ಕನ್ನಡಪ್ರಭ ವಾರ್ತೆ ವಿಜಯಪುರ
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ನಮ್ಮ ಬೇಡಿಕೆಗಳನ್ನು ಒಂದು ವೇಳೆ ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ರೈತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಕೆಇಬಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರ ಪಂಪ್‌ಸೆಟ್‌ಗಳಿಗೆ ಸರ್ವಿಸ್ ಮೇನ್‌ಗಳಲ್ಲಿ ಬರುವ ಸ್ಥಾವರಗಳಿಗೆ ದಂಡವನ್ನು ತುಂಬಿಸಿಕೊಳ್ಳದೇ ಕೇವಲ ಮುಂಗಡ ಹಣವನ್ನು ತುಂಬಿಸಿಕೊಂಡು ವಿದ್ಯುತ್ ಸಂಪರ್ಕ ನೀಡಬೇಕು. ಶೀಘ್ರ ಸಂಪರ್ಕ ಯೋಜನೆಯ ಅಡಿಯಲ್ಲಿ ವಿದ್ಯುತ್ ಪರಿವೀಕ್ಷಕರು ₹3600 ರಿಂದ ₹10, 400 ರವರೆಗೆ ಜಾಸ್ತಿ ಮಾಡಿದ್ದು ಕೂಡಲೇ ಅದನ್ನು ಹಿಂಪಡೆಯಬೇಕು. ಸ್ಮಾರ್ಟ್ ಮೀಟರ್ ದರವನ್ನು ಪುನರ್ ಪರಿಶೀಲಿಸಿ ಕಡಿಮೆ ಮಾಡಬೇಕು. ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಮುಂಗಡ ಹಣವನ್ನು ಎರಡು ಪಟ್ಟು ತುಂಬಿಸಿಕೊಳ್ಳುತ್ತಿದ್ದು, ಮೊದಲಿನ ಹಾಗೆ ಯಥಾ ಸ್ಥಿತಿ ಮುಂದುವರೆಸಬೇಕು. ಎಎಸ್‌ಡಿ ಹಣವನ್ನು ಒಂದೇ ಕಂತಿನಲ್ಲಿ (₹48.101) ಹೆಡ್‌ನಲ್ಲಿ ತುಂಬಿಸಿಕೊಳ್ಳಬೇಕು. 1200 ಚದುರ ಅಡಿ ಮೇಲ್ಪಟ್ಟ ನಿವೇಶನಗಳಿಗೆ ಸೋಲಾರ್ ರಿಬೆಟ್ ನೀಡಬೇಕು. ಇಲ್ಲದಿದ್ದರೇ ಸೋಲಾರ್ ನಿಯಮಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್ ನಿಗಮಗಳು ನಷ್ಟ ಅನುಭವಿಸುತ್ತಿವೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ರೈತರ ಸುಟ್ಟ ಟಿಸಿ ಗಳನ್ನು 24 ಗಂಟೆಯೊಳಗೆ ರಿಪೇರಿ ಮಾಡಿ ಕೊಡುಬೇಕು. ವಿದ್ಯುತ್ ಸಂಪರ್ಕವನ್ನು ಎಲ್ಲ ಕಂಪನಿಗಳು ನೀಡಬೇಕು. ಇಲ್ಲವೇ ನೇರ ಸಂಪರ್ಕವನ್ನು ಹಾಕಿಕೊಳ್ಳಲು ಅನುಮತಿ ನೀಡಬೇಕು. ಹೆಸ್ಕಾಂ ಜಾಗೃತ ದಳದವರು ಇನ್ನು ಮೇಲಿಂದ ಯಾವುದೇ ಕೇಸ್‌ಗಳನ್ನು ಹಾಕಬಾರದೆಂದು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಟಗಿ, ಹರೀಶ ಕುಲಕರ್ಣಿ, ಬಸವರಾಜ ಬಸವರಾಜ ಕುರುಹಿನಶೆಟ್ಟಿ, ಭಜರಂಗ ಗುಂಡಯ್ಯ ಶಿಂಧೆ, ಸಂಜೀವ ಕುಮಾರ, ಗುರುನಾಥ ವಾಲಿಕರ, ಪ್ರೇಮಾನಂದ ಕೋಟ್ಯಾಳ, ಇಸ್ಮಾಯಿಲ್ ಸುತಾರ, ಗದಿಗೆಪ್ಪ ವಾಲಿಕಾರ, ಬಸವರಾಜ ಶಿವಣಗಿ, ಶಿವ ತೆಲಸಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.