ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ ಸರ್ವ ಸದಸ್ಯರ ಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Sep 02, 2024, 02:01 AM IST
1ಕೆಎಂಎನ್ ಡಿ17 | Kannada Prabha

ಸಾರಾಂಶ

ಬ್ಯಾಂಕ್‌ನ ವ್ಯವಹಾರವು ಪೂರ್ತಿ ಗಣಕೀಕೃತವಾಗಿದೆ. 4 ಸಾವಿರಕ್ಕೂ ಹೆಚ್ಚು ಮಂದಿ ಷೇರುದಾರರಿದ್ದು, ಸಾಲ ಪಡೆದಿರುವ ಷೇರುದಾರರ ಮನೆ ಬಾಗಿಲಿಗೆ ಬ್ಯಾಂಕಿನ ಸಿಬ್ಬಂದಿ ತೆರಳಿ ಸಾಲ ವಸೂಲಿ ಮಾಡುವ ಜೊತೆಗೆ ಬ್ಯಾಂಕ್‌ನಲ್ಲಿ ವಹಿವಾಟು ಮಾಡಲು ಗ್ರಾಹಕರನ್ನು ಮನವೊಲಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ರೈತ ಸಭಾಂಗಣದಲ್ಲಿ ನಡೆದ ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ ಸರ್ವ ಸದಸ್ಯರ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಬ್ಯಾಂಕ್‌ನ ಅಧ್ಯಕ್ಷ ಸಿ.ಸುಂದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.85 ಹಾಗೂ ಅದಕ್ಕಿಂತ ಅಧಿಕ ಅಂಕಗಳಿಸಿ ಉತ್ತೀರ್ಣರಾದ, ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಅಧ್ಯಕ್ಷ ಸಿ.ಸುಂದರ, ಬ್ಯಾಂಕ್‌ನ ವ್ಯವಹಾರವು ಪೂರ್ತಿ ಗಣಕೀಕೃತವಾಗಿದೆ. 4 ಸಾವಿರಕ್ಕೂ ಹೆಚ್ಚು ಮಂದಿ ಷೇರುದಾರರಿದ್ದು, ಸಾಲ ಪಡೆದಿರುವ ಷೇರುದಾರರ ಮನೆ ಬಾಗಿಲಿಗೆ ಬ್ಯಾಂಕಿನ ಸಿಬ್ಬಂದಿ ತೆರಳಿ ಸಾಲ ವಸೂಲಿ ಮಾಡುವ ಜೊತೆಗೆ ಬ್ಯಾಂಕ್‌ನಲ್ಲಿ ವಹಿವಾಟು ಮಾಡಲು ಗ್ರಾಹಕರನ್ನು ಮನವೊಲಿಸುತ್ತಿದ್ದಾರೆ. 2023-24ನೇ ಸಾಲಿಗೆ ಬ್ಯಾಂಕ್ 2 ಲಕ್ಷ, 8 ಸಾವಿರದ 569 ರು. ಲಾಭಾಂಶ ಗಳಿಸಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಸತ್ಯ ಸಾವಿತ್ರಿ, ನಿರ್ದೇಶಕರಾದ ಎಚ್.ಅಶೋಕ, ತಿರುಮಲಚಾರಿ, ಎಚ್.ಎಸ್.ಚನ್ನಪ್ಪ, ಬಿ.ಡಿ. ಪುರುಷೋತ್ತಮ, ಸೋಮಶೇಖರ್ ಕೆರಗೋಡು, ವೃತ್ತಿಪರ ನಿರ್ದೇಶಕ ರಾಮಲಿಂಗೇಗೌಡ, ವ್ಯವಸ್ಥಾಪಕ ಜೆ.ಅಶೋಕ ಸೇರಿದಂತೆ ಮತ್ತಿತರರು ಹಾಜರಿದ್ದರು.ಶ್ರೀ ಅಘೋರ ಭದ್ರಕಾಳಿ ಶಕ್ತಿಪೀಠದಲ್ಲಿ ಪ್ರತ್ಯಂಗಿರಾ ಮಹಾಯಾಗ

ಹಲಗೂರು: ಮುತ್ತತ್ತಿ ರಸ್ತೆಯ ಭೀಮನದಿ ತೀರದಲ್ಲಿರುವ ಶ್ರೀಅಘೋರ ಭದ್ರಕಾಳಿ ಶಕ್ತಿಪೀಠದಲ್ಲಿ ಪ್ರತಿ ತಿಂಗಳ ಅಮಾವಾಸ್ಯೆಯಂದು ನಡೆಯುವ ತಂತ್ರೋಕ್ತ ಪ್ರತ್ಯಂಗಿರಾ ಮಹಾಯಾಗವು ಸೆ.2ರಂದು ಸಂಜೆ 6 ಗಂಟೆಗೆ ನೆರವೇರಲಿದೆ.

ಪ್ರಸ್ತುತ ಮಾಸದಿಂದ ಶ್ರೀ ಪೀಠದಲ್ಲಿ ಹಲವು ಬಗೆಯ ವಿಶೇಷ ಪೂಜೆಗಳು ನೆರವೇರುತ್ತಿದ್ದು, ತಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ದೇವಿಗೆ ಸೇವೆಯನ್ನು ಸಲ್ಲಿಸುವ ಮುಖಾಂತರ ತಮ್ಮೆಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ವಿಶೇಷವಾಗಿ ದೃಷ್ಟಿ ದೋಷ ನಿವಾರಣೆಗೆ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ ಭಕ್ತಾದಿಗಳು ಭಾಗವಹಿಸಿ ತಮ್ಮ ಉಷ್ಟಾರ್ಥವನ್ನು ನೆರವೇರಿಸಿಕೊಳ್ಳುವಂತೆ ವಿದ್ವಾಂಸ ಪ್ರಸಾದ್ ಮನವಿ ಮಾಡಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ