ಪುತ್ತೂರು:
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗ್ರಂಥಪಾಲಕ ರಾಮ ಕೆ, ಕಾರ್ಯಕ್ರಮವನ್ನು ಉದ್ಘಾಟಿಸಿ, A READING CAN CHANGE YOUR LIFE ವಿಷಯದ ಕುರಿತಾಗಿ ಮಾತನಾಡಿದರು. ಮನುಷ್ಯನ ಜೀವನ ಬದಲಾಗುವುದು ಅವನ ಯೋಚನೆಗಳಿಂದ ಮತ್ತು ಯೋಜನೆಗಳಿಂದ. ಒಳ್ಳೆಯ ಯೋಚನೆ ಬರಬೇಕಾದರೆ ನಮ್ಮಲ್ಲಿ ಜ್ಞಾನವಿರಬೇಕು. ಅದರ ಮೊದಲ ಹೆಜ್ಜೆಯೇ ಓದು ಎಂಬುದಾಗಿ ಹೇಳಿದರು. ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ನಿರಂತರವಾಗಿ ಬೆಳೆಸಿಕೊಳ್ಳಿ ಎಂಬುದಾಗಿ ಕರೆಯಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಅವರು ವಿದ್ಯಾರ್ಥಿಗಳು ಓದುವ ಅಭ್ಯಾಸ ಮೈಗೂಡಿಸಿಕೊಂಡು ಸಾಮಾಜಿಕ ಜಾಲತಾಣಗಳ ಬಳಕೆ ಮಿತವಾಗಿರಿಸಿ ಪುಸ್ತಕಗಳ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಅರ್ಪಿತ್ ಟಿ ಎ ಉಪಸ್ಥಿತರಿದ್ದರು. ಐ ಕ್ಯೂ ಎ ಸಿ ಸಂಯೋಜಕಿ ರಶ್ಮಿ ಕೆ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಯೋಜಕಿ ಪ್ರಭಾವತಿ ಕೆ , ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಬಗ್ಗೆ ಪ್ರಸ್ತಾವಿಸಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿತಾ ವಂದಿಸಿದರು. ದೇವಿಕಾ ಮತ್ತು ಸ್ವರ್ಣ ಪ್ರಾರ್ಥಿಸಿದರು . ರಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.