ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆನಂದಮಯ ಆರೋಗ್ಯಧಾಮ ಆಯೋಜಿಸಿದ್ದ ‘ಆಕ್ವಾ ಸೌಂಡ್ ಮೆಡಿಟೇಶನ್’ ಕಾರ್‍ಯಕ್ರಮಕ್ಕೆ ದೊರೆತ ಅಪಾರ ಸ್ಪಂದನೆ ಹಿನ್ನೆಲೆಯಲ್ಲಿ ಎರಡನೇ ಅಧಿವೇಶನ ಶನಿವಾರದಂದು ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಈಜುಕೊಳದಲ್ಲಿ ನಡೆಯಿತು. ಆಕ್ವಾ ಸೌಂಡ್ ಮೆಡಿಟೇಶನ್‌ನಲ್ಲಿ ಪ್ರಾಚೀನ ಯೋಗಶಾಸ್ತ್ರ ಹಾಗೂ ಅನುಭವಾಧಾರಿತ ಚಿಕಿತ್ಸಾ ವಿಜ್ಞಾನವನ್ನು ಒಗ್ಗೂಡಿಸಿ ಭಾಗವಹಿಸುವವರಿಗೆ ನೀರಿನ ಮೇಲೆ ತೇಲುತ್ತಾ ಶಬ್ದ ಧ್ಯಾನವನ್ನು ಅನುಭವಿಸುವ ವಿನೂತನ ವ್ಯವಸ್ಥೆ ಮಾಡಲಾಗಿದೆ. ಈಜು ಬಾರದವರಿಗೂ ಸಂಪೂರ್ಣ ಸುರಕ್ಷಿತವಾಗಿರುವಂತೆ ಕಾರ್ಯಕ್ರಮ ರೂಪುಗೊಂಡಿದ್ದು, ಎಲ್ಲ ವಯೋಮನದವರಿಗೆ ಮುಕ್ತ ಅವಕಾಶವಿರಲಿದೆ. ಖ್ಯಾತ ಸೌಂಡ್ ಮೆಡಿಟೇಶನ್ ಫೆಸಿಲಿಟೇಟರ್ ಡಾ. ಗ್ರೀಷ್ಮಾ ವಿವೇಕ ಆಳ್ವ ಸೆಷನ್ ನಡೆಸಿಕೊಟ್ಟರು.
ಮುಂದಿನ ದಿನಗಳಲ್ಲಿ ಈ ಅಧಿವೇಶನ ನಿಯಮಿತವಾಗಿ ನಡೆಯಲಿದ್ಫು, ಸೀಮಿತ ಆಸನಗಳಿರುವುದರಿಂದ ಪೂರ್ವ ನೋಂದಣಿ ಕಡ್ಡಾಯವಾಗಿದೆ. ಆಸಕ್ತರು ನೋಂದಣಿ ಹಾಗೂ ಮಾಹಿತಿಗಾಗಿ 93805 36467 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.