ಸೆಪ್ಟೆಂಬರ್‌ 13ರಂದು ಮೇಲುಕೋಟೆಯಲ್ಲಿ ಮದ್ಯವರ್ಜನ ಶಿಬಿರ: ಸರೋಜ

KannadaprabhaNewsNetwork |  
Published : Aug 20, 2025, 01:30 AM IST
19ಕೆಎಂಎನ್ ಡಿ24 | Kannada Prabha

ಸಾರಾಂಶ

ಮದ್ಯವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತದೆ. ಕುಡಿತದ ಚಟದಿಂದ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಮದ್ಯವ್ಯಸನಿಗಳು ಯಾವುದೇ ಮುಜುಗರವಿಲ್ಲದೆ ಶಿಬಿರಾರ್ಥಿಗಳಾಗಿ ಭಾಗವಹಿಸಿ ದುಶ್ಚಟದಿಂದ ವಿಮುಖರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮೇಲುಕೋಟೆಯ ಬಿಜಿಎಸ್ ಕಲ್ಯಾಣ ಮಂಟಪದಲ್ಲಿ ಸೆ.13ರಂದು ಮದ್ಯವರ್ಜನ ಶಿಬಿರ ನಡೆಯಲಿದೆ.

ಶಿಬಿರದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಸರೋಜ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಶಿಬಿರವನ್ನು ಆಯೋಜನೆಗೊಳಿಸಲಾಗಿದೆ ಎಂದು ತಿಳಿಸಿದರು.

ಮದ್ಯವ್ಯಸನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತದೆ. ಕುಡಿತದ ಚಟದಿಂದ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಮದ್ಯವ್ಯಸನಿಗಳು ಯಾವುದೇ ಮುಜುಗರವಿಲ್ಲದೆ ಶಿಬಿರಾರ್ಥಿಗಳಾಗಿ ಭಾಗವಹಿಸಿ ದುಶ್ಚಟದಿಂದ ವಿಮುಖರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಬದಲಾವಣೆ ತರಲು ಮದ್ಯವರ್ಜನ ಶಿಬಿರಗಳು ಸಹಕಾರಿಯಾಗಿದೆ. ವ್ಯಸನಿಗಳ ಕುಟುಂಬಸ್ಥರು ಕೂಡ ತಮ್ಮ ಕುಟುಂಬದ ಸದಸ್ಯರು ವ್ಯಸನದಿಂದ ಮುಕ್ತರಾಗಲು ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ಜಿ.ಕೆ.ಕುಮಾರ್, ಮದ್ಯವರ್ಜನ ಶಿಬಿರದ ನಿರ್ದೇಶಕಿ ಮಮತ, ಎಸ್.ಎ.ಮಲ್ಲೇಶ್, ಅಶ್ವಥ್, ಸುಬ್ಬಣ್ಣ, ಈಶ ಮುರುಳಿ, ರವಿ, ಚಲುವೇಗೌಡ, ಪಟೇಲ್ ಜಯರಾಮು ಇತರರು ಇದ್ದರು.

ವರ್ಗಾವಣೆಗೊಂಡ ಕೃಷ್ಣಕುಮಾರ್‌ಗೆ ಆತ್ಮೀಯ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ ಮಂಡ್ಯ

ವರ್ಗಾವಣೆಯಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಉಪ ನಿರ್ದೇಶಕ ಪ್ರತೀಕ್ ಜಿ.ಹೆಗಡೆ ಅವರಿಗೆ ಸ್ವಾಗತ ಸಮಾರಂಭ ನಗರದ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿದ ಕೃಷ್ಣಕುಮಾರ್ ಮಾತನಾಡಿ, ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಪದಾಧಿಕಾರಿಗಳ ಸಹಕಾರದಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಪಡಿತರ ವಿತರಣೆಯಲ್ಲಿ ಇದ್ದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಲ್ಲಿ ನ್ಯಾಯಬೆಲೆ ಅಂಗಡಿಗಳವರು ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರಲ್ಲದೆ, ಹೊಸದಾಗಿ ಬಂದಿರುವ ಪ್ರತೀಕ್ ಜಿ. ಹೆಗಡೆ ಅವರಿಗೂ ಇದೇ ರೀತಿಯ ಸಹಕಾರ ನೀಡುವಂತೆ ಮನವಿ ಮಾಡಿದರು.

ನೂತನ ಜಂಟಿ ನಿರ್ದೇಶಕ ಪ್ರತೀಕ್ ಜಿ.ಹೆಗಡೆ ಮಾತನಾಡಿ, ನಾನು ಹೊಸದಾಗಿ ಬಂದಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಉತ್ತಮ ಸಹಕಾರ ನೀಡುತ್ತಾರೆಂಬ ಭರವಸೆ ವ್ಯಕ್ತಪಡಿಸಿದರಲ್ಲದೆ, ಕಾನೂನು ಚೌಕಟ್ಟಿನೊಳಗೆ ಸರ್ಕಾರದ ನಿಯಮಾನುಸಾರ ಎಲ್ಲರೂ ಕರ್ತವ್ಯ ಮಾಡೋಣ. ಎಂದಿನಂತೆ ಇಲಾಖೆಯೊಂದಿಗೆ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಹೇಳಿದರು.

ಇಲಾಖೆಯ ಉಪನಿರ್ದೇಶಕ ಶ್ರೆನಿವಾಸ್, ಇಲಾಖೆಯ ನಿರೀಕ್ಷಕ ರೇವಣ್ಣ, ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರು, ರಾಜಣ್ಣ, ಪ್ರಕಾಶ್, ನಿಂಗೇಗೌಡ ಸೇರಿದಂತೆ ಇತರರಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ