)
- ಕಾಡಾನೆ ಹಾವಳಿಗೆ ಸಿಗುವುದೇ ಪರಿಹಾರ?
ಕಾಡಾನೆಗಳ ಹಾವಳಿ, ಬೆಳೆ ನಾಶ, ಜೀವಹಾನಿ ಭೀತಿ ಹಾಗೂ ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶದಿಂದ ಕುದಿ ಯುತ್ತಿರುವ ಮಲೆನಾಡಿನ ಜನರ ಕಣ್ಣೀಗ ನ. 30ರ ಸೋಮವಾರ ವಿಧಾನಸೌಧದಲ್ಲಿ ನಡೆಯಲಿರುವ ಮಹತ್ವದ ಸಭೆಯತ್ತ ನೆಟ್ಟಿದೆ.
ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಾದರೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರದ ರೂಪುರೇಷೆ ಸಿದ್ಧವಾಗಲಿದೆಯೇ ಎಂಬ ನಿರೀಕ್ಷೆ ಇದೆ.ವರ್ಷಗಳಿಂದ ಕಾಡಾನೆಗಳ ಉಪಟಳಕ್ಕೆ ಸಿಲುಕಿ ಕೃಷಿ ನಷ್ಟ ಅನುಭವಿಸುತ್ತಿರುವ ರೈತರು ಹಾಗೂ ಜೀವಭಯದಲ್ಲಿರುವ ಗ್ರಾಮಸ್ಥರು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ 56 ಆನೆಗಳ ಪೈಕಿ ಎರಡು ಆನೆಗಳನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆ, ಉಳಿದ 54 ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಬಲವಂತವಾಗಿ ಸ್ಥಳಾಂತರ ಉದ್ದೇಶದಿಂದ ''''''''ಆಪರೇಷನ್ ಗಜ'''''''' ಕಾರ್ಯಾಚರಣೆ ಆರಂಭಿಸಿತ್ತು. ಇದರಿಂ ಕಾಡಾನೆಗಳ ಹಿಂಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಪ್ರವೇಶಿಸಿ ಹಲವು ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿತ್ತು.ಚಿಕ್ಕಮಗಳೂರು ಜಿಲ್ಲೆಯ ಶಾಸಕರ ಗಮನಕ್ಕೆ ತಾರದೆ ಕಾರ್ಯಾಚರಣೆ ನಡೆಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿ ಅರಣ್ಯ ಇಲಾಖೆಯ ಕ್ರಮ ಖಂಡಿಸಿ ಶಾಸಕರು ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜಪಾನ್ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಾಧಾನ ಪಡಿಸಿದ್ದರು. ನ.30ರಂದು ಸಭೆ ನಡೆಸಿ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದರು. ಅಲ್ಲದೆ, ಕಾಡಾನೆಗಳನ್ನು ಬಲವಂತವಾಗಿ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆಯೂ ಸೂಚಿಸಿದ್ದರು.ಈ ನಡುವೆ ಚಿಕ್ಕಮಗಳೂರು ಭಾಗಕ್ಕೆ ಬಂದಿದ್ದ ಕಾಡಾನೆಗಳ ಹಿಂಡು ಇದೀಗ ಮತ್ತೆ ಹಾಸನ ಜಿಲ್ಲೆ ಬೇಲೂರು ಭಾಗದತ್ತ ತೆರಳುತ್ತಿದೆ. ಹೀಗಾಗಿ, ಸೋಮವಾರದ ಸಭೆಯಲ್ಲಿ ಕಾಡಾನೆಗಳ ನಿರ್ವಹಣೆ, ಅವುಗಳ ಚಲನವಲನ ನಿಯಂತ್ರಣ ಹಾಗೂ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಹತ್ವದ ಚರ್ಚೆ ನಿರೀಕ್ಷೆಯಿದೆ.ಸಭೆಯಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಗಳು ಭಾಗವಹಿಸಲಿದ್ದಾರೆ.
ಬೆಳೆಹಾನಿ ಪರಿಹಾರಕ್ಕೂ ಒತ್ತಾಯ ಸಾಧ್ಯತೆ
ಹಾಸನ ಡಿಎಫ್‌ಒ, ಎಪಿಸಿಸಿಎಫ್ ವಿರುದ್ಧ ಕ್ರಮಕ್ಕೆ ಆಗ್ರಹ?
...ಬಾಕ್ಸ... ಸಭೆ ಬಹಿಷ್ಕರಿಸಲು ಡಾ.ಸಿ.ಟಿ.ರವಿ ನಿರ್ಧಾರಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿಗೆ ಆಗಮಿಸಿರುವ ಕಾಡಾನೆಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ದ್ವಂದ್ವ ನಿಲುವು ಖಂಡಿಸಿ, ನ.30ರಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜನಪ್ರತಿನಿಧಿಗಳ ಸಭೆ ಬಹಿಷ್ಕರಿಸಲು ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ನಿರ್ಧರಿಸಿದ್ದಾರೆ.ಈ ಕುರಿತು ಸಚಿವರಿಗೆ ಪತ್ರ ಬರೆದಿರುವ ಅವರು, ಆನೆ ಸ್ಥಳಾಂತರ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಸರ್ಕಾರ ಹೇಳಿ ದ್ದರೂ, ನ.26ರಂದು ಅರಣ್ಯ ಇಲಾಖೆ ‘ಆಪರೇಷನ್ ಗಜ’ ಕಾರ್ಯಾಚರಣೆಗೆ ಸಿಬ್ಬಂದಿ ನಿಯೋಜಿಸಿರುವುದು ಅನು ಮಾನ ಮೂಡಿಸಿದೆ. ಸರ್ಕಾರ ಪೂರ್ವನಿರ್ಧಾರ ಕೈಗೊಂಡು ನೆಪಮಾತ್ರಕ್ಕೆ ಸಭೆ ಕರೆದಿರುವಂತೆ ಕಾಣುತ್ತಿದ್ದು, ಇಂತಹ ಸಭೆ ಯಲ್ಲಿ ಭಾಗವಹಿಸಲ್ಲ ಎಂದು ತಿಳಿಸಿದ್ದಾರೆ.ಆನೆಗಳ ಸ್ಥಳಾಂತರದಿಂದ ಮತ್ತಷ್ಟು ಮಾನವ-ವನ್ಯಜೀವಿ ಸಂಘರ್ಷ ಸಾಧ್ಯತೆಯಿದೆ. ಆದ್ದರಿಂದ ಸ್ಥಳಾಂತರದ ಸಾಧಕ-ಬಾಧಕಗಳ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಬೇಕು. ಭದ್ರಾ ಅಭಯಾರಣ್ಯದ ಪರಿಸರದ ಮೇಲಿನ ಪರಿಣಾಮಗಳನ್ನೂ ವೈಜ್ಞಾನಿಕವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.ಕಾಡಾನೆಗಳಿಂದ ಉಂಟಾಗುವ ಜೀವಹಾನಿ, ಬೆಳೆಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ವಾಸ್ತವಿಕ ಪರಿಹಾರ ನೀಡಬೇಕು. ಆನೆ ಗಳ ಸಂರಕ್ಷಣೆ ಜತೆ ಜನರ ಬದುಕಿಗೂ ತೊಂದರೆಯಾಗದಂತೆ ಶಾಶ್ವತ ಪರಿಹಾರ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.