕನ್ನಡಪ್ರಭ ವಾರ್ತೆ ಯಮಕನಮರಡಿಗಡಿಗ್ರಾಮ ಯಮಕನಮರಡಿಯಲ್ಲಿ ಫೆ.23ರಂದು ಹುಕ್ಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ನಡೆಯಲಿದ್ದು, ಗ್ರಾಮವು ಅಕ್ಷರ ಜಾತ್ರೆಗೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಯಮಕನಮರಡಿ ಗ್ರಾಮದ ಹುಣಸಿಮರದ ಪರಿಸರದಲ್ಲಿರುವ ಹುಣಸಿಕೊಳ್ಳ ಮಠದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸುವರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಮುಂತಾದ ಗಣ್ಯರು ಭಾಗಿಯಾಗಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ. ಅಂದು ಬೆಳಗ್ಗೆ 8ಕ್ಕೆ ಕನ್ನಡ ಧ್ವಜಾರೋಹಣ, 8.30ಕ್ಕೆ ಕನ್ನಡ ನಾಡದೇವಿ ಮತ್ತು ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ 10ಕ್ಕೆ ಉದ್ಘಾಟನಾ ಸಮಾರಂಭ, 11.30ಕ್ಕೆ ಗೋಷ್ಠಿ-1 ವಿಚಾರ ಧಾರೆ, ಮಧ್ಯಾಹ್ನ 2ಕ್ಕೆ ಕವಿಗೋಷ್ಠಿ, ಸಂಜೆ 4ಕ್ಕೆ ಸಾಧಕರಿಗೆ ಸನ್ಮಾನ, ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ನಡೆಯಲಿವೆ. ಹುನಸಿಕೊಳ್ಳಮಠದಲ್ಲಿ ಪ್ರಧಾನ ಸಮಾರಂಭ ನಡೆಯಲಿದೆ. ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಂತರ ಉದ್ಘಾಟನಾ ಸಮಾರಂಭ, ಎರಡು ವಿಚಾರ ಗೋಷ್ಠಿಗಳು, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಗ್ರಾಮದಲ್ಲಿ ಎಲ್ಲೆಡೆ ಕನ್ನಡ ಧ್ವಜಗಳನ್ನು, ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್‌ಗಳು, ಫ್ಲೆಕ್ಸ್, ಕನ್ನಡದ ಭಾವುಟಗಳು, ಸ್ವಾಗತ ಕೋರುವ ಕಮಾನಗಳು, ಬಂಟಿಂಗ್ಸ್‌ಗಳ ಭರಾಟೆ ಕಂಡು ಬಂದಿದೆ. ಇಡೀ ಊರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಈ ಭಾಗದ ಕನ್ನಡದ ಮನೆ-ಮನಗಳಲ್ಲಿ ಈ ಸಮ್ಮೇಳನದ ಹಬ್ಬ ಸಂಭ್ರಮ ತಂದಿದೆ. ರಾಜ್ಯದ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಕನ್ನಡ ನುಡಿ ಜಾತ್ರೆ ಯಶಸ್ವಿಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಇನ್ನು ಕನ್ನಡ ನುಡಿ ಸಂಭ್ರಮ-12ರ ವಿಶೇಷ ಸಾಂಸ್ಕೃತಿಕ ಸಮಾರಂಭಕ್ಕೆ ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಪರೂಪದ ನಿರ್ಣಯ ಎನಿಸಿದೆ.
ಅಕ್ಷರ ಹಬ್ಬ ಸಾಕ್ಷಿಕರಿಸಲು ಮದುವಣಗಿತ್ತಿಯಂತೆ ಶೃಂಗಾರಗೊಂಡಿರುವ ಯಮಕನಮರಡಿ ಸಂಪೂರ್ಣ ಕನ್ನಡಮಯವಾಗಿದೆ. ಹುಣಸಿಕೊಳ್ಳಮಠದಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗಿದೆ. ಸಮಾರಂಭಕ್ಕೆ ಆಗಮಿಸುವ ಕನ್ನಡಾಭಿಮಾನಿಗಳ ಸಂಖ್ಯೆ ಅನುಸಾರ ಆಸನಗಳ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಬ್ಯಾನರ್-ಬಂಟಿಂಗ್ಸ್ ಮತ್ತು ಬಾವುಟಗಳು ರಾರಾಜಿಸುತ್ತಿವೆ. ಸಮಾರಂಭಕ್ಕೆ ಶುಭ ಹಾರೈಸುವ ಕಟೌಟ್‌ಗಳು, ಫ್ಲೆಕ್ಸ್, ಕನ್ನಡದ ಭಾವುಟಗಳು, ಸ್ವಾಗತ ಕೋರುವ ಕಮಾನಗಳು, ಬಂಟಿಂಗ್ಸ್‌ಗಳ ಭರಾಟೆ ಎಲ್ಲೆಡೆ ಕಂಡು ಬಂದಿದೆ.ಹುಕ್ಕೇರಿ ಕಸಾಪ ಸಕಲ ಸಿದ್ಧತೆ
ಯಮಕನಮರಡಿ ಗ್ರಾಮದಲ್ಲಿ ಫೆ.23ರಂದು ಹುಕ್ಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಿದ್ಧತಾ ಸಭೆ ನಡೆದಿದೆ. ಸಭೆಯಲ್ಲಿ ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ ಸಾಹಿತ್ಯ ಸಮ್ಮೇಳನ ವಿವರ ನೀಡಿದರೆ, ಹುಣಸಿಕೊಳ್ಳಮಠದ ಸಿದ್ದಬಸವ ದೇವರು, ಗಡಿಭಾಗದ ಮಠದಲ್ಲಿ ಕನ್ನಡ ಕಟ್ಟುವ ಕಾರ್ಯಕ್ರಮ ಮಾದರಿಯಾಗುವ ನಿಟ್ಟಿನಲ್ಲಿ ಎಲ್ಲರೂ ಸಹಕಾರದಿಂದ ಶ್ರಮಿಸಲಿ ಎಂದಿದ್ದಾರೆ.ಇನ್ನೂ ಸುದ್ದಿಗೋಷ್ಠಿಯಲ್ಲಿ ಯುವ ಧುರಿಣ ಕಿರಣಸಿಂಗ ರಜಪೂತ, ವೀರಣ್ಣ ಬಿಸಿರೊಟ್ಟಿ, ರವಿಂದ್ರ ಜಿಂದ್ರಾಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಎಂ.ಸಿ.ನಗಾರಿ, ಎಂ.ಎಸ್.ಮಲೋಳಿ, ಎ.ಎಸ್.ಅತ್ಯಾಳಿ, ಎಸ್.ಜಿ.ಹುನ್ನರಗಿ, ಸಿದ್ದಪ್ಪಾ ಶಿಳ್ಳಿ, ಗೋವಿಂದ ದೀಕ್ಷಿತ, ಎಸ್.ಬಿ.ಭೀಮಗೋಳ, ಶಿವಾನಂದ ಮಠಪತಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.