ಕನ್ನಡಪ್ರಭ ವಾರ್ತೆ ಮಹಾಲಿಂಗಪುರಅಕ್ಷಯ ತೃತೀಯಾ ಹಿಂದೂ ಮತ್ತು ಜೈನ ಧರ್ಮಿಯರಿಗೆ ಮಂಗಳಕರ ದಿನ. ವೈಶಾಖ ಮಾಸದ ಶುಕ್ಲ ಪಕ್ಷ ಮೂರನೇಯ ದಿನದಂದು ಹಬ್ಬ ಆಚರಿಸಲಾಗುತ್ತದೆ.ಈ ದಿನ ಖರೀದಿಸಿದ ಬಂಗಾರವು ಎಂದಿಗೂ ಅಕ್ಷಯವಾಗಿ ಉಳಿಯುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ ಎಂದು ಚಿಮ್ಮಡ ಪ್ರಭು ಸ್ವಾಮಿಗಳು ಹೇಳಿದರು.
ರನ್ನ ಬೆಳಗಲಿಯ ಮಹಾಲಕ್ಷ್ಮಿ ಪೆಟ್ರೋಲಿಯಂ ನಲ್ಲಿ ಆಯೋಜಿಸಿದ್ದ ಬಸವ ಜಯಂತಿ ಡ್ರಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಚನ್ನಬಸು ಹೊಸೂರ ಅವರ ಕಾರ್ಯ ಶ್ಲಾಘನಿಯವಾದುದು. ಗ್ರಾಹಕ ತನ್ನ ಬೈಕಿಗೆ ಪೆಟ್ರೋಲ್ ಹಾಕಿಸಿವುದೇ ದುಸ್ತರವಾಗಿದೆ. ಇಂದಿನ ದುಬಾರಿ ದುನಿಯಾದಲ್ಲಿ ಅದರಲ್ಲಿಯೂ ಒಬ್ಬ ಗ್ರಾಹಕ ಕನಿಷ್ಠ ₹ 300ಗೂ ಹೆಚ್ಚಿನ ಮೊತ್ತದ ಪೆಟ್ರೋಲ್ ಹಾಕಿಸಿದರೆ ಅವರಿಗೆ ಒಂದು ಕೂಪನ್ ಕೊಟ್ಟು ಡ್ರಾ ಎತ್ತುವ ಮೂಲಕ ಅದೃಷ್ಟಶಾಲಿ ವಿಜೇತರಿಗೆ ಆಕರ್ಷಕ ಬಹುಮಾನ ನೀಡುವ ಕಾರ್ಯ ಅವರ ಹೃದಯ ವೈಶಾಲ್ಯತೆಗೆ ಹಿಡಿದ ಕನ್ನಡಿಯಾಗಿದೆ. ಭಗವಂತ ಅವರಿಗೆ ಇನ್ನೂ ಹೆಚ್ಚೆಚ್ಚು ಇಂತಹ ಕೆಲಸ ಮಾಡುವ ಶಕ್ತಿ ಕೊಡಲಿ, ಅವರ ಜೀವನ ಅಕ್ಷಯವಾಗಲಿ ಎಂದು ಹಾರೈಸಿದರು.ಈ ಸಂಧರ್ಭದಲ್ಲಿ ವಿಜೇತರಿಗೆ ನಾಲ್ಕು ಸೈಕಲ್, ಒಂದು ಸ್ಕೂಟಿ ಹಾಗೂ ಒಂದು ಹೀರೊ ಬೈಕ್ ವಿತರಿಸಿದರು. ಪೂಜ್ಯರನ್ನು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಮಹಾಲಿಂಗಪ್ಪ ಶೇಗುಣಶಿ, ಅಜೀತ ಗೋನ್ಯಾಗೋಳ, ರಾಮನಗೌಡ ಪಾಟೀಲ, ಸತ್ಯಪ್ಪ ಸಿದ್ದಾಪೂರ, ಶಿವಾನಂದ ಗೌರನ್ನವರ, ನೀಲಕಂಠ ಸೈದಾಪುರ, ಕೃಷ್ಣಾ ಹಾರೂಗೇರಿ, ಬರಮಪ್ಪ ಹೋಸೂರ, ಪಾಂಡು ಸೈದಾಪುರ, ಈಶ್ವರ ಮುಗಳಖೋಡ, ರಾಮಣ್ಣ ಹುನ್ನೂರ, ಸತ್ಯಪ್ಪ ಹನಗಂಡಿ, ಮಾಹಾಂತೇಶ ಜೀರಗಾಳ ಸೇರಿದಂತೆ ಹಲವು ಗ್ರಾಮಗಳ ಗ್ರಾಹಕರು ಉಪಸ್ಥಿತರಿದ್ದರು. ಯೋಗ ಶಿಕ್ಷರಾದ ರಾಘವೇಂದ್ರ ನೀಲಣ್ಣವರ ನಿರೂಪಿಸಿ ವಂದಿಸಿದರು.