ಚನ್ನಪಟ್ಟಣ: ಪರಿಸರ ಉಳಿವು ಹಾಗೂ ಆರೋಗ್ಯ ಜಾಗೃತಿಗಾಗಿ ಅಸ್ಸಾಂ ರಾಜ್ಯದ ಯುವಕ ಅನುಪಮ್ ದಾಸ್ ಆಲ್ ಇಂಡಿಯಾ ಸೈಕಲ್ ಜಾಥಾ ಹೊರಟಿದ್ದು, ಶನಿವಾರ ತಾಲೂಕಿಗೆ ಆಗಮಿಸಿದ ಯುವಕನಿಗೆ ನಗರದ ಕಾವೇರಿ ಸರ್ಕಲ್‌ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಪ್ರಕೃತಿ ಉಳಿಸುವ ಜತೆಗೆ ಜನರ ಆರೋಗ್ಯ ಕುರಿತು ಕಾಳಜಿ ವಹಿಸಿ ಸಿರುವ ಯುವಕನ ಸಾಹಸ ಮೆಚ್ಚುವಂತದ್ದು. ತನ್ನ ಬದುಕಿಗಿಂತ ಜನಹಿತವೇ ಮುಖ್ಯ ಎಂದು ಭಾವಿಸಿ, ಭೂತಾಯಿ ಒಡಲು ರಕ್ಷಿಸುವ ನಿಟ್ಟಿನಲ್ಲಿ ಅನುಪಮ್ ದಾಸ್ ಕೈಗೊಂಡಿರುವ ಜಾಥಾ ಯಶಸ್ಸಾಗಲಿ ಎಂದು ಹಾರೈಸಿದರು.
ಈ ವೇಳೆ ಬಾಲು ಪಬ್ಲಿಕ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ವೆಂಕಟಸುಬ್ಬಯ್ಯ ಚೆಟ್ಟಿ, ಕಕಜವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಪೊಟೋ೨೩ಸಿಪಿಟಿ೩:ಪರಿಸರ,ಅರೋಗ್ಯ ಜಾಗೃತಿಗೆ ಸೈಕಲ್ ಜಾಥಾ ನಡೆಸಿರುವ ಯುವಕ ಅನುಮಪ್ ದಾಸ್‌ನನ್ನು ಕಕಜವೇ ಕಾರ್ಯಕರ್ತರು ಸ್ವಾಗತಿಸಿ ಸನ್ಮಾನಿಸಿದರು.