ಆಳಂದ: ಕನ್ನಡ ರಥಯಾತ್ರೆ ಸಂಭ್ರಮ

KannadaprabhaNewsNetwork |  
Published : Jan 12, 2024, 01:46 AM IST
ಚಿತ್ರ ಶೀರ್ಷಿಕೆ 11ಜಿಬಿ13ಆಳಂದ: ಬಸ್ ನಿಲ್ದಾಣ ಬಳಿ ಆಗಮಿಸಿದ್ದ ಕನ್ನಡ ರಥಯಾತ್ರೆಯಲ್ಲಿ ಕಲಾವಿದರು ಕನ್ನಡ ಗಾಯನಗಳಿಗೆ ನೃತ್ಯಕೈಗೊಂಡು ಗಮನ ಸೆಳೆದರು.  | Kannada Prabha

ಸಾರಾಂಶ

ಆಳಂದ ತಾಲೂಕಿಗೆ ಗುರುವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲೂಕು ಆಡಳಿತ ಪರ ತಹಸೀಲ್ದಾರ್‌ ಯಲ್ಲಪ್ಪ ಸುಬೇದಾರ ನೇತೃತ್ವದಲ್ಲಿ ಶಾಲಾ ಮಕ್ಕಳು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ನಾಗರಿಕರು ಕನ್ನಡ ಕಲಾವಿದರ ನೃತ್ಯ, ಡೊಳ್ಳು ಕುಣಿತ, ಕನ್ನಡ ಗೀತೆಗಳಿಗೆ ಹೆಜ್ಜೆಹಾಕುತ್ತಾ ಅದ್ಧೂರಿಯಾಗಿ ಬರಮಾಡಿಕೊಂಡು ಬೀಳ್ಕೊಟ್ಟರು.

ಕನ್ನಡಪ್ರಭ ವಾರ್ತೆ ಆಳಂದ

ಕರ್ನಾಟಕ ಸಂಭ್ರಮ ೫೦ರ ಜ್ಯೋತಿ ರಥ ಯಾತ್ರೆಯನ್ನು ತಾಲೂಕಿಗೆ ಗುರುವಾರ ತಾಲೂಕು ಆಡಳಿತ ಪರ ತಹಸೀಲ್ದಾರ್‌ ಯಲ್ಲಪ್ಪ ಸುಬೇದಾರ ನೇತೃತ್ವದಲ್ಲಿ ಶಾಲಾ ಮಕ್ಕಳು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ನಾಗರಿಕರು ಕನ್ನಡ ಕಲಾವಿದರ ನೃತ್ಯ, ಡೊಳ್ಳು ಕುಣಿತ, ಕನ್ನಡ ಗೀತೆಗಳಿಗೆ ಹೆಜ್ಜೆಹಾಕುತ್ತಾ ಅದ್ಧೂರಿಯಾಗಿ ಬರಮಾಡಿಕೊಂಡು ಬೀಳ್ಕೊಟ್ಟರು.

ಬೆಳಗಿನ ಜಾವ ಗಾಣಗಾಪೂರ ಸ್ಟೇಷನ್‌ಲ್ಲಿ ಆಳಂದ ತಾಲೂಕು ಆಡಳಿತಪರ ತಹಸೀಲ್ದಾರ್‌ ಯಲ್ಲಪ್ಪ ಸುಬೇದಾರ ನೇತೃತ್ವದಲ್ಲಿ ಕಸಾಪ ಅಧ್ಯಕ್ಷ ಹಣಮಂತ ಶೇರಿ, ಕರವೇ ಅಧ್ಯಕ್ಷ ಈರಣ್ಣಾ ಜಿ. ಆಳಂದ ಧಂಗಾಪೂರ, ಮುಖಂಡ ಮಲ್ಲಣ್ಣಾ ಶೇಗಜಿ, ಗ್ರಾಮ ಅಧಿಕಾರಿ ಪ್ರಭುಲಿಂಗ ತಟ್ಟಿ ಸೇರಿದಂತೆ ಅನೇಕರು ಒಳಗೊಂಡು ರಥವನ್ನು ಸ್ವಾಗತಿಸಿಕೊಂಡು ಮಾರ್ಗಮಧ್ಯದ ನಿಂಬರಗಾ, ಧಂಗಾಪೂರ, ಕೊರಳ್ಳಿ ಗ್ರಾಮಗಳಲ್ಲಿ ರಥವನ್ನು ಸ್ವಾಗತಿಸಿ ನೀರೆರದು ಪೂಜೆ ನೆರವೇರಿಸಿದ ನಾಗರಿಕರು ಮಾರ್ಲಾಪರ್ಣೆ ಕೈಗೊಂಡು ಬೀಳ್ಕೊಡುಗೆ ನೀಡಿದರು. ಬಳಿಕ ಆಗಮಿಸಿದ ಕನ್ನಡ ರಥವನ್ನು ಆಳಂದ ಪಟ್ಟಣಕ್ಕೆ ನಾಗರಿಕರು ಸ್ವಾಗತಿಸಿಕೊಂಡರು. ಮೊದಲು ದರ್ಗಾ ಚೌಕ್‌ನಿಂದ ಬಸ್ ನಿಲ್ದಾಣ, ರಜ್ವಿರೋಡ ಮಾರ್ಗವಾಗಿ ಹಳೆಯ ತಹಸೀಲ್ದಾರ ಕಚೇರಿ ವರೆಗೆ ಕನ್ನಡ ಜೇಂಕಾರದೊಂದಿಗೆ ಆಕರ್ಶಕ ಮೆರವಣಿಗೆ ನಡೆಯಿತು.

ಬಸ್ ನಿಲ್ದಾಣ ಬಳಿ ನಾಗರಿಕ ಮುಖಂಡ ರಮೇಶ ಲೋಹಾರ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ಕಣ್ಣಿ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಬಿಸಿಎಂ ಅಧಿಕಾರಿ ಸುನಿತಾ, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣಾಧಿಕಾರಿ ಅರವಿಂದ ಭಾಸಗಿ, ಅಂಗನವಾಡಿ ಸಂಘದ ಪುಷ್ಪಾವತಿ ಚಟ್ಟಿ, ಸರ್ಕಾರಿ ಕನ್ಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀಮಂತ ಹತ್ತಿ, ಸಿಆರ್‌ಪಿ ನಾಗನಾಥ ಅಲ್ಮದ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಣಪ್ಪ ಸಂಗನ ಸೇರಿ ಶಾಲಾ ಮಕ್ಕಳು ಪುಷ್ಪಮಾಲೆಹಾಕಿ ಸ್ವಾಗತಿಸಿದರು. ಸ್ವಾಗತಿಸಿಕೊಂಡು ಸಂಭ್ರಮಿಸುತ್ತಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಬಸ್ ನಿಲ್ದಾಣ ಬಳಿ ಅಂಗನವಾಡಿ ಕೆಲ ಕಾರ್ಯಕರ್ತೆಯರು ರಥಕ್ಕೆ ಆರತಿ ಬೆಳಗಿ ಸ್ವಾಗತಿಸಿ ಕನ್ನಡ ಗೀತೆಗಳಿಗೆ ನೃತವನ್ನು ಕೈಗೊಂಡು ಸಂಭ್ರಮಿಸಿದರು. ಕರವೇ ಅಧ್ಯಕ್ಷ ಈರಣ್ಣಾ ಜಿ. ಆಳಂದ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಅವರು ಮೆರವಣಿಗೆಯೂದ್ದಕ್ಕೂ ಕನ್ನಡ ಭಾವುಟ್ ಬಿಸಿ ಕನ್ನಡ ಹಾಡಿಗೆ ಕಲಾವಿದರೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಗಮನ ಸೆಳೆದರು. ಅಲ್ಲದೆ, ಕಲಬುರಗಿಯ ಅಕ್ಷಯ ಡ್ಯಾನ್ಸ್ಗ್ರೂಫ್ ಅಕ್ಷಯ ಯಾಕಪ್ಪ ಕಲಾತಂಡದ ಶರಣಮ್ಮಾ ಮಮಲರಗಾ, ಯಲ್ಲಪ್ಪ ಅನ್ನರೆಡ್ಡಿ, ಭವಾನಿ ಕವಲ್ದಾರ, ಅವಿನಾಶ ಭಜಂತ್ರಿ, ಗಂಗಾಮ್ಮ ಅನರೆಡ್ಡಿ ಸೇರಿ ಇನ್ನಿತರ ಕಲಾವಿದರು ಕನ್ನಡ ಗೀತೆಗಳಿಗೆ ಮೈಮರೆತು ಸಂಭ್ರಮಿಸಿ ನೃತ್ಯ ಗಮನ ಸೆಳೆಯಿತು. ಸುನಿಲ ಹಿರೋಳಿಕರ್ ಅನೇಕರು ಭಾಗವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ